Monday 25th, October 2021
canara news

ಸಂತ ಆಂತೋನಿ ಆಶ್ರಮದ ವತಿಯಿಂದ ಅರ್ಹರಿಗೆ ಆಹಾರ ಕಿಟ್ ವಿತರಣೆ

Published On : 14 Jun 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.13: ಇಂದಿಲ್ಲಿ (ಬಾನುವಾರ) ಮಂಗಳೂರು ಜೆಪ್ಪು ಇಲ್ಲಿನ ಸಂತ ಆಂತೋನಿ ಅವರ ಆಶ್ರಮದಲ್ಲಿ ವಾರ್ಷಿಕ ಹಬ್ಬ ಸಂಭ್ರಮಿಸಲಾಯಿತು. ಆ ಪ್ರಯುಕ್ತ ಸಂಜೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ (ಬಿಷಪ್) ಅತೀ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪತ್ರಕರ್ತರಿಗೆ ಮತ್ತು ಅರ್ಹರಿಗೆ ಆಹಾರ-ಧಾನ್ಯದ ಕಿಟ್ ವಿತರಿಸಿ ಹರಸಿದರು.

ಸ್ಟೇನ್ಲಿ ಬಂಟ್ವಾಳ್ (ಬಿಕರ್ಣಕಟ್ಟೆ) ಇವರು ಕಿಟ್ ವಿತರಣಾ ನೇತೃತ್ವ ವಹಿಸಿದ್ದರು. ಫಾ| ರೋಶನ್, ಡಿಕೆಕೆಡಬ್ಲೂ ್ಯ ಜೆಎಸ್ ಕೇಂದ್ರ ಸಮಿತಿ ಸದಸ್ಯ ಬಾಳ ಜಗನ್ನಾಥ್ ಶೆಟ್ಟಿ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದು ಜೆಪ್ಪು ಸಂತ ಆಂತೋನಿ ಆಶ್ರಮದ ನಿರ್ದೇಶಕ ರೆ| ಫಾ| ಒನಿಲ್ ಡಿಸೋಜ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here