Monday 25th, October 2021
canara news

ಜೈನ ಕಾಶಿ ಮೂಡುಬಿದಿರೆ ಮಠದಲ್ಲಿ ಶ್ರುತ ಪಂಚಮಿಯ ಆಚರಣೆ

Published On : 17 Jun 2021   |  Reported By : Rons Bantwal


ಶ್ರುತ ಎಂದರೆ ಜೈನ ಸಾಹಿತ್ಯ-ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ

ಮುಂಬಯಿ (ಆರ್‍ಬಿಐ), ಜೂ.16: ಪ್ರಪಂಚದ ಮಹೋನ್ನತ ಧರ್ಮಗಳ ಸಾಲಿನಲ್ಲಿ ಶಾಂತಿಯುತ ಸದ್ಗುಣ ಮೂರ್ತಿಯಾಗಿ ನಿಂತಿರುವಂತಹ ಪುರಾತನ ಶ್ರೇಷ್ಠ ಧರ್ಮ ಜೈನ ಧರ್ಮವಾಗಿದೆ. ಜೈನ ಧರ್ಮಕ್ಕೆ ತನ್ನದೇ ಆದ ಐತಿಹ್ಯವಿದ್ದು ಜೈನ ಪರಂಪರೆಯಲ್ಲಿ ಶಾಸ್ತ್ರದಾನಕ್ಕೆ ಮಹತ್ತರವಾದ ಸ್ಥಾನವಿದೆ. ಜೈನ ಧರ್ಮವನ್ನು ಪಾಲಿಸುವವರನ್ನು ಶ್ರಾವಕರು ಎಂದು ಕರೆಯಲಾಗುತ್ತದೆ. ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯವನ್ನು ಪಾಲಿಸಬೇಕಾದರೆ ಮೊದಲಾಗಿ ಶಾಸ್ತ್ರದ ಅರಿವು ಶ್ರಾವಕರಿಗಿರಬೇಕಾಗುತ್ತದೆ ಎಂದು ಜೈನ ಕಾಶಿ ಮೂಡುಬಿದಿರೆ ಇದರ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಿಳಿಸಿದರು.

ಕಳೆದ ಮಂಗಳವಾರ ಬೆಳಿಗ್ಗೆ ಮೂಡುಬಿದಿರೆ ಇಲ್ಲಿನ ಮೂಲ ಆಗಮ ಇರುವ ಗುರು ಬಸದಿ ಹಾಗೂ ಶ್ರೀ ಜೈನ ಮಠದಲ್ಲಿ ಭಗವಾನ್ ಶ್ರೀ 1008ಪಾರ್ಶ್ವನಾಥ ಸ್ವಾಮಿ ಶ್ರುತ, ಗಣಧರ ಅಭಿಷೇಕ ಪೂಜೆ 108 ದಿವ್ಯ ಸಾಗರ ಮುನಿರಾಜರ ಉಪಸ್ಥಿತಿಯಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಶ್ರುತ ಪಂಚಮಿಯ ನೆರವೇರಿಸಿ ಹರಸಿ ಪ್ರಪಂಚದ ಮಹೋನ್ನತ ಧರ್ಮಗಳ ಸಾಲಿನಲ್ಲಿ ಶಾಂತಿಯುತ ಸದ್ಗುಣ ಮೂರ್ತಿಯಾಗಿ ನಿಂತಿರುವಂತಹ ಪುರಾತನ ಶ್ರೇಷ್ಠ ಧರ್ಮ ಜೈನ ಧರ್ಮವಾಗಿದೆ. ಜೈನ ಧರ್ಮಕ್ಕೆ ತನ್ನದೇ ಆದ ಐತಿಹ್ಯವಿದ್ದು ಜೈನ ಪರಂಪರೆಯಲ್ಲಿ ಶಾಸ್ತ್ರದಾನಕ್ಕೆ ಮಹತ್ತರವಾದ ಸ್ಥಾನವಿದೆ. ಜೈನ ಧರ್ಮವನ್ನು ಪಾಲಿಸುವವರನ್ನು ಶ್ರಾವಕರು ಎಂದು ಕರೆಯಲಾಗುತ್ತದೆ. ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯವನ್ನು ಪಾಲಿಸಬೇಕಾದರೆ ಮೊದಲಾಗಿ ಶಾಸ್ತ್ರದ ಅರಿವು ಶ್ರಾವಕರಿಗಿರಬೇಕಾಗುತ್ತದೆ ಎಂದೂ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ತಿಳಿಸಿದರು.

ಮೈಸೂರು ಪದ್ಮಶ್ರೀ ಮಹಿಳಾ ಸಮಾಜ ಹಮ್ಮಿಕೊಂಡ ಪ್ರಾಕೃತ ಕಲಿಕಾ ಶಿಬಿರ ಆನ್ಲೈನ್ ಮೂಲಕ ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಪೂಜ್ಯ ಸ್ವಾಮೀಜಿಗಳು ಆಶೀರ್ವಾದ ನೀಡಿದರು. ಪ್ರಗ್ಯಾ ಶ್ರಮಣ್ ನೆಟವರ್ಕ್, ಶ್ರೀ ಅಧಿಸಗಾರ್ ಅಂಕಲಿಕರ್ ಬಳಗ ಉದಯ್ ಪುರ ರಾಜಸ್ಥಾನ್, ದೆಹಲಿಯ ಶ್ರೀ ದಿಗಂಬರ ಜೈನ ಸಭಾದ ಜಿನವಾಣಿ ಆನ್‍ಲೈನ್ ಪೂಜೆ, ಅಂತರಾಷ್ಟ್ರೀಯ ಜೈನ ಮಿಲನ್‍ಗಳ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಸ್ವಾಮೀಜಿ ಮೂಲ ಜೈನ ಪರಮ ಆಗಮಗಳ ದರ್ಶನ ಮಾಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ ಧರ್ಮ, ಸರಸ್ವತಿ ನಿರಂಜನ ಲಹರಿ ಓಂಶ್ರೀ, ಗಂಧ ಕುಟಿ ಬಳಗ ಮೊದಲಾದ ಫೇಸ್ಬುಕ್ ಪೇಜ್‍ಗಳಲ್ಲಿ ನೇರ ಅಂತರ್‍ಜಾಲ ಮೂಲಕ ಭಗವಂತರ ಅಭಿಷೇಕ,ಪೂಜೆ ಮತ್ತು ಶ್ರುತದೇವಿ ಶ್ರುತಸ್ಕಂದ ಸರಸ್ವತಿ ಮಾತೇಯ ಪೂಜೆ, ಅಷ್ಟವಾದಾನ, ಧರ್ಮ ಶಾಸ್ತ್ರಗ್ರಂಥಗಳ ಪೂಜೆ ಮಾಡಿ ಮಹಾ ಮಂಗಳಾರತಿ ಬೆಳಗಿ ಮಕ್ಕಳಿಗೆ ಅಕ್ಷರ ಅಭ್ಯಾಸ ತಟ್ಟೆಯಲ್ಲಿ ಅಕ್ಕಿ ಹಾಕಿ ಓಂಕಾರ ಬರೆದು ಮಂತ್ರ ಉಪದೇಶ ಧರ್ಮೋಪ ದೇಶದ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸ ಲಾಯಿತು.

ಆನ್‍ಲೈನ್ ಮೂಲಕ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದರು. ಜಯಶ್ರೀ ಹೊರನಾಡು ಭಕ್ತಿ ಗಾಯನ ನೆರವೇರಿದರು. ಕರ್ನಾಟಕದ ಸುಮಾರು 30 ಜನ ಸಾಧಕರನ್ನು ಆನ್‍ಲೈನ್ ಮೂಲಕ ಜಿನವಾಣಿ ಪುರಸ್ಕಾರ ನೀಡಿ ಗೌರವಿಸಿ ಹರಸಲಾಯಿತು ಹಾಗೂ ಲೇಖನ ಸ್ಪರ್ಧೆಯಲ್ಲಿ ಪಾಲ್ಗೊಂಡ ದೇಶದ 40 ಜನ ಅಭ್ಯಥಿರ್üಗಳಿಗೆ 108 ಅಮಿತ್ ಸಾಗರ ಮುನಿ ರಾಜರು ಆಶೀರ್ವಾದದೊಂದಿಗೆ ಶ್ರೀ ಮಠ ಮೂಡುಬಿದಿರೆಯ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಸಂಜೆ ನಡೆಸಲ್ಪಟ್ಟ ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪ್ರಾಚೀನ ಗ್ರಂಥ ಪ್ರದರ್ಶನ ನೆರವೇರಿತು.


ಸೀಮಿತ ಸಂಖ್ಯೆಯಲ್ಲಿ ಶ್ರೀ ಮಠದ ಶಿಷ್ಯವೃಂದದವರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ವೀಣಾ ರಘು ಚಂದ್ರ ವೃಂದಾ, ಮಂಜುಳಾ, ಅಭಯ ಚಂದ್ರ, ಶ್ವೇತಾ ಜೈನ್, ದಿವ್ಯಾ ಜೈನ್ ಭಾಗವಹಿಸಿದ್ದರು. ನಿರಂಜನ ಜೈನ ಕುದ್ಯಾಡಿ ಸ್ವಾಗತಿಸಿ ವಂದಿಸಿದರು.
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here