Friday 26th, April 2024
canara news

ಸುಮಂಗಲಾ ಕ್ರೆಡಿಟ್ ಸೊಸೈಟಿಯ ಸ್ಥಳಾಂತರಿತ ತುಂಬೆ ಶಾಖೆ ಉದ್ಘಾಟನೆ

Published On : 15 Jun 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.15: ಬಂಟ್ವಾಳ ತಾಲೂಕು ಪಾಣೆಮಂಗಳೂರು ಇಲ್ಲಿ ಕಾರ್ಯನಿರತ ಸುಮಂಗಲಾ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಇದರ ತುಂಬೆ ಶಾಖೆಯನ್ನು ಕಳೆದ ಸೋಮವಾರ ಸ್ವಂತ ಕೊಠಡಿಗೆ ಸ್ಥಳಾಂತರಗೊಳಿಸಿದ್ದು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಶಾಖೆಯನ್ನು ಸೇವಾರ್ಪಣೆಗೈದು ಶುಭ ಕೋರಿದರು.

ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಮಾತನಾಡಿ, ಸಂಘವು ರೂ 233 ಕೋಟಿ ವ್ಯವಹಾರ ನಡೆಸಿದ್ದು, ರೂ 1.41 ಕೋಟಿ ಲಾಭ ಗಳಿಸಿದೆ. ಒಟ್ಟು 2,314 ಮಂದಿ ಎ ತರಗತಿ ಸದಸ್ಯರಿದ್ದು, ರೂ 43.46 ಕೋಟಿ ಠೇವಣಿ ಸಹಿತ ರೂ 5.74 ಕೋಟಿ ಪಾಲು ಬಂಡವಾಳ, ರೂ 42 ಕೋಟಿ ಸಾಲ, ರೂ 3.40 ಕೋಟಿ ನಿಧಿ ಹೊಂದಿದೆ ಎಂದರು. ಮಂಗಳೂರು ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ಎಸ್. ವೆಂಕಟೇಶ್ ಶಾಖೆಯ ಭದ್ರತಾ ಕೊಠಡಿ ಉದ್ಘಾಟಿಸಿದರು.

ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಕೇಶವ ಮಳಲಿ, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ತಾರಾನಾಥ ಸುವರ್ಣ, ಬಂಟ್ವಾಳ ಬೂಡ ಸದಸ್ಯ ಸಚಿನ್ ಮೆಲ್ಕಾರ್, ಕರಾವಳಿ ಕ್ರೆಡಿಟ್ ಸೊಸೈಟಿ ನಿರ್ದೇಶಕ ನಾಗೇಶ್ ಪಾಣೆಮಂಗಳೂರು, ಅತ್ತಾವರ ಎಲ್ಲಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಸುಶೀಲ್ ಚಂದ್ರ, ಕಟ್ಟಡ ಮಾಲೀಕ ಕೆ.ಎಂ ನಝೀರ್, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಸುವರ್ಣ, ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಮೋನಪ್ಪ ಮಜಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಸಂಘದ ಮಾಜಿ ನಿರ್ದೇಶಕರಾದ ಜಯಾನಂದ ಪೆರಾಜೆ, ಮೋಹನ್ ಕೆ.ಶ್ರೀಯಾನ್ ರಾಯಿ, ಸಂಘದ ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ನಿರ್ದೇಶಕರಾದ ಕೃಷ್ಣಪ್ಪ ಗಾಣಿಗ, ಸದಾಶಿವ ಪುತ್ರನ್ ಜಕ್ರಿಬೆಟ್ಟು, ಸಂದೀಪ್ ಕುಮಾರ್ ಎಚ್., ಈಶ್ವರ್ ಮೆಲ್ಕಾರ್, ರವೀಂದ್ರ ಸಪಲ್ಯ ಬೋಳಂತೂರು, ದಾಮೋದರ ಸಪಲ್ಯ ನರಿಕೊಂಬು, ಶರತ್ ಹೆಚ್. ನರಿಕೊಂಬು, ಯಶೋಧ ಶಂಭೂರು, ಬಬಿತಾ ಸಚಿನ್ ಮೆಲ್ಕಾರ್, ಕಾರ್ಯನಿರ್ವಹಣಾಧಿಕಾರಿ ವಸಂತ ಪಿ. ಮತ್ತಿತರರು ಉಪಸ್ಥಿತರಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here