Friday 9th, May 2025
canara news

ಶ್ರೀ ಬ್ರಹ್ಮಬೈದರ್ಕಳ ಗರಡಿ ನಾವುಂದ ಸಮುದಾಯ ಭವನ-ಪದಾಧಿಕಾರಿಗಳ ಆಯ್ಕೆ

Published On : 26 Jun 2021   |  Reported By : Rons Bantwal


ಟ್ರಸ್ಟ್‍ನ ಮುಂಬಯಿ ಸಮಿತಿ ಅಧ್ಯಕ್ಷರಾಗಿ ಡಾ| ಎನ್.ಕೆ ಬಿಲ್ಲ

ಮುಂಬಯಿ (ಆರ್‍ಬಿಐ), ಜೂ.25: ಉಡುಪಿ ಕುಂದಾಪುರ ಇಲ್ಲಿನ ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಆವರಣದಲ್ಲಿ ಸರಕಾರದ ಅನುದಾನ ಮತ್ತು ದಾನಿಗಳ ನೆರವು ಪಡೆದು ನಿರ್ಮಿಸಲ್ಪಡುವ ವಿಶಾಲವಾದ ಸುಸಜ್ಜಿತವಾದ ಸಮುದಾಯ ಭವನ ಕುರಿತು ಕಳೆದ ಶನಿವಾರ ಆನ್‍ಲೈನ್ ವರ್ಚುವಲ್ ವೆಬ್‍ನಾರ್ (ಝೂಮ್) ಮೂಲಕ ಗರಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುತ್ತ ಬಿಲ್ಲವ ಕುದ್ರು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲ್ಪಟ್ಟಿತು.

ಟ್ರಸ್ಟ್‍ನ ಮುಂಬಯಿ ಸಮಿತಿ ಅಧ್ಯಕ್ಷ ಡಾ| ಎನ್.ಕೆ ಬಿಲ್ಲವ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮುದಾಯ ಭವನದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಆನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶೀನ ಪೂಜಾರಿ, ಜಗದೀಶ ಪೂಜಾರಿ ಹಕ್ಕಾಡಿ ಮುಂತಾದವರು ತಮ್ಮ ಸಲಹೆಗಳನ್ನು ನೀಡುವುದರ ಜೊತೆಗೆ ಯೋಜನೆಗೆ ಸಹಮತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣ ಸಮಿತಿಗೆ ಸದಸ್ಯರ ಆಯ್ಕೆಯನ್ನು ಮಾಡಲಾಯಿತು.

ಶ್ರೀ ಆನಂದ ಶೆಟ್ಟಿ (ಗೌರವ ಅಧ್ಯಕ್ಷರು), ಡಾ|| ಎನ್ ಕೆ ಬಿಲ್ಲವ (ಅಧ್ಯಕ್ಷರು), ಶ್ರೀ ಜಗದೀಶ ಪೂಜಾರಿ ಹಕ್ಕಾಡಿ (ಉಪಾಧ್ಯಕ್ಷರು), ಶ್ರೀ ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷರು), ಶ್ರೀ ಶೀನ ಪೂಜಾರಿ (ಉಪಾಧ್ಯಕ್ಷರು), ಶ್ರೀ ಶೇಖರ ಪೂಜಾರಿ (ಪ್ರಧಾನ ಕಾರ್ಯದರ್ಶಿ) ಶ್ರೀ ಪರಮೇಶ್ವರ ಪೂಜಾರಿ ಮತ್ತು ಶ್ರೀ ರಾಮಕೃಷ್ಣ ಬಿಲ್ಲವ (ಉಪ ಕಾರ್ಯದರ್ಶಿ), ಶ್ರೀ ಮುತ್ತ ಬಿಲ್ಲವ ಕುದ್ರು(ಖಜಾಂಚಿ) ಹಾಗೂ ಶ್ರೀ ಚಂದ್ರಶೇಖರ ಶೆಟ್ಟಿ (ಉಪಖಜಾಂಚಿ).

ಸಮಿತಿಯ ಸದಸ್ಯರಾಗಿ ಕುಶಾಲ್ ಶೆಟ್ಟಿ, ರಾಜೀವ ಶೆಟ್ಟಿ, ಸಂಜು ಪೂಜಾರಿ ಮಾವಿನಕೆರೆ, ಸೀತಾರಾಮ ಬಿಲ್ಲವ, ರಘು ಪೂಜಾರಿ ಬಿಇಎಸ್‍ಟಿ ಹಾಗೂ ನಾಗೇಶ ಪೂಜಾರಿ ಗರಡಿ ಮನೆ, ರಾಘವೇಂದ್ರ ಪೂಜಾರಿ, ವಸಂತ ಪೂಜಾರಿ, ಸತ್ಯವತಿ ಬಿಲ್ಲವ, ಬೇಬಿ ಪೂಜಾರಿ, ಸುರೇಶ ಪೂಜಾರಿ, ಸತೀಶ್ ಪೂಜಾರಿ ಆಯ್ಕೆ ಗೊಂಡರು.

ಗೌರವ ಸಲಹೆಗಾರರಾಗಿ ವೇ| ಮೂ| ರಾಘವೇಂದ್ರ ಕಾರಂತ್, ಬಾಬು ಬಿಲ್ಲವ, ಕೆ.ಪುಂಡಲೀಕ ನಾಯಕ್, ವಾಸ್ತು ಸಲಹೆಗಾರರನ್ನಾಗಿ ಪಂಡಿತ್ ನವೀನ್‍ಚಂದ್ರ ಆರ್.ಸನೀಲ್ ಅವರನ್ನು ಆಯ್ಕೆ ಮಾಡಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here