Friday 9th, May 2025
canara news

ಮಂಗಳೂರು : ನಾಟಕ ಕಲಾವಿದರಿಗೆ ದ.ಕ ಜಿಲ್ಲಾಡಳಿತದಿಂದ ಉಚಿತ ಲಸಿಕೆ

Published On : 26 Jun 2021   |  Reported By : Rons Bantwal


ಕಲಾವಿದರ ಒತ್ತಡದ ಜೀವನಕ್ಕೆ ಸ್ಪಂದನೆ ಅವಶ್ಯ - ಶಾಸಕ ವೇದವ್ಯಾಸ ಕಾಮತ್

ಮುಂಬಯಿ (ಆರ್‍ಬಿಐ), ಜೂ.25: ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ಇದರ ವತಿಯಿಂದ ನಾಟಕ ಕಲಾವಿದರಿಗೆ ಜಿಲ್ಲಾಡಳಿತದಿಂದ ಉಚಿತ ಲಸಿಕೆ ಶಿಬಿರ ಕಾರ್ಯಕ್ರಮ ಇಂದಿಲ್ಲಿ ಬುಧವಾರ ಬೆಳಿಗ್ಗೆ ಮಂಗಳೂರು ಕದ್ರಿ ಇಲ್ಲಿನ ಗೋಕುಲ್ ಸಭಾಂಗಣದಲ್ಲಿ ಜರುಗಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕ ಕಾಮತ್ ಮಾತನಾಡಿ ಜಿಲ್ಲೆಯ ನಾಟಕ ಕಲಾವಿದರು ಒತ್ತಡದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜನರಿಗೆ ಮನೋರಂಜನೆ ನೀಡುವ ಎಲ್ಲಾ ಕಲಾವಿದರಿಗೆ ಶುಭವಾಗಲಿ. ಕಲಾವಿದರನ್ನು ಗುರುತಿಸಿ ಅವರಿಗೂ ಆದ್ಯತೆಯ ಮೇಲೆ ಲಸಿಕೆ ನೀಡಬೇಕು ಎಂಬ ಮನವಿಯ ಮೇಲೆ ಜಿಲ್ಲಾಡಳಿತ ಇಂದು ಉಚಿತ ಲಸಿಕೆ ನೀಡುವ ಕೆಲಸ ನಡೆಯುತ್ತಿದೆ. ಇಂದು ಜಿಲ್ಲೆಯಲ್ಲಿ 20000 ಮಂದಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊರೋನಾ ವಾರಿಯರ್‍ಗಳನ್ನು ಗುರುತಿಸಿ ನಾನಾ ಸಂಸ್ಥೆಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೂಡಾ ಹಂತಹಂತವಾಗಿ ನೀಡಲಾಗುತ್ತಿದೆ. ಜಿಲ್ಲೆಯ ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಜಿಲ್ಲೆಯ ಪ್ರತೀ ಒಬ್ಬ 18 ವರ್ಷ ಮೇಲ್ಪಟ್ಟವರಿಗೆ ಮುಂದಿನ 2-3 ತಿಂಗಳ ಒಳಗೆ ಲಸಿಕೆ ನೀಡಲಾಗುತ್ತದೆ ಎಂದರು.

ಸಂಘಟನೆಯ ಕೋಶಾಧಿಕಾರಿ ಮೋಹನ್ ಕೊಪ್ಪಲ, ಕಾಪೆರ್Çರೇಟರ್ ಮನೋಹರ್ ಶೆಟ್ಟಿ ಕದ್ರಿ, ಹಿರಿಯ ರಂಗಕರ್ಮಿ ಲಕ್ಷ ್ಮಣ ಕುಮಾರ್ ಮಲ್ಲೂರು, ಒಕ್ಕೂಟದ ಅಧ್ಯಕ್ಷ ಲಕುಮಿ ಕಿಶೋರ್ ಶೆಟ್ಟಿ, ಪ್ರದೀಪ್ ಆಳ್ವ, ಸಂಘಟನ ಕಾರ್ಯದರ್ಶಿ ಮಧು ಕಲ್ಲಡ್ಕ, ಗೋಕುಲ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here