Monday 25th, October 2021
canara news

ಮೂಡುಬಿದಿರೆ ಜೈನ ಕಾಶಿ ಮಠದಲ್ಲಿ ವೈದ್ಯರ ದಿನಾಚರಣೆ-ಸನ್ಮಾನ

Published On : 03 Jul 2021   |  Reported By : Rons Bantwal


ವೈದ್ಯೋ ನಾರಾಯಣೋ ಹರಿ ಅಂದರೆ ವೈದ್ಯರು ದೇವರ ಮತ್ತೊಂದು ರೂಪ

ಮುಂಬಯಿ (ಆರ್‍ಬಿಐ), ಜು.01: ವೈದ್ಯರ ದಿನವಾದ ಇಂದಿಲ್ಲಿ ಗುರುವಾರ ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಮಠದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ವೈದ್ಯೋ ನಾರಾಯಣೋ ಹರಿ ಎಂದು ನಾಡಿನ ಸಮಸ್ತ ವೈದ್ಯರಿಗೆ ಶುಭಾಶಯ ಕೋರಿದರು.

ವೈದ್ಯರು ಉತ್ತಮ ಚಿಕಿತ್ಸೆ ನೀಡಿ ರೋಗಿಗಳಲ್ಲಿ ಆತ್ಮಸ್ಥೈರ್ಯ ನೀಡುವ ಕೆಲಸ ಮಾಡಿದ್ದು ಸಂಕಷ್ಟ ಪರಿಸ್ಥಿತಿಯಲ್ಲಿ ಕಳೆದ ಹಲವು ವಾರ ಸುಮಾರು 30ಕ್ಕೂ ಅಧಿಕ ಆಳ್ವಾಸ್ ಅರೋಗ್ಯ ಕೇಂದ್ರದ ವೈದ್ಯರು ಸ್ಥಳೀಯ, ಸುತ್ತಮುತ್ತಲ ಗ್ರಾಮಸ್ಥರಿಗೆ ಉಚಿತ ಔಷಧಿ ವಿತರಣೆ ಮಾಡಿ ಮಾದರಿ ಸೇವೆ ಸಲ್ಲಿಸಿದ್ದಾರೆ. ಅಂತೆಯೇ ಕನ್ನಡ ಸ್ಕೌಟ್ ಗೈಡ್ ಭವನದಲ್ಲಿ ಉಚಿತ ಸೇವೆ ನೀಡಿದ ಡಾ| ಎಂ.ಮೋಹನ್ ಆಳ್ವಾ ಅವರ ವೈದ್ಯಕೀಯ ಸಂಸ್ಥೆಯ ವೈದ್ಯರ ತಂಡದ ಕಾರ್ಯ ಪ್ರಶಂಶನಿಯ ಎಂದರು.
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here