Thursday 16th, September 2021
canara news

ಡಾ| ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‍ನಿಂದ ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನ

Published On : 05 Jul 2021   |  Reported By : Rons Bantwal


ಸಂಪತ್ತಿನ ಲಾಭ ಕಷ್ಟದಲ್ಲಿರುವ ಮಂದಿಗೆ ನೀಡುವುದೇ ಮನುಷ್ಯತ್ವ : ಇಶಾಕ್ ಫೈಝಿ

ಮುಂಬಯಿ (ಆರ್‍ಬಿಐ), ಜು.05: ಟ್ರಸ್ಟ್ ಮೂಲಕ ಬಡವರಿಗೆ ನೀಡುವ ಸಹಾಯಹಸ್ತದ ಕಾರ್ಯ ಶ್ಲಾಘನೀಯ, ದುಡಿದ ಸಂಪತ್ತಿನ ಲಾಭವನ್ನು ಕಷ್ಟದಲ್ಲಿರುವ ಮಂದಿಗೆ ನೀಡುವುದು ಮನುಷ್ಯತ್ವ, ಕೇಳಿದವರಿಗೆ ಕೇಳದವರಿಗೆ ದಾನ ನೀಡುವುದನ್ನು ತಿಳಿಸುವ ಧರ್ಮ ಇಸ್ಲಾಂ. ಇದರ ನಿರ್ದೇಶನದಲ್ಲಿ ಸಮಾಜದ ಒಳಿತಿಗೆ ಡಾ| ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಶ್ರಮಿಸುತ್ತಿದೆ ಎಂದು ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಇಶಾಕ್ ಫೈಝಿ ಹೇಳಿದರು.

ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಶನಿವಾರ ಡಾ| ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ದುಡಿದ ವೈದ್ಯರುಗಳಿಗೆ ಸನ್ಮಾನ, ವಿಶೇಷ ಚೇತನರಿಗೆ ವ್ಹೀಲ್ ಚೇರ್ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ರೇಷನ್ ಕಿಟ್ ಹಾಗೂ 2000 ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೈಝಿ ಮಾತನಾಡಿದರು.

ತಾ.ಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ ಕೊರೊನಾ ಸಂದಿಗ್ಧ ಸಂದರ್ಭ ಟ್ರಸ್ಟ್ ಹಮ್ಮಿಕೊಂಡ ಕಾರ್ಯ ಎಲ್ಲರೂ ಮೆಚ್ಚುವಂತದ್ದು. ಮುಂದಿನ ದಿನಗಳಲ್ಲಿ ಕಷ್ಟದಲ್ಲಿರುವವರಿಗೆ ಟ್ರಸ್ಟ್ ಸ್ಪಂಧಿಸುತ್ತಾ ಯಶಸ್ವಿ ಹಾದಿಯತ್ತ ಮುಂದುವರಿಯಲಿ ಎಂದರು.

ಟ್ರಸ್ಟೀ ಇಕ್ಬಾಲ್ ದೇರಳಕಟ್ಟೆ, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ನಾಟೆಕಲ್, ಮುಖಂಡರುಗಳಾದ ನಾಸಿರ್ ಸಾಮಾಣಿಗೆ, ಆಲ್ವಿನ್ ಡಿಸೋಜ, ಬೆಳ್ಮ ಗ್ರಾ.ಪಂ ಮಾಜಿ ಸದಸ್ಯ ಕಬೀರ್ ದೇರಳಕಟ್ಟೆ, ಯೂಸುಫ್ ಬಾವ, ಬೆಳ್ಮ ಗ್ರಾ.ಪಂ ಸದಸ್ಯರಾದ ಇಕ್ಬಾಲ್ ಎಚ್ ಆರ್, ಅಬ್ದುಲ್ಲಾ ರೆಂಜಾಡಿ, ಇಬ್ರಾಹಿಂ ಬದ್ಯಾರ್, ಹನೀಫ್ ಬದ್ಯಾರ್, ನಿಯಾಝ್ ಡಿ.ಎಂ, ನಾಸಿರ್ ಒಮೇರ, ಫಾರೂಕ್ ಸಿ.ಎಂ, ಹಮೀದ್ ಮುನ್ನೂರು, ಆರ್ ಅಹ್ಮದ್ ಶೇಟ್, ಅಹ್ಮದ್ ಬಾವ ಏಷಿಯನ್, ಸಿದ್ದೀಖ್ ಗ್ಲಾಡ್, ಇಸ್ಮಾಯಿಲ್ ಪನೀರ್, ಅಬ್ದುಲ್ ಖಾದರ್ ಐ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಡಾ| ಸುಬ್ರಹ್ಮಣ್ಯ ಭಟ್, ಡಾ| ಅಬೂಸಾಲಿ, ಡಾ| ಮುಕ್ತಾಫ್, ಡಾ| ಅಶ್ರಫ್, ಡಾ| ಕೆ.ಎಸ್ ಭಟ್, ಡಾ| ಝೈನುದ್ದೀನ್ ಇವರನ್ನು ಸನ್ಮಾನಿಸಲಾಯಿತು. ಶಫೀರ್ ಯು.ಎ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೌಫಲ್ ಬಿ ದೇರಳಕಟ್ಟೆ ವಂದಿಸಿದರು.
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್

Comment Here