Thursday 16th, September 2021
canara news

ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವೀಕ್ಷಿಸಿದ ಎಂಆರ್‍ಸಿಸಿ ಅಧ್ಯಕ್ಷ ಭಾಯ್ ಜಗ್ತಾಪ್

Published On : 25 Jul 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜು.24: ಮುಂಬಯಿ ಪ್ರಾದೇಶÀ ಕಾಂಗ್ರೆಸ್ ಸಮಿತಿಯ (ಎಂಆರ್‍ಸಿಸಿ) ಅಧ್ಯಕ್ಷ, ಮಹಾರಾಷ್ಟ್ರ ವಿಧಾನಸಭಾ ಶಾಸಕ, ಮಾಜಿ ಮಹಾರಾಷ್ಟ್ರ ವಿಧಾನ ಪರಿಷತ್ತು (ಎಂಎಲ್‍ಸಿ) ಸದಸ್ಯ ಭಾಯ್ ಜಗ್ತಾಪ್ (ಅಶೋಕ್ ಅರ್ಜುನ್‍ರಾವ್ ಜಗ್ತಾಪ್) ಕಳೆದ ಶುಕ್ರವಾರ ಮಂಗಳೂರು ನಗರಕ್ಕೆ ತೆರಳಿ ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿಗತಿಯನ್ನು ಸ್ವತಃ ತಿಳಿದುಕೊಂಡರು.

ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸಂಸದ, ಅಖಿಲ ಭಾರತೀಯ ಕಾಂಗ್ರೆಸ್ (ಐ) ಪಕ್ಷದ ಸಕ್ರೀಯ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಂಗಳೂರು ಅಲ್ಲಿನ ಯೆನೇಪೆÇಯಾ ಆಸ್ಪತೆಯಲ್ಲಿ ದಾಖಲಾಗಿದ್ದು ಅವರನ್ನು ಖುದ್ಧಾಗಿ ಕಾಣುವಲ್ಲಿ ಮಂಗಳೂರು ಭೇಟಿಗೈದ ಭಾಯ್ ಜಗ್ತಾಪ್ ಅವರನ್ನು ಕರ್ನಾಟಕ ರಾಜ್ಯ ಕಾಂಗ್ರೇಸ್ ಸಮಿತಿ ಸದಸ್ಯ ಡಾ| ರಾಜಶೇಖರ್ ಕೋಟ್ಯಾನ್ ಬರಮಾಡಿ ಕೊಂಡರು.

ಇಂದಿಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಕಾಂಗ್ರೇಸ್ (ಐ) ದ.ಕ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ತ್ ಸದಸ್ಯ ಕೆ.ಹರೀಶ್‍ಕುಮಾರ್, ಮಾಜಿ ಶಾಸಕ ಬಿ.ಎ ಮೊಯಿದ್ಧೀನ್ ಬಾವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ರಾಜೇಶ್ ಕೋಟ್ಯಾನ್ ಬಾಂದ್ರಾ ಮತ್ತಿತರÀರು ಉಪಸ್ಥಿತರಿದ್ದರು.

ಕೋಟ ಭಾವೀ ಮುಖ್ಯಮಂತ್ರಿ ಆಗಲಿ
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರೂ ಆಗಿರುವ ಡಾ| ರಾಜಶೇಖರ್ ಕೋಟ್ಯಾನ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ನಿಶ್ಚಿತವಾಗಿದ್ದು ಬಿಲ್ಲವ (ಈಡೀಗ) ಸಮುದಾಯದ ದಕ್ಷ ನಾಯಕ, ಪ್ರಾಮಾಣಿಕ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ರಾಜ್ಯದ ಭಾವೀ ಮುಖ್ಯಮಂತ್ರಿ ಮಾಡಬೇಕು ಎಂದು ಮಹಾ ಮಂಡಲದ ಪರವಾಗಿ ಆಡಳಿತರೂಢ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಧುರೀರಲ್ಲಿ ವಿನಂತಿಸುತ್ತಿದ್ದೇವೆ ಎಂದರು.

 
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್

Comment Here