Thursday 16th, September 2021
canara news

ನವಿ ಮುಂಬಯಿಯಲ್ಲಿ ಒಡಿಯೂರುಶ್ರೀ ಷಷ್ಠ ್ಯಬ್ದಿಯ ಜ್ಞಾನವಾಹಿನಿ-2021ರ 42ನೇ ಕಾರ್ಯಕ್ರಮ

Published On : 25 Jul 2021   |  Reported By : Rons Bantwal


ಭಾವೀ ಪೀಳಿಗೆಗೆ ಸಂಸ್ಕೃತಿ ಮೇಳೈಸುವ ಕಲೆ-ಸಾಹಿತ್ಯ ಅವಶ್ಯ-ಪೇಟೆಮನೆ ಪ್ರಕಾಶ್

ಮುಂಬಯಿ (ಆರ್‍ಬಿಐ), ಜು.24: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಶ್ರೀ ಗುರುದೇವಾನಂದ ಶ್ರೀಗಳ ಇಚ್ಛೆಯಂತೆ ಅವರ ಶಷ್ಠ್ಯಬ್ದಿ ಕಾರ್ಯಕ್ರಮವನ್ನು ಸರಳವಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಭಜನೆಗಳ ಮೂಲಕ ವರ್ಷಪೂರ್ತಿ ಆಚರಿಸುವುದು ನಮ್ಮ ಉದ್ದೇಶ. ಆದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಗ್ರಾಮಗಳಲ್ಲಿ ಈಗಾಗಲೇ ಅರ್ಥಪೂರ್ಣವಾಗಿ ಸಮಿತಿಯು ಅರವತ್ತರ ಸಂಭ್ರಮವನ್ನು ಆಚರಿಸುತ್ತಿದೆ. ಅಗತ್ಯ ಕಂಡ ಅರವತ್ತು ಕುಟುಂಬಗಳಿಗೆ ಸಹಾಯ ಹಸ್ತ ನೀಡಿದೆ. ಷಷ್ಠ ್ಯಬ್ದಿ ಆಚರಣೆಯ ಮುಂಬಯಿ ಸಮಿತಿಯು ಅದೇ ನಿಟ್ಟಿನಲ್ಲಿ ಮುಂದುವರೆದು ಸಂಸ್ಕೃತಿ ಮೇಳೈಸುವ ಕಲೆ-ಸಾಹಿತ್ಯ ಮುಂದಿನ ಪೀಳಿಗೆಗೆ ದಾಟಿಸುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾ, 42ನೇ ಕಾರ್ಯಕ್ರಮದ ಅಂಗವಾಗಿ ಆಧ್ಯಾತ್ಮದ ವಿಷಯವಾಗಿರುವ ಕವಿಗೋಷ್ಠಿಯನ್ನು ಆಯೋಜಿಸುತ್ತಿದ್ದೇವೆ ಎಂದು ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಪೇಟೆಮನೆ ಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು.

ನವಿ ಮುಂಬಯಿ ಕನ್ನಡ ಸಂಘದ ಸಹಯೋಗದಲ್ಲಿ, ಹಾಗೂ ಕನ್ನಡ ಕಲಾ ಕೇಂದ್ರದ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನವಿ ಮುಂಬಯಿ ಕನ್ನಡ ಸಂಘದ ದಿ| ಎಂ.ಬಿ.ಕುಕ್ಯಾನ್ ಸಭಾಗೃಹದಲ್ಲಿ ಜರುಗಿಸಲಾದ ಶ್ರೀಗಳ ಷಷ್ಠ್ಯಬ್ದಿ ಸಂಭ್ರಮಾಚರಣೆಯ `ಜ್ಞಾನವಾಹಿನಿ-2021'ರ 42ನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೇಟೆಮೆನೆ ಮಾತನಾಡಿದರು.

ಅತಿಥಿü ಆಗಿದ್ದ ಜಗದೀಶ್ ಶೆಟ್ಟಿ ಪನ್ವೆಲ್ ಮಾತನಾಡಿ ಈಗಾಗಲೆ ಭಜನೆ, 15- ತಾಳಮದ್ದಲೆ, 1-ಕವಿ ಗೋಷ್ಠಿ, 9- ಸಹಸ್ರನಾಮ, 3- ಹರಿಕಥೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾಮೀಜಿಯವರ ಷಷ್ಠ ್ಯಬ್ದಿ ಕಾರ್ಯಕ್ರಮಕ್ಕೆ ಶೋಭೆ ತಂದಿದೆ ಎಂದರು.

ಇನ್ನೋರ್ವ ಅತಿಥಿü ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ.ಆರ್. ಮಾತನಾಡುತ್ತಾ, ಕಳೆದ ಒಂದೆರಡು ವರ್ಷಗಳಿಂದ ಕೇವಲ ಶೋಕ ಸಭೆಗಳಲ್ಲಿ ಭಾಗವಹಿಸಿ ಮನಸ್ಸನ್ನು ಭಾರವಾಗಿಸುತ್ತಿರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಆಶಾದಾಯಕ ಎಂದು ಶುಭ ಹಾರೈಸಿದರು.

ಸಾನ್ವಿ ಜೆ.ರೈ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಎಂ.ವಿ.ಎಂ. ಕಾಲೇಜ್‍ನ ಪ್ರಾಂಶುಪಾಲ ಡಾ| ಗೋಪಾಲ್ ಕಲ್ಕೋಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿüಗಳಾಗಿ ಗೋಪಾಲ ತ್ರಾಸಿ, ಬಿ.ಎಚ್.ಕಟ್ಟಿ, ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ಸಂಚಾಲಕ ದಾಮೋದರ್ ಶೆಟ್ಟಿ, ನವಿ ಮುಂಬಯಿ ಕನ್ನಡ ಸಂಘದ ಗೌ ಕಾರ್ಯದರ್ಶಿ ಜಗದೀಶ್ ಡಿ ರೈ, ಜಯ ಶೆಟ್ಟಿ, ಸ್ವರ್ಣಲತಾ ಡಿ. ಶೆಟ್ಟಿ ಉಪಸ್ಥಿತರಿದ್ದರು.

ಒಡಿಯೂರು ಸಮಿತಿಯ ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ನ್ಯಾ| ಪ್ರಕಾಶ್ ಎಲ್.ಶೆಟ್ಟಿ, ವಿ.ಕೆ ಸುವರ್ಣ, ಅನಿಲ್ ಕುಮಾರ್ ಹೆಗ್ಡೆ ಹಾಗೂ ಸಾಹಿತ್ಯಾಸಕ್ತರು ಮತ್ತು ಸ್ವಾಮಿಗಳ ಭಕ್ತರು ಉಪಸ್ಥಿತರಿದ್ದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್

Comment Here