Friday 9th, May 2025
canara news

ಇಂಡಿಯನ್ ಎಂಪಾಯರ್ ಯುನಿವರ್ಸಿಟಿ-ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನ

Published On : 25 Jul 2021   |  Reported By : Rons Bantwal


ಗೌರವ ಡಾಕ್ಟರೇಟ್ ಮುಡಿಗೇರಿಸಿದ ಹರೀಶ್ ಪೂಜಾರಿ ಕಾರ್ಕಳ

ಮುಂಬಯಿ (ಆರ್‍ಬಿಐ), ಜು.24: ಇಂಡಿಯನ್ ಎಂಪಾಯರ್ ಯುನಿವರ್ಸಿಟಿ ಮತ್ತು ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್ ಜಂಟಿಯಾಗಿ ಪ್ರದಾನಿಸಿದ ಡಾಕ್ಟರೇಟ್ ಗೌರವಕ್ಕೆ ನವಿಮುಂಬಯಿ ಇಲ್ಲಿಯ ನೆರೂಳ್ ನಿವಾಸಿ ಸಮಾಜ ಸೇವಕ ಹರೀಶ್ ಪೂಜಾರಿ ಭಾಜನರಾಗಿದ್ದಾರೆ. ಹರೀಶ್ ಮಾಡಿದ ಸಮಾಜ ಸೇವೆ ಗುರುತಿಸಿ ಈ ಗೌರವ ಪ್ರದಾನಿಸಲಾಗಿದೆ.

ಇಂದಿಲ್ಲಿ ಶುಕ್ರವಾರ ಬೆಂಗಳೂರು ಹೊಸುರು ಅಲ್ಲಿರುವ ಕ್ರಿಸ್ಟಲ್ ಪಂಚತಾರಾ ಹೊಟೇಲು ಸಭಾಗೃಹದಲ್ಲಿ ನೆರವೇರಿದ ಗೌರವ ಪ್ರದಾನ ಸಮಾರಂಭದಲ್ಲಿ ಇಂಡಿಯನ್ ಎಂಪಾಯರ್ ಯುನಿವರ್ಸಿಟಿ ಅಧ್ಯಕ್ಷ ಡಾ| ಕೆ. ಪ್ರಭಾಕರ, ಯುನಿವರ್ಶಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನ ಅಧ್ಯಕ್ಷ ಡಾ| ಪೌಲ್ ಇಮನುಜಾರ್ ಸಮ್ಮುಖದಲ್ಲಿ ಅತಿಥಿü ಅಭ್ಯಾಗತರುಗಳಾಗಿದ್ದ ಆಂಧ್ರಪ್ರದೇಶದ ಚಿತ್ತೂರು ಕಾಳಹಸ್ತಿ ಸಬ್ ಕೋರ್ಟ್‍ನ ಉಪಜಡ್ಜ್ ಡಾ| ಜೆ. ಹರಿದೋಶ್, ತಮಿಳುನಾಡು ಉಪ ಪೆÇಲೀಸ್ ಆಯುಕ್ತ ಡಾ| ಆರ್.ಶಿವಕುಮಾರ್ (IPS), ಮಾಜಿ ಶಾಸಕ ಡಾ| ಕೆ.ಎ ಮನೋಹರನ್ ಉಪಸ್ಥಿತರಿದ್ದು ಗೌರವ ಪ್ರದಾನಿಸಿ ಅಭಿನಂದಿಸಿದರು.

 

ಹರೀಶ್ ಪೂಜರಿ ಮೂಲತಃ ಕಾರ್ಕಳ ಪೆರ್ವಾಜೆ ಸುಂದರ ಪೂಜಾರಿ ಮತ್ತು ಕಾರ್ಕಳದ ನಕ್ರೆ ಪೆತ್ತಾಜೆಯ ಸಂಜೀವಿ ಪೂಜಾರಿ ದಂಪತಿ ಪುತ್ರರಾಗಿರುವರು. ಮುಂಬಯಿ, ನವಿಮುಂಬಯಿಯ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ತನ್ನಿಂದಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಇತ್ತೀಚೆಗೆಯಷ್ಟೆ ಡಿ.ಪಿ ವರ್ಲ್ಡ್ ನವಾಸೇವಾ ಇಂಟರನೇಶನಲ್ ಬಹು ಅಂತಾರಾಷ್ಟ್ರೀಯ ಕಂಪನಿಯಲ್ಲಿ ಸತತ 21 ವರ್ಷ ಉನ್ನತ ಅಧಿಕಾರಿಯಾಗಿ ಸುದೀರ್ಘ ಸೇವೆ ಮಾಡಿ ನಿವೃತ್ತಿ ಹೊಂದಿದ್ದಾರೆ.

ಕ್ಯಾಂಟಿನ್‍ನಲ್ಲಿ ಕೆಲಸ ಮಾಡಿ ಮದರ್ ಇಂಡಿಯಾ ಧರ್ಮಾರ್ಥಾ ರಾತ್ರಿ ಶಾಲಾ ಹಳೆ ಕಲಿತ ಹರೀಶ್ ಪೂಜಾರಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆ ಸಂಘ ಮಾಹಾರಾಷ್ಟ್ರ, ಸೆಲ್ಯೂಟ್ ತಿರಂಗ, ಕರ್ನಾಟಕ ಘಟಕ ಮಾಹಾರಾಷ್ಟ್ರ, ಬಿಜೆಪಿ ದಕ್ಷಿಣ ಭಾರತ ಘಟಕ ನವಿಮುಂಬಯಿ, ವಿಶ್ವ ಮಾನವಧಿಕಾರ ಸಂಸ್ಥೆ ನವಿಮುಂಬಯಿ, ಗ್ರಾಹಕರ ಉಪಬೋಕ್ತ ಸಮಿತಿ ನವಿಮುಂಬಯಿ ಅಧ್ಯಕ್ಷರಾಗಿ, ಶ್ರೀ ಶಬರಿಮಲೆ ಅಯ್ಯಪ್ಪ ಸೇವಾಸಂಗಮ್ ನವಿಮುಂಬಯಿ ಇದರ ಉಪಾಧ್ಯಕ್ಷರಗಿ, ಬಿಲ್ಲವರ ಅಸೋಸಿಯೇಶನ್ ಇದರ ನವಿಮುಂಬಯಿ ಸ್ಥಳೀಯ ಸಮಿತಿ ಆಡಳಿತ ಸಮಿತಿ ಸದಸ್ಯರಗಿ, ಜನತಾ ಶಿಕ್ಷಣ ಸಂಘ ಮತ್ತು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲಾ ಹಳೆ ವಿದ್ಯಾಥಿರ್ü ಸಂಘ ಮುಂಬಯಿ, ರಂಗಭೂಮಿ ಫೈನ ಅರ್ಟ್ಸ್ ನವಿಮುಂಬಯಿ ಹಾಗೂ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here