Friday 9th, May 2025
canara news

ಸ್ವಸಮುದಾಯದ ಐಕ್ಯತೆಯೇ ಸಂಘದ ಉದ್ದೇಶ : ದಯಾನಂದ ಬೋಂಟ್ರಾ

Published On : 28 Jul 2021   |  Reported By : Rons Bantwal


ಬರೋಡಾದಲ್ಲಿ 9ನೇ ಮಹಾಸಭೆ ಪೂರೈಸಿದ ಗುಜರಾತ್ ಬಿಲ್ಲವ ಸಂಘ

ಮುಂಬಯಿ (ಆರ್‍ಬಿಐ), ಜು.28: ಸ್ವಸಮುದಾಯದ ಐಕ್ಯತೆಯೇ ಸಂಘದ ಉದ್ದೇಶವಾಗಿದೆ. ಸಂಘಟಿತರಾ ದಲ್ಲಿ ಮಾತ್ರ ಸಮುದಾಯದ ಮನ್ನಡೆ ಸಾಧ್ಯವಾಗುವುದು. ಆದ್ದರಿಂದ ಸಾಂಘಿಕತೆಯಲ್ಲಿ ಆತ್ಮವಿಶ್ವಾಸ ಬಲಗೊಳಿಸಬೇಕು. ಅವಾಗಲೇ ನಮ್ಮೆಲ್ಲರ ಉದ್ದೇಶ, ಸಮಾಜ ಸೇವೆ ಸಾರ್ಥಕವಾಗುವುದು. ಸಮಾಜದ ಜನತೆ ನಮಗೆ ಒದಗಿಸಿದ ಸೇವಾ ಅವಕಾಶವನ್ನು ನಾವು ಪ್ರಾಮಾಣಿಕವಾಗಿ ನಿಭಾಯಿಸಿ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಇಲ್ಲಿನ ಯಾವುದೇ ಸ್ಥಾನಗಳು ಶಾಸ್ವತವಲ್ಲ. ಯಾರೂ ಇದನ್ನು ಸ್ಪರ್ಧೆಯಾಗಿ ಪರಿಗಣಿಸದೆ ಸಮುದಾಯದ ಏಕತೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಪ್ರದರ್ಶಿಸಿಸಬೇಕು ಎಂದು ಗುಜರಾತ್ ಬಿಲ್ಲವರ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ (ಬೆಳಣ್ಣು-ಕಾರ್ಕಳ) ತಿಳಿಸಿದರು.

ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಕಳೆದ ಆದಿತ್ಯವಾರ ಗುಜರಾತ್ ಬಿಲ್ಲವ ಸಂಘದ 9ನೇ ಮಹಾಸಭೆಯ ನಡೆಸಲ್ಪಟ್ಟಿದ್ದು ಪದಾಧಿಕಾರಿಗಳನ್ನೊಳಗೊಂಡು ದಯಾನಂದ ಬೋಂಟ್ರಾ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನಿತ್ತು ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಭಾ ಕಲಾಪ ನಡೆಸುತ್ತಾ ಮಾತನಾಡಿದರು.

ಆರಂಭದಲ್ಲಿ ಸಂಘದ ಮಂದಿರದಲ್ಲಿ ಪ್ರತಿಷ್ಠಾಪಿತ ಕುಲಗುರು ಕೋಟಿ-ಚೆನ್ನಯರು, ಕುಲದೇವತೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು, ಮಾತೆ ಗಾಯತ್ರಿದೇವಿಗೆ ಆರತಿ ಬೆಳಗಿಸಿ ವಿಧ್ಯುಕ್ತವಾಗಿ ಸಭೆಗೆ ಚಾಲನೆ ನೀಡಲಾಯಿತು.

ಮನೋಜ್ ಸಿ.ಪೂಜಾರಿ ಮಾತನಾಡಿ ಬಿಲ್ಲವ ಸಮುದಾಯದ ಜನತೆಯಲ್ಲಿ ಏಕತೆ ಅವಶ್ಯವಿದ್ದು ಇಂತಹ ಮಹಾತ್ವಕಾಂಕ್ಷೆಯ ಜೊತೆಗೆ ಚೇತೋಹಾರಿ ಶಕ್ತಿಗಳಾಗಿರುವ ಯುವ ಜನತೆಯ ಸಾಂಘಿಕತೆಯನ್ನು ರೂಪಿಸುವಲ್ಲಿ ಸಂಘವು ಶ್ರಮಿಸಬೇಕು. ನಮ್ಮಲ್ಲಿನ ನಾರಿಶಕ್ತಿ ಮತ್ತು ಯುವಶಕ್ತಿಯನ್ನು ಪೆÇ್ರೀತ್ಸಾಹಿಸಿ ಬೆಂಬಲಿಸಿದ್ದಲ್ಲಿ ಸ್ವಮಾಜ್ ತನ್ನಷ್ಟಕ್ಕೆ ಸದೃಢಗೊಳ್ಳುವುದು. ನನಗೆ ಒದಗಿದ ಸ್ಥಾನಮಾನದಿಂದ ಪ್ರಾಮಾಣಿಕವಾಗಿ ಶ್ರಮಿಸಿದ ತೃಪ್ತಿ ನಮಗಿದೆ ಎಂದರು.

ನಾವು ಕರ್ಮಭೂಮಿಯಲ್ಲಿ ಸಮುದಾಯದ ಹೆಸರಲ್ಲಿ ಒಗ್ಗೂಡಿದವರು. ಆದ್ದರಿಂದ ಒಗ್ಗೂಡುವಿಕೆಯೊಂದಿಗೆ ಸಮಾಜದ ಪರಂಪರಿಕಾಧಾರಿತ ಸಂಸ್ಕೃತಿಯೊಂದಿಗೆ ಮುನ್ನಡೆಯುವ ಪ್ರಯತ್ನಕ್ಕೆ ಮೊದಲ ಆದ್ಯತೆ ನೀಡಬೇಕು. ಸೇವೆ ಮೂಲಕ ಏಕತೆಯನ್ನು ಸಿದ್ಧಿಸಬೇಕಾಗಿದೆ. ನಾವೆಲ್ಲರೂ ನಿಜವಾದ ಸಾಮಾಜಿಕ ಕಳಕಳಿಯುಳ್ಳವರೇ ಆಗಿದ್ದು ಸ್ವಸಮಾಜದÀ ಸಂಘಟನೆಗಾಗಿ ಸ್ವಾರ್ಥ ಮರೆತು ಭಗವತ್ವಜ್ಞೆ ಸದಾಚಾರವಾಗಿಸಿ ಮುನ್ನಡೆಯೋಣ ಎಂದು ವಿಶ್ವನಾಥ್ ಜಿ.ಪೂಜಾರಿ ತಿಳಿಸಿದರು.

ಸಭೆಯಲ್ಲಿ 2021-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಜಿ.ಪೂಜಾರಿ ಬಾಡೋಳಿ (ಸೂರತ್) ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ದಯಾನಂದ ಬೋಂಟ್ರಾ (ಗೌರವಾಧ್ಯಕ್ಷರು), ಮನೋಜ್ ಸಿ.ಪೂಜಾರಿ (ನಿಕಟಪೂರ್ವ ಅಧ್ಯಕ್ಷ), ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಅಧ್ಯಕ್ಷರು), ವಾಸು ವಿ.ಸುವರ್ಣ (ಪ್ರಧಾನ ಕಾರ್ಯದರ್ಶಿ), ಸುದೇಶ್ ವೈ.ಕೋಟ್ಯಾನ್ (ಗೌರವ ಕೋಶಾಧಿಕಾರಿ), ಲಕ್ಷ ್ಮಣ್ ಪೂಜಾರಿ ಬರೋಡಾ, ವಿ.ಡಿ ಅವಿೂನ್ ಅಹ್ಮದಾಬಾದ್, ಸದಾಶಿವ ಪೂಜಾರಿ ವಾಪಿ-ವಲ್ಸಾಡ್, ಹರೀಶ್ ಪೂಜಾರಿ ಅಂಕಲೇಶ್ವರ, ಗಣೇಶ್ ಗುಜರನ್ ಸೂರತ್, ಲೋಕಯ್ಯ ಪೂಜಾರಿ ಅಹ್ಮದಾಬಾದ್, ವಾಸು ಪೂಜಾರಿ ಬರೋಡಾ (ಉಪಾಧ್ಯಕ್ಷರು), ಸರಿತಾ ಸೋಮನಾಥ ಪೂಜಾರಿ ಬರೋಡಾ ಮತ್ತು ದಯಾನಂದ ಸಾಲಿಯಾನ್ ಬರೋಡಾ (ಜೊತೆ ಕಾರ್ಯದರ್ಶಿಗಳು), ರವಿ ಸಾಲಿಯಾನ್ ಬರೋಡಾ (ಜೊತೆ ಕೋಶಾಧಿಕಾರಿ), ಜಿನ್‍ರಾಜ್ ಪೂಜಾರಿ (ಮುಖ್ಯ ಸಂಚಾಲಕರು), ರೋಹಿದಾಸ್ ಪೂಜಾರಿ (ಸಂಚಾಲಕರು) ಸುಮನ್‍ಲಾಲ್ ಕೊಡಿಯಾಲ್‍ಬೈಲ್ (ಸಂಚಾಲಕರು, ಅಹ್ಮದಾಬಾದ್), ಪ್ರಭಾಕರ್ ಪೂಜಾರಿ (ಸಂಚಾಲಕರು, ಸೂರತ್), ರಮೇಶ್ ಪೂಜಾರಿ (ಸಂಚಾಲಕರು, ವಾಪಿ-ವಲ್ಸಾಡ್) ಆಯ್ಕೆಗೊಂಡರು.

ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸುಖಾಗಮನ ಬಯಸಿದರು. ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ ಗತ ಮಹಾಸಭೆಯ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮಗಳ ಮಾಹಿತಿಯನ್ನಿತ್ತರು. ಗೌರವ ಕೋಶಾಧಿಕಾರಿ ಸುದೇಶ್ ವೈ.ಕೋಟ್ಯಾನ್ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಿರ್ಗಮನ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಅವರು ನೂತನ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಅವರಿಗೆ ಪುಷ್ಪಗುಪ್ಚವನ್ನಿತ್ತು ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು.

ಸಂಘದ ಸದಸ್ಯರಾಗಿದ್ದು ಗತ ಸಾಲಿನಲ್ಲಿ ಅಗಲಿದ ಅಡ್ವಕೇಟ್ ಲಕ್ಷ ್ಮಣ ಪೂಜಾರಿ ಅಹ್ಮದಾಬಾದ್, ಆನಂದ ಅವಿೂನ್ ಬರೋಡಾ, ಹರೀಶ್ ಪೂಜಾರಿ ಅಹ್ಮದಾಬಾದ್ ಇವರ ಭಾವಚಿತ್ರಗಳನ್ನಿರಿಸಿ ಪುಷ್ಫವೃಷ್ಠಿಗೈದು ಮತ್ತು ಸಂಘದ ಹಿತೈಷಿಗಳ ಅಗಲಿಕೆಗೆ ಸಂತಾಪ ಸೂಚಿಸಿ ಬಾಷ್ಪಾಂಜಲಿ ಕೋರಲಾಯಿತು. ಜಿನರಾಜ್ ಪೂಜಾರಿ ಮತ್ತು ಶ್ವೇತಾ ಅವಿೂನ್ ಸಭಿಕರ ಪರವಾಗಿ ಮಾತನಾಡಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಜೊತೆ ಕಾರ್ಯದರ್ಶಿ ಸರಿತಾ ಸೋಮನಾಥ ಪೂಜಾರಿ ಧನ್ಯವದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here