Thursday 16th, September 2021
canara news

ಸಾಧುಸಂತರ ಸಂಸ್ಕೃತಿಗಳಲ್ಲಿ ಚಾತುರ್ಮಾಸ್ಯ ವ್ರತ ಅಗ್ರಮಾನ್ಯವಾದುದು

Published On : 28 Jul 2021   |  Reported By : Rons Bantwal


ಮುನಿಶ್ರೀ 108 ದಿವ್ಯಸಾಗರ ಮಹಾರಾಜ-ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಚಾತುರ್ಮಾಸ್ಯ

ಮುಂಬಯಿ (ಆರ್‍ಬಿಐ), ಜು.01: ಭಾರತೀಯ ಸಾಧುಸಂತರ ಸಂಸ್ಕೃತಿಗಳಲ್ಲಿ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯವಾದದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆ ತನಕ ನಡೆಸಲ್ಪಡುವ ಈ ವ್ರತ ಪುಣ್ಯಾಧಿ ಫಲದ ಧ್ಯೋತಕವಾಗಿದೆ ಎಂದು ಜೈನ ಕಾಶಿ ಮೂಡುಬಿದಿರೆ ಇದರ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಿಳಿಸಿದರು.

ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಮಠದಲ್ಲಿ ಕಳೆದ ಶನಿವಾರ (ಜು. 24) ಆರಂಭಿಸಲಾದ 2021ನೇ ವಾರ್ಷಿಕ ಚಾತುರ್ಮಾಸ ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದು ಮಳೆಗಾಲದಲ್ಲಿ ಜೀವಜಂತುಗಳು ಅತೀ ಹೆಚ್ಚು ಉತ್ಪತ್ತಿ ಯಾಗುವುದು ಮಹಾ ವ್ರತಧಾರಕ ಮುನಿಗಳು ತಪ್ಪಿಯೋ ಜೀವಹಿಂಸೆ ಆಗದಂತೆ ವ್ರತ ನಿಯಮ ಅನುಷ್ಠಾನಗಳಿಗೆ ಅಹಿಂಸೆ ಪಾಲನೆಗಾಗಿ ಚಾತುರ್ಮಸ ನಾಲ್ಕು ತಿಂಗಳು ಪೂರ್ಣ ರೂಪದಲ್ಲಿ ಆಚರಣೆ ಮಾಡುವುದು ರೂಢಿಯಾಗಿದೆ. ಭಟ್ಟಾರಕರು ದಶಲಕ್ಷಣ ಅಂದರೆ ಎರಡು ತಿಂಗಳು ಪೂರ್ಣ ಆಚರಣೆ ಮಾಡಿ ಜಪತಪ ಸ್ವಾಧ್ಯಯ ಪ್ರವಚನಗಳಿಗೆ ಸಮಯವನ್ನು ಸಮಾಜ ಬಾಂಧವರಿಗೆ ಧರ್ಮ ಜಾಗೃತಿ ಉಂಟು ಮಾಡಲು ಆತ್ಮಕಲ್ಯಾಣ, ಪರಕಲ್ಯಾಣಕ್ಕೆ ಚಾತುರ್ಮಸದಿಂದ ಸಾಧ್ಯ. ಈ ವರೆಗೆ ಇದು ಈ ಶತಮಾನದ ಮುನಿಗಳ 3ನೇ ಚಾತುರ್ಮಸವಾಗಿದೆ. ಈ ಹಿಂದೆ 2005ರಲ್ಲಿ ಆಚಾರ್ಯ ವಿರಾಗ ಸಾಗರ 2017ರಲ್ಲಿ ಗಿರಿನಾರ್ ಸಾಗರರ. ಇದೀಗ 108 ದಿವ್ಯ ಸಾಗರರ ಚಾತುರ್ಮಾಸ್ಯ ನಡೆಯುತ್ತಿದೆ. ಇಂತಹ ಧಾರ್ಮಿಕ ಪುಣ್ಯಾಧಿ ಕಾರ್ಯಕ್ರಮಗಳು ನಾಡಿನ ಎಲ್ಲರಿಗೂ ಧರ್ಮ ಲಾಭವಾಗಲಿ ಎಂದÀು ಮಂಗಳ ಶುಭ ನುಡಿಯನ್ನಾಡಿದರು.

ಚಾರುಕೀರ್ತಿ ಪಂಡಿತಾಚಾರ್ಯರು ಚಾತುರ್ಮಾಸ ಕಲಶಸ್ಥಾಪನೆಗೈದು ಮಂಗಲ ಶುಭಹಾರೈಕೆ ಮಾಡಿ ಪ್ರತಿ ಕ್ರಮಣ ಆಚಾರ್ಯ ಭಕ್ತಿ ಶಾಂತಿ ಭಕ್ತಿ, ಸಿದ್ದ ಭಕ್ತಿ, ದಿಶಾ ವಂದನಾ ದಿಗ್ ಬಂಧನ ನಿಯಮಗಳನ್ನು ಮೊದಲಾದ ಆಗಮೋಕ್ತ ಕ್ರಿಯಾ ಕಲಾಪ ನೆರವೇರಿಸಿದರು. ನಂತರ ಅರಿಹಂತರ ಪೂಜೆ ಸಿದ್ದರ ಅರ್ಗ್ಯ, ಮೂಲ ಸ್ವಾಮಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪೂಜೆ, ಗಣಧರ ಪೂಜೆ ನೆರವೇರಿಸಿದರು. ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಮೊಕ್ತೇಸರರು, ಶಂಭವ್ ಕುಮಾರ್ ಶಾಸ್ತ್ರ ದಾನ ಮಾಡಿದರು.

ಮಾಜಿ ಸಚಿವ, ಚಾತುರ್ಮಾಸ್ಯಸಮಿತಿ ಕಾರ್ಯಧ್ಯಕ್ಷ ಕೆ.ಅಭಯಚಂದ್ರ ಜೈನ್ ಮಾತನಾಡಿ ಮುನಿಗಳ, ಸ್ವಾಮೀಜಿಯವರ ಚಾತುರ್ಮಾಸ ಸಂಧರ್ಭ ಧರ್ಮಲಾಭ ಪ್ರತೀಯೊಬ್ಬರು ಪಡೆಯುವಂತಾಗಲಿ. ಮೂಡುಬಿದಿರೆ ಜೈನ ಮಠದಲ್ಲಿ ನಮಗೆಲ್ಲರಿಗೂ ಸ್ವಾಮಿಜಿ ನೀಡಿದ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸೋಣ ಎಲ್ಲರ ಸಹಕಾರ ಇರಲಿ ಎಂದರು ಹಾಗೂ ಮುನಿ 108 ದಿವ್ಯ ಸಾಗರ ಮಹಾರಾಜರ ಪಾದಪೂಜೆ ನೆರವೇರಿಸಿದರು. ಅರ್ಘ್ಯ ಪಟ್ಟದ ಪುರೋಹಿತರು ಮೂಡುಬಿದಿರೆ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವತಿಯಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ, ಉತ್ತಮ ಭಕ್ತಿಗೀತೆ ಹಾಡಿದ ಸಂಗೀತಗಾರ್ತಿ ನಮಿತಾ ಜೈನ್ ಬೆಳಗಾಂನ ಇವರಿಗೆ ಮತ್ತು ಹಿರಿಯ ಸಾಹಿತಿ ಕಲಾವಿದ ರವಿರಾಜ ಜೈನ್, ಕೀ ಬೋರ್ಡ್, ತಬಲಾದೊಂದಿಗೆ ಸಹಕರಿದವರಿಗೆ ಕಲಾವಿದರಿಗೆ ಶ್ರೀಮಠದ ಪರವಾಗಿ ಚಾರುಕೀರ್ತಿ ಶ್ರೀಗಳು ಅಭಿವÀಂದಿಸಿ ಆಶೀರ್ವದಿಸಿದರು.

ಶೈಲೇ0ದ್ರ ಜೈನ್, ಯುವರಾಜ್ ಜೈನ್, ಪ್ರವೀಣ್‍ಚಂದ್ರ ಎಸ್., ಪಿ.ವಿದ್ಯಾ ಕುಮಾರ್, ಧನಕೀರ್ತಿ ಬಲಿಪ, ಸಂಜಯಂಥ ಕುಮಾರ್, ಡಾ| ಕೆ.ಪ್ರಭಚಂದ್ರ, ಬಾಹುಬಲಿ ಪ್ರಸಾದ್, ಶ್ರೀಪತಿ ಭಟ್, ಅಡ್ವಕೇಟ್ ಶ್ವೇತಾ ಜೈನ್, ಎಂಸಿಸಿ ಬ್ಯಾಂಕ್‍ನ ಎಸ್. ಚಂದ್ರಶೇಖರ್, ಶ್ರವಕಿಯರಾದ ವೃ0ದ, ವೀಣಾ, ಮಂಜುಳಾ, ವಿನಂತಿ ಸರೋಜಮ್ಮ, ಶಕುಂತಲಾ, ಮೋಹಿನಿ ವಿಮಲ್ ಕುಮಾರ್ ಮತ್ತಿತರÀರು ಉಪಸ್ಥಿತರಿದ್ದರು.

ಡಾ| ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಕು| ಪ್ರಮೆಯಿ, ಕು| ಖ್ಯಾತಿ ಪ್ರಾರ್ಥನೆಯನ್ನಾಡಿದರು.

ಉಪನ್ಯಾಸಕ ಕೆ.ನಮಿರಾಜ್ ಧನ್ಯವಾದ ಸಮರ್ಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು.
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್

Comment Here