Friday 9th, May 2025
canara news

ಕೋಸ್ಟಲ್‍ವುಡ್ ಅಭಿನೇತ್ರಿ ವಿನ್ನಿ ಫೆರ್ನಾಂಡಿಸ್ ವಿಧಿವಶ

Published On : 29 Jul 2021   |  Reported By : Rons Bantwal


ಮುಂಬಯಿ ಕಲಾವಿದ ಬಳಗದ ತೀವ್ರ ಸಂತಾಪ

ಮುಂಬಯಿ (ಆರ್‍ಬಿಐ), ಜು.29: ಕನ್ನಡ, ತುಳು ಮತ್ತು ಕೊಂಕಣಿ ಮನರಂಜನಾ ಕ್ಷೇತ್ರದಲ್ಲಿ ಅಭಿನಯಿಸಿ ಅಪಾರ ಜನಮನ್ನಣೆ ಪಡೆದ ನಟಿ ವಿನ್ನಿ ವಿನ್ಸೆಂಟ್ ಫೆರ್ನಾಂಡಿಸ್ (63.) ಇಂದಿಲ್ಲಿ ಮಂಗಳೂರು ಎಸ್‍ಇಎಸ್ ಆಸ್ಪತ್ರೆಯಲ್ಲಿ ಹೃದಯಾಘಾತ ದಿಂದ ವಿಧಿವಶರಾದರು.

ವಾಮಂಜೂರುನಲ್ಲಿದ್ದು ಕಲಾರಂಗದಲ್ಲಿ ಅದ್ಭುತ ಪ್ರತಿಭೆಯಾಗಿದ್ದು ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರಗಳಲ್ಲಿ ನಟಿಸಿ, ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಇವರು ನಾಡಿನ ಚಿರಪರಿಚಿತ ಕೋಸ್ಟಲ್‍ವುಡ್ ಕಲಾವಿದೆಯಾಗಿ ಮಿಂಚಿದ್ದರು. ಓರ್ವ ಬಾಲ ಕಲಾವಿದೆಯಾಗಿ ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿ ರಂಗಮಂಚವನ್ನೇರಿ ವಿವಿಧ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನ ಆರಂಭಿಸಿ ಕ್ರಮೇಣ ತುಳು ಮತ್ತು ಕನ್ನಡ ನಾಟಕ, ಕಿರುಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಅಪಾರ ಅಭಿಮಾನ ಬಳಗವನ್ನು ಹೊಂದಿದ್ದರು.

ಸದ್ಯ ಕುಲಶೇಖರ ಕಲ್ಪನೆಯಲ್ಲಿ ನೆಲೆಯಾಗಿದ್ದ ಮೃತರು ಪತಿ ವಿನ್ಸೆಂಟ್ ಫೆರ್ನಾಂಡಿಸ್, ಸುಪುತ್ರ ಪ್ರತಾಪ್ ಮತ್ತು ಸುಪುತ್ರಿ ಬಬಿತಾ ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.

ವಿನ್ನಿ ಫೆರ್ನಾಂಡಿಸ್ ನನಗೆ ಅತ್ಯಂತ ಆತ್ಮೀಯರಾಗಿದ್ದರು. ಆದ್ದರಿಂದಲೇ ಇಂದು ಸೋದರ ವಾತ್ಸಲ್ಯದ ಗೆಳತಿ ಒಬ್ಬಳನ್ನು ಕಳೆದುಕೊಂಡ ವೇದನೆ ನನಗಾಗಿದೆ. ಭಗಿನಿ ವಿನ್ನಿಯ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರಲ್ಲಿ ಪ್ರಾಥಿರ್üಸುವೆ ಎಂದು ಕಲಾ ಜಗತ್ತು ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಸಂತಾಪ ವ್ಯಕ್ತ ಪಡಿಸಿದ್ದಾರೆ.


ಕಲಾ ಸೌರಭ ಮುಂಬ¬ ನಿರ್ದೇಶಕ ಪದ್ಮನಾಭ ಸಸಿಹಿತ್ಲು, ಹಿರಿಯ ರಂಗ ಕಲಾವಿದರಾದ ಸಾ.ದಯಾ, ಮೋಹನ್ ಮಾರ್ನಾಡ್, ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಹ್ಯಾರಿ ಫೆರ್ನಾಂಡಿಸ್ ಬಾರ್ಕುರು, ಡಾ| ಭರತ್‍ಕುಮಾರ್ ಪೆÇಲಿಪು, ಚಂದ್ರಾವತಿ ದೇವಾಡಿಗ, ಜ್ಯೂಲಿಯೇಟ್ ಪಿರೇರಾ ಸೇರಿದಂತೆ ಹಲವಾರು ಕಲಾವಿದರು ನಟಿ ವಿನ್ನಿ ಫೆರ್ನಾಂಡಿಸ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here