Friday 9th, May 2025
canara news

ಗುಜರಾತ್ ಬಿಲ್ಲವ ಸಂಘ ; 2021-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ

Published On : 01 Aug 2021   |  Reported By : Rons Bantwal


ದಯಾನಂದ ಬೋಂಟ್ರಾ (ಗೌರವಾಧ್ಯಕ್ಷ) - ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಅಧ್ಯಕ್ಷ)

ಮುಂಬಯಿ (ಆರ್‍ಬಿಐ), ಜು.27: ಗುಜರಾತ್ ಬಿಲ್ಲವ ಸಂಘ (ಜಿಬಿಎಸ್) ಇದರ 9ನೇ ಮಹಾಸಭೆಯು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಜಿಬಿಎಸ್‍ನ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅಧ್ಯಕ್ಷತೆಯಲ್ಲಿ ಜರುಗಿದ್ದು, 2021-24ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ಸರ್ವಾನುಮತದಿಂದ ಆಯ್ಕೆಯಾದರು..

ದಯಾನಂದ ಬೋಂಟ್ರಾ (ಗೌರವಾಧ್ಯಕ್ಷರು), ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಅಧ್ಯಕ್ಷರು), ಮನೋಜ್ ಸಿ.ಪೂಜಾರಿ (ನಿಕಟಪೂರ್ವ ಅಧ್ಯಕ್ಷ), ವಾಸು ವಿ.ಸುವರ್ಣ ಬರೋಡಾ (ಪ್ರಧಾನ ಕಾರ್ಯದರ್ಶಿ), ಸುದೇಶ್ ವೈ.ಕೋಟ್ಯಾನ್ ಬರೋಡಾ (ಗೌರವ ಕೋಶಾಧಿಕಾರಿ), ಲಕ್ಷ ್ಮಣ್ ಪೂಜಾರಿ ಬರೋಡಾ, ವಿ.ಡಿ ಅಮೀನ್ ಅಹ್ಮದಾಬಾದ್, ಸದಾಶಿವ ಪೂಜಾರಿ ವಾಪಿ-ವಲ್ಸಾಡ್, ಹರೀಶ್ ಪೂಜಾರಿ ಅಂಕಲೇಶ್ವರ, ಗಣೇಶ್ ಗುಜರನ್ ಸೂರತ್, ಲೋಕಯ್ಯ ಪೂಜಾರಿ ಅಹ್ಮದಾಬಾದ್, ವಾಸು ಪೂಜಾರಿ ಬರೋಡಾ (ಉಪಾಧ್ಯಕ್ಷರು), ಸರಿತಾ ಸೋಮನಾಥ ಪೂಜಾರಿ ಬರೋಡಾ ಮತ್ತು ದಯಾನಂದ ಸಾಲಿಯಾನ್ ಬರೋಡಾ (ಜೊತೆ ಕಾರ್ಯದರ್ಶಿಗಳು), ರವಿ ಸಾಲಿಯಾನ್ ಬರೋಡಾ (ಜೊತೆ ಕೋಶಾಧಿಕಾರಿ), ಜಿನ್‍ರಾಜ್ ಪೂಜಾರಿ ಬರೋಡಾ (ಮುಖ್ಯ ಸಂಚಾಲಕರು), ರೋಹಿದಾಸ್ ಪೂಜಾರಿ (ಸಂಚಾಲಕರು) ಸುಮನ್‍ಲಾಲ್ ಕೊಡಿಯಾಲ್‍ಬೈಲ್ (ಸಂಚಾಲಕರು, ಅಹ್ಮದಾಬಾದ್), ಪ್ರಭಾಕರ್ ಪೂಜಾರಿ (ಸಂಚಾಲಕರು, ಸೂರತ್), ರಮೇಶ್ ಪೂಜಾರಿ (ಸಂಚಾಲಕರು, ವಾಪಿ-ವಲ್ಸಾಡ್), ಜಯಾನಂದ ಪೂಜಾರಿ (ಸಂಚಾಲಕರು, ಅಂಕ್ಲೇಶ್ವರ) ಆಯ್ಕೆ ಗೊಂಡರು.

ವಿಶ್ವನಾಥ ಜಿ.ಪೂಜಾರಿ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದಲ್ಲಿನ ಸೀಮಾ ಸದನ್ ಲಕ್ಷಿ ್ಮೀ ನಿವಾಸ್ ನಿವಾಸಿ ಕೃಷಿಕರಾದ ಗಿರಿಯಪ್ಪ ಪೂಜಾರಿ ಮತ್ತು ಲಕ್ಷ್ಮೀ ಪೂಜಾರಿ ದಂಪತಿ ಸುಪುತ್ರರಾಗಿ ಜನಿಸಿದ್ದು, ಕುರಿಯಾಳ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಸೈಂಟ್ ಫಿಲೋಮೆನಾ ಹೈಸ್ಕೂಲು ಪುತ್ತೂರು ಇಲ್ಲಿ ಪ್ರೌಢ ವಿದ್ಯಾಭ್ಯಾಸ ಪೂರೈಸಿ 1987ರಲ್ಲಿ ಬೃಹನ್ಮುಂಬಯಿಗೆ ಆಗಮಿಸಿ ಮುಂಬಯಿ ಬೋರಿವಿಲಿ ಇಲ್ಲಿನ ಸೈಂಟ್ ಫ್ರಾನ್ಸಿಸ್ ಶಿಕ್ಷಣ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಇಂಜಿನೀಯರಿಂಗ್ (ಡಿಪೆÇ್ಲೀಮಾ) ಪಧವೀದರÀರಾದರು. ಬಳಿಕ ಸೂರತ್‍ಗೆ ತೆರಳಿ ಲಕ್ಷಿ ್ಮೀ ಇಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದಿಗೆ ಸ್ವಉದ್ಯಮ ಆರಂಭಿಸಿ ಇದೀಗ ಈ ಸಂಸ್ಥೆ ಸುಮಾರು ಎರಡುವರೆ ದಶಕಗಳ ಸಾಧನೆಯ ಹಾದಿಯಲ್ಲಿದೆ.

ತೀರಾ ಸರಳ, ಸಜ್ಜನಿಕೆ, ಮಿತಭಾಷಿ ಆಗಿರುವ ವಿಶ್ವನಾಥ್ ಸುಮಾರು ಮೂವತ್ತು ವರ್ಷಗಳಿಂದ ಸೂರತ್ ಮೆಟ್ರೋಪಾಲಿಟನ್ ಪ್ರದೇಶವನ್ನೇ ಕರ್ಮಭೂಮಿಯನ್ನಾಗಿಸಿ ಬಾರ್ಡೋಲಿ ಪುರಸಭಾ (ಪಟ್ಟಣ) ವ್ಯಾಪ್ತಿಯಲ್ಲಿ ನೆಲೆಯಾಗಿರುವ ವಿಶ್ವನಾಥ್ ಸ್ಥಾನೀಯ ಕರ್ನಾಟಕ ಸಂಘ, ಬಿಲ್ಲವ, ತುಳು, ಕನ್ನಡ, ಸಂಘ ಸಂಸ್ಥೆಗಳಲ್ಲಿ ಸಕ್ರೀಯ ಸದಸ್ಯರು, ಪೆÇೀಷಕರು, ಕೊಡುಗೈದಾನಿಯಾಗಿ ಸೇವಾ ನಿರತರಾಗಿದ್ದಾರೆ. ಈ ತನಕ ಜಿಬಿಎಸ್ ಸೂರತ್ ಶಾಖೆಯ ಸಾರಥ್ಯ ವಹಿಸಿದ್ದ ಇವರು ಇದೀಗ ಮಾತೃ ಸಂಸ್ಥೆ ಗುಜರಾತ್ ಬಿಲ್ಲವ ಸಂಘದ ಚುಕ್ಕಾಣಿಯನ್ನಿಡಿದಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here