ಮುಂಬಯಿ (ಆರ್‍ಬಿಐ), ಆ.06: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯ, ಅಕ್ಷಯ ಪತ್ರಿಕೆಯ ಸಂಪಾದಕ ಹರೀಶ್ ಹೆಜ್ಮಾಡಿ ಅವರ ಮಾತೃಶ್ರೀ ಕಮಲ ಕೆ.ಅವಿೂನ್ (85.) ವೃದ್ಧಾಪ್ಯ ಸಹಜತೆಯಿಂದ ಇಂದಿಲ್ಲಿ ಶುಕ್ರವಾರ ಮಂಗಳೂರು ಹೆಜಮಾಡಿ ಇಲ್ಲಿನ ಕೋಚತೋಟ ಸ್ವನಿವಾಸದಲ್ಲಿ ನಿಧನರಾದರು.
ಮೃತರು ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅವಿೂನ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಅಕ್ಷಯ ಸಂಪಾದಕ ಮಂಡಳಿ ಶೋಕ ವ್ಯಕ್ತಪಡಿಸಿದ್ದಾರೆ.