Friday 12th, July 2024
canara news

ಕಂಕನಾಡಿ ಫಾದರ್ ಮುಲ್ಲರ್ ಹೋಮಿಯೋಪತಿಕ್ ಆಸ್ಪತ್ರೆಯಲ್ಲಿ ಒಪಿಡಿ ಸೇವೆಗಳ ಉದ್ಘಾಟನೆ

Published On : 06 Aug 2021   |  Reported By : Rons Bantwal


ಆರೋಗ್ಯದ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿ : ರೆ| ಫಾ| ರಿಚಾರ್ಡ್ ಕುವೆಲ್ಹೋ

ಮುಂಬಯಿ (ಆರ್‍ಬಿಐ), ಆ.06: ಆರೋಗ್ಯದ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಹೋಮಿಯೋಪಥಿü ಒಂದು ಪುರಾತನ ವೈದ್ಯ ಪದ್ಧತಿ ಆಗಿದ್ದು ಇದು ನೈಸರ್ಗಿಕ ಕ್ಷಮತೆಯನ್ನು ಚೇತರಿಸಿ, ರೊಗಿಯನ್ನು ಗುಣಪಡಿಸುವಲ್ಲಿ ಪರಿಣಾಮಕಾರಿ ಆಗಿದ್ದು ಸಾಂಪ್ರದಾಯಿಕ ಸಿದ್ಧಾಂತವನ್ನು ಹೊಂದಿದೆ. ಇದು ಕೇವಲ ರೋಗಸರಿಗೆÀ ಮಾತ್ರವಲ್ಲ ಆರೋಗ್ಯವಂತರೂ ಪಡೆದು ಕಾಯಿಲೆಗಳಿಂದ ಸುರಕ್ಷಿತರಾಗಿರಲು ಸಹಾಯಕ. ಬಳಕೆಯಿಂದ ಆರೋಗ್ಯ ಸುಧಾರಣಾ ಪರಿಣಾಮವನ್ನು ವೀಕ್ಷಿಸಿ ರೋಗವನ್ನು ತಡೆದು ಗುಣಪಡಿಸುವ ವಿಧಾನ ಇದಾಗಿದೆ. ದುಬಾರಿಯೂ ಅಲ್ಲದ, ಅಡ್ದ ಪರಿಣಾಮಗಳೂ ಇಲ್ಲದ ಹೋಮಿಯೋಪಥಿü ಉಪಚಾರ ತುಂಬಾ ಉಪಯುಕ್ತವಾದದ್ದು ಎಂದು ಫಾದರ್ ಮುಲ್ಲರ್ ಚ್ಯಾರಿಟೆಬಲ್ ಇನ್‍ಸ್ಟಿಟ್ಯೂಟ್‍ಗಳ ನಿರ್ದೇಶಕ ರೆ| ಫಾ| ರಿಚಾರ್ಡ್ ಅಲೋಶಿಯಸ್ ಕುವೆಲ್ಹೋ ತಿಳಿಸಿದರು.

ಕರ್ನಾಟಕ ಕರಾವಳಿಯ ಮಂಗಳೂರುನ ಆಸ್ಪತ್ರೆಗಳಲ್ಲಿ ಹಳೆಯ ಮತ್ತು ಕಂಕನಾಡಿ ಎಂದೇ ನಾಮಾಂಕಿತ ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಫ್‍ಎಂಹೆಚ್‍ಎಂಸಿ ಎಂಡ್ ಹೆಚ್) ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ವೈವಿಷ್ಟ ್ಯ ಚಿಕಿತ್ಸಾಲಯ (ಸ್ಪೆಷಾಲಿಟಿ ಕ್ಲಿನಿಕ್) ಹೊರ ರೋಗಿಗಳ ವಿಭಾಗ (ಒಪಿಡಿ) ಸೇವೆಗಳಿಗೆ ಚಾಲನೆಯನ್ನಿತ್ತು ಫಾ| ಕುವೆಲ್ಹೋ ಮಾತನಾಡಿದರು.

ಎಫ್‍ಎಂಹೆಚ್‍ಎಂಸಿ ಎಂಡ್ ಹೆಚ್‍ನ ಸಹಾಯಕ ಆಡಳಿತಾಧಿಕಾರಿ ರೆ| ಫಾ| ರೋಹನ್ ಡಾಯಾಸ್, ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್‍ನ ಪ್ರಾಂಶುಪಾಲ ಡಾ| ಇ.ಎಸ್.ಜೆ ಪ್ರಭು ಕಿರಣ್ ಮತ್ತು ಎಫ್‍ಎಂಹೆಚ್‍ಎಂಸಿ ಎಂಡ್ ಹೆಚ್‍ನ ವೈದ್ಯಕೀಯ ಅಧೀಕ್ಷಕ ಡಾ| ಗಿರೀಶ್ ನಾವಡ ಯು.ಕೆ ಉಪಸ್ಥಿತರಿದ್ದು, ಎಫ್‍ಎಂಸಿಐ ನಿರ್ದೇಶಕರನ್ನು ಒಳಗೊಂಡು ಫಾ| ರಿಚಾರ್ಡ್ ಕುವೆಲ್ಹೋ ಚಿಕಿತ್ಸಾಲಯವನ್ನು ಪ್ರಾರ್ಥನಾ ವಿಧಿಗಳೊಂದಿಗೆ ಆಶೀರ್ವದಿಸಿ ಉದ್ಘಾಟಿಸಿ ಹೋಮಿಯೋಪತಿಯಲ್ಲಿ ವಿಶೇಷ ಚಿಕಿತ್ಸಾಲಯ ಹೊಂದುವ ಅವಶ್ಯಕತೆ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತÀರು.

ಆಸ್ಪತ್ರೆಯ ಆಡಳಿತಾಧಿಕಾರಿ ರೆ| ಫಾ| ರೋಶನ್ ಕ್ರಾಸ್ತಾ ಸರ್ವರನ್ನು ಸ್ವಾಗತಿಸಿದರು. ರೋಸ್‍ಮೇರಿ ಸ್ಯಾಮ್ ಮತ್ತು ತಂಡವು ಪ್ರಾರ್ಥನಾ ಹಾಡನ್ನು ಹಾಡಿ ದೇವರ ಅನುಗ್ರಹ ಕೋರಿದರು. ವೈದ್ಯಕೀಯ ಅಧೀಕ್ಷಕ ಡಾ| ಗಿರೀಶ್ ನಾವಡ ಅವರು ಎಫ್‍ಎಂಹೆಚ್‍ಎಂಸಿ ಎಂಡ್ ಹೆಚ್ ವಿಶೇಷ ಒಪಿಡಿಗಳಲ್ಲಿ ಒದಗಿಸಲಾಗುವ ಸೇವೆಗಳ ಬಗ್ಗೆ ವಿವರಿಸಿದರು. ಆಸ್ಪತ್ರೆ ಚಿಕಿತ್ಸಾ ಸಮಿತಿ ಮತ್ತು ಆಧ್ಯಾತ್ಮಿಕ ಸಮಿತಿಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ| ಶೆರ್ಲಿನ್ ಪಾವ್ಲ್ ನಿರೂಪಿಸಿ ವಂದಿಸಿದರು.
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here