Tuesday 23rd, April 2024
canara news

ಕೇರಳ ಗಡಿನಾಡ ಕಾಸರಗೋಡುನಾದ್ಯಂತ ಮನೆ ಮನೆಯಲ್ಲಿ ಯಕ್ಷಗಾನ ಅಭಿಯಾನ

Published On : 07 Aug 2021   |  Reported By : Rons Bantwal


ಸಂಸ್ಕøತಿ ಪೆÇೀಷಣೆ ಭಾಷೆಯ ಬೆಳವಣಿಗೆ ಸಹಕಾರಿ : ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ 

ಮುಂಬಯಿ (ಆರ್‍ಬಿಐ), ಆ.04: ಕಲೆ, ಸಂಸ್ಕøತಿಯ ಪೆÇೀಷಣೆ, ಭಾಷೆಯ ಬೆಳವಣಿಗೆಗೆ ಹೆಚ್ಚು ಸಹಕಾರಿ ಆಗಿದೆ. ಕಾಸರಗೋಡುನಲ್ಲಿ ಯಕ್ಷಗಾನದಿಂದಾಗಿ ಕನ್ನಡ ಭಾಷೆ ಮುನ್ನೆಲೆಗೆ ಬಂದಿದೆ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಅವರ ತವರಿನಲ್ಲಿ ಯಕ್ಷಗಾನ ಕಲೆಯ ಬಗ್ಗೆ ಮತ್ತಷ್ಟು ಕೆಲಸ ನಡೆದು ಬರಬೇಕಾಗಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಹಾಗೂ ಗಡಿನಾಡ ಯಕ್ಷಗಾನ ಅಕಾಡಮಿ ಕಾಸರಗೋಡು ವತಿಯಿಂದ ಪೈವಳಿಕೆ ಜೋಡುಕಲ್ಲಿನ ಜೆ.ಕೆ.ವಿ ಸಭಾಂಗಣದಲ್ಲಿ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಮನೆ ಮನೆಯಲ್ಲಿ ಯಕ್ಷಗಾನ ಅಭಿಯಾನ ಉದ್ಘಾಟಿಸಿ ಅಶ್ರಫ್ ಮಾತನಾಡಿದರು.

ಯಕ್ಷಗಾನ ಕಲಾವಿದ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಶಂಕರ ರೈ ಮಾಸ್ಟರ್ ಮುಖ್ಯ ಅತಿಥಿüಯಾಗಿ ಭಾಗವಹಿಸಿ ಮಾತನಾಡಿ, ಯಕ್ಷಗಾನ ನಾಡಿನ ಜನತೆಗೆ ಬದುಕಿನ ಜತೆಗೆ ಮಾತು, ಸಂಸ್ಕøತಿ ಕಲಿಸಿಕೊಟ್ಟ ಕಲೆಯಾಗಿದೆ. ಕರೊನಾ ಸಂಕಷ್ಟದ ಕಾಲಘಟ್ಟದಲ್ಲಿ ವಿವಿಧ ಸಂಘಟನೆಗಳು ಒಟ್ಟುಗೂಡಿ ನಡೆಸುತ್ತಿರುವ ಅಭಿಯಾನ ಕಲಾವಿದರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಕಲಾವಿದರ ಹೋರಾಟದ ಬದುಕಿಗೆ ಇಂತಹ ಅಭಿಯಾನ ವರದಾನವಾಗಲಿ ಎಂದು ತಿಳಿಸಿದರು.

ಪೈವಳಿಕೆ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಝೆಡ್.ಎ ಕಯ್ಯಾರ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್‍ಭಾಗ್, ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಮಾಜಿ ಸದಸ್ಯ ಪ್ರಸಾದ್ ರೈ, ಯಕ್ಷಗಾನ ಕಲಾಪೆÇೀಷಕ ವಸಂತ ಆಳ್ವ ಉಪಸ್ಥಿತರಿದ್ದು ಯಕ್ಷಗಾನ ಕಾರ್ಯಕ್ರಮ ಸೇವಾಕರ್ತರಾದ ಕ್ಲಬ್ ಪದಾಧಿಕಾರಿಗಳಿಗೆ ಶಂಕರ ರೈ ಮಾಸ್ಟರ್ ಪ್ರಮಾಣಪತ್ರ ವಿತರಿಸಿದರು.

ಅಭಿಯಾನದ ಸಂಚಾಲಕ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ಯಕ್ಷಗಾನ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೆÇ್ರ| ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕಾಧ್ಯಕ್ಷ ಡಾ| ಟಿ.ತಿಮ್ಮೇಗೌಡ, ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ| ಸೋಮಶೇಖರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ, ಮೂಕಾಂಬಿಕ ದೇವಸ್ಥಾನ ಘನ್ಸೋಲಿ ಅಧ್ಯಕ್ಷ ಅಣ್ಣಿ ಸಿ.ಶೆಟ್ಟಿ ಮೊದಲಾದವರು ಯಕ್ಷ ಪಯಣದ ಬಗ್ಗೆ ಗಣ್ಯರನೇಕರು ಆನ್‍ಲೈನ್ ಮೂಲಕ ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here