Friday 9th, May 2025
canara news

ಜೈನಕಾಶಿ ಮೂಡಬಿದಿರೆಯಲ್ಲಿ ಸಂಪ್ರದಾಯಿಕ ನಾಗರ ಪಂಚಮಿ ಆಚರಣೆ

Published On : 14 Aug 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.13: ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರ ಶುಭಾನುಗ್ರಹ, ಮಾರ್ಗದರ್ಶನದಲ್ಲಿ ನಾಗರ ಪಂಚಮಿ ನಿಮಿತ್ತ ಇಂದಿಲ್ಲಿ ಶನಿವಾರ ಜೈನಕಾಶಿ ಮೂಡುಬಿದಿರೆ ಬಸದಿಗಳಲ್ಲಿ ಸಂಪ್ರದಾಯದಂತೆ 18 ಬಸದಿಗಳಲ್ಲಿ ಅಷ್ಟಕುಲ ನಾಗ ಪೂಜೆ, ಅರುವತ್ತು ಸಾವಿರ ನಾಗ ಕುಲಗಳಿಗೆ ಉಪಚಾರ ಪೂಜೆಗಳು ನೆರವೇರಿಸಲ್ಪಟ್ಟವು.

ಶ್ರೀಗಳವರು ಗುರು ಬಸದಿ, ಕೆರೆ ಬಸದಿ, ಸಾವಿರ ಕಂಬ ಬಸದಿಯ ನಾಗ ಪೂಜೆಗಳಲ್ಲಿ ಪಾಲ್ಗೊಂಡರು. ನಾಗ ದೇವತೆಗಳು ನಾಗೇಂದ್ರ ಭವನಗಳಲ್ಲಿ ವಾಸವಿದ್ದು ಜಿನೇಂದ್ರ ಭಕ್ತರಾಗಿದ್ದು, ಜೈನ ಮೂಲ ಅಮ್ನಾಯ ಪೂಜಾ ಪದ್ಧತಿಯಂತೆ ಉಪಚಾರ ಪೂಜೆ ಬಸದಿಗಳಲ್ಲಿ ನಡೆಸಲಾಗಿದ್ದು ನಾಗರ ಪಂಚಮಿ ನಿಮಿತ್ತ ವಿಶೇಷ ಅಭಿಷೇಕವು ನಡೆಸಲಾಯಿತು. ಬಸದಿಗಳಲ್ಲಿ ಮೊದಲು ಜಿನ ಅಭಿಷೇಕ, ಹಾಗೂ ಪಂಚ ಕುಮಾರ ಪೂಜೆ ಮಹಾಶಾಂತಿ ಧಾರ ನಡೆದು ಬಸದಿ ನಾಗಬನದಲ್ಲಿ ಪೂಜೆ, ತನು ಹೊಯ್ಯುವ ಕಾರ್ಯ ನಡೆಸಲಾಯಿತು.

ಈ ಅಭಿಷೇಕ ಲೋಕದಲ್ಲಿ ಶಾಂತಿ ಸುಭಿಕ್ಷೆ ನೆಲೆಯಾಗಲಿ ಧರ್ಮ ಜಾಗೃತಿ ಆಗಲಿ, ಅರೋಗ್ಯ ಸಂಪದ, ಮೋಕ್ಷ ಸುಖ ಎಲ್ಲರಿಗೂ ಪ್ರಾಪ್ತಿಯಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. 18 ಬಸದಿಗಳಲ್ಲಿ ಇಂದು ಬೆಳಿಗ್ಗೆ ಜಲ, ಎಳನೀರು ಕೆಸರ, ಹಾಲು, ಅರಳು ಚಂದನ ಸಹಿತ ಹದಿನಾರು ಉಪಚಾರ ಪೂಜೆ ನೆರವೇರಿಸಲ್ಪಟ್ಟಿತು.

ಮೂಡುಬಿದಿರೆ ಇಲ್ಲಿನ ಹದಿನೆಂಟು ಬಸದಿಗಳಲ್ಲಿ, ಅವಿಭಜಿತ ದ.ಕ ಜಿಲ್ಲೆಯ ಬಸದಿಗಳಲ್ಲಿ ಕೊವಿಡ್-19 ಕಾರಣ ಅರ್ಚಕರು ಸಂಬಂಧ ಪಟ್ಟ ಪೂಜಾ ಕರ್ತೃಗಳು ಸರಕಾರ ವಿಧಿಸಿದ ನಿಯಮ ಪಾಲಿಸಿ ಸರಳವಾಗಿ ನಾಗರ ಪಂಚಮಿ ಆಚರಿಸಲಾಯಿತು. ಮೂಡುಬಿದಿರೆ ತಹಶೀಲ್ದಾರ್ ಪುಟ್ಟ ರಾಜು ಶ್ರೀ ಜೈನ ಮಠಕ್ಕೆ ಭೇಟಿ ನೀಡಿ ಶ್ರೀಪಾದರ ಅನುಗ್ರಹ ಪಡೆದಿದ್ದು ಶ್ರೀಗಳವರು ಶ್ರೀಫಲ ಮಂತ್ರಾಕ್ಷತೆ, ಕೃತಿ ನೀಡಿ ಆಶೀರ್ವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here