Friday 9th, May 2025
canara news

ಹಿಂದಿ ಅಕಾಡೆಮಿಯಿಂದ ರಾಜಭವನದಲ್ಲಿ ಮಾತೃಭೂಮಿ ಭೂಷಣ ಪ್ರಶಸ್ತಿ ಪ್ರದಾನ

Published On : 18 Aug 2021   |  Reported By : Rons Bantwal


ರಾಯಾನ್'ಸ್‍ನ ಮೇಡಂ ಡಾ| ಗ್ರೇಸ್ ಪಿಂಟೊ ಮುಡಿಗೇರಿಸಿದ `ಶಿಕ್ಷ ಭೂಷಣ' ಪ್ರಶಸ್ತಿ

ಮುಂಬಯಿ (ಆರ್‍ಬಿಐ), ಆ.18: ಹಿಂದಿ ಅಕಾಡೆಮಿ ಸಂಸ್ಥೆಯು ಇಂದಿಲ್ಲಿ ಬುಧವಾರ ಮಹಾನಗರದ ಮಲಬಾರ್‍ಹಿಲ್ ಅಲ್ಲಿನ ರಾಜಭವನದಲ್ಲಿ ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್ ಸಮಲೋಚನಾ ಸಭಾಗೃಹದಲ್ಲಿ ಮಾತೃಭೂಮಿ ಭೂಷಣ ಪ್ರಶಸ್ತಿ-2021 ಪ್ರದಾನ ಕಾರ್ಯಕ್ರಮ ಆಯೋಜಿಸಿತ್ತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾನೀಯರಿಗೆ ಸಶಸ್ತ್ರ ಪಡೆಗಳ ಅನುಭವಿಗಳಿಗೆ ಮಾತೃಭೂಮಿ ಭೂಷಣ, ಶಿಕ್ಷ ಭೂಷಣ, ಸಾಹಿತ್ಯ ಭೂಷಣ ಮತ್ತು ಸೇವಾ ಭೂಷಣ ಪ್ರಶಸ್ತಿಗಳನ್ನು ಪ್ರದಾನಿಸಿದರು.

ಮಹಾರಾಷ್ಟ್ರ ಸರ್ಕಾರದ ಮಾಜಿ ಗೃಹ ಖಾತೆ ರಾಜ್ಯ ಸಚಿವ ಕೃಪಾ ಶಂಕರ್ ಸಿಂಗ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ರಾಜ್ಯಪಾಲ ಕೊಶ್ಯಾರಿ ಅವರು ಶಿಕ್ಷಣ ತಜ್ಞೆ, ರಾಯಾನ್ ಇಂಟರ್‍ನೇಶನಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಶನ್‍ನ ಮೇಡಂ ಡಾ| ಗ್ರೇಸ್ ಪಿಂಟೊ ಇವರಿಗೆ `ಶಿಕ್ಷ ಭೂಷಣ' ಪ್ರಶಸ್ತಿ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

1971ರ ಯುದ್ಧದಲ್ಲಿ ಸೇನಾ ದಂತ ದಳದಲ್ಲಿ ಸೇವೆ ಸಲ್ಲಿಸಿದ ಮತ್ತು ಯುದ್ಧದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ವೀರನಾರಿ ಡಾ| ಕಾಂತ ಮುಖರ್ಜಿ, ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ಪಡೆಯ ದಿವಂಗತ ಲೆಫ್ಟಿನೆಂಟ್ ಸಿಡಿಆರ್ ಫಿರ್ದೌಸ್ ಮೊಗಲ್ ಅವರ ಪತ್ನಿ ವೀರ ನಾರಿ ಕರ್ಜಿನ್ ಮೊಗಲ್ ಮತ್ತು ಜಿಪಿ ಕ್ಯಾಪ್ಟನ್ ತ್ರಿಲೋಕಿ ಭಟಾರ, ಸುಬೇಧರ್ ವಿನಾಯಕ್ ಉಪಾಧ್ಯೆ, ಮಾ| ಚೀಫ್ ಎಂ.ಪ್ರಸಾದ್, ಮೇಜರ್ ಪ್ರಜಲ್ ಜಾಧವ್, ಕ್ಯಾಪ್ಟನ್ ಕೆ.ಪಿ ಹರಿದಾಸನ್, ಕಮಾಂಡರ್ ವಿಜಯ್ ವಧೇರಾ, ಸರ್ಜಟ್ ದತ್ತಂತ್ರೆಯ ಅರ್ಜುನ್ ಉತೆಕರ್, ಕಮಾಂಡರ್ ಬಿ.ಬಿ ಮಿಸ್ತ್ರಿ ಇವರಿಗೆ ಮಾತೃಭೂಮಿ ಭೂಷಣ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಿದರು.

ಅಂತೆಯೇ ಮಾಯಾ ಶಂಕರ್ ಚೌಬೆ, ಪಿಯೂಸ್ ಶುಕ್ಲಾ, ಸೌರಭ್ ಪಾಂಡೆ ಇವರಿಗೆ `ಶಿಕ್ಷ ಭೂಷಣ' ಪ್ರಶಸ್ತಿ, ಯುಗರಾಜ್ ಜೈನ್ ಇವರಿಗೆ `ಸಾಹಿತ್ಯ ಭೂಷಣ' ಪ್ರಶಸ್ತಿ, ರಾಜಬಾಹು ಶೇಠ್, ಡಾ| ಮುಖೇಶ್ ಗೌತಮ್, ಪ್ರಶಾಂತ್ ಪುಲ್ವಾಣೆ, ಪ್ರವೀಣ್ ರಾಯ್, ಕಮಲೇಶ್ ನಹಾರ್ ಇವರಿಗೆ `ಸಮಾಜ ಭೂಷಣ' ಪ್ರಶಸ್ತಿಯನ್ನು ಹಾಗೂ ಡಾ| ಪ್ರಕಾಶ್ ಜಾಧವ್, ಡಾ| ಬಾಲನಾಥ್ ಚಕೋರ್, ಡಾ| ಆನಂದ್ ಪಾಂಡೇ, ವೇದಿಕಾ ಚೌಬೆ ಮತ್ತು ಉಮೇಶ್ ಪಾಂಡೇ ಇವರಿಗೆ ಸೇವಾಭೂಷಣ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಡಾ| ಪ್ರಮೋದ್ ಪಾಂಡೆ ಮತ್ತು ಉಪಾಧ್ಯಕ್ಷ ಅಳೋಕ್ ಚೌಬೆ, ರಾಯಾನ್ ಇಂಟರ್‍ನೇಶನಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಶನ್‍ನ ನಿರ್ದೇಶಕಿ ಡಾ| ಸ್ನೇಹಲ್ ಪಿಂಟೋ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಪುರಸ್ಕೃತರಿಗೆ ಶುಭಾರೈಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here