ಸಾರ್ವಜನಿಕರು ಆರೋಗ್ಯದಾಯಕರಾಗಿರಬೇಕು : ಶೇಖರ್ ಜೆ.ಸಾಲಿಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.18: ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಮಾಜಿ ಮಹಾಪೌರ (ಮೇಯರ್), ಸ್ಥಾನೀಯ ನಗರ ಸೇವಕ ಪ್ರಿನ್ಸಿಪಾಲ್ ವಿಶ್ವನಾಥ ಮಹಾದೇಶ್ವರ್ ಹಾಗೂ ಹಿರಿಯ ಸಮಾಜ ಸೇವಕ, ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಮತ್ತು ಪ್ರಭಾತ್ ಕಾಲೋನಿ ಗಣೇಶೋತ್ಸವ ಮಂಡಲ ಇದರ ಅಧ್ಯಕ್ಷ ಶೇಖರ್ ಜೆ.ಸಾಲಿಯಾನ್ ಇವರುಗಳ ಅವಿರತ ಶ್ರಮದಿಂದ ಇಂದಿಲ್ಲಿ ಬುಧವಾರ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿನ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಸಾರ್ವಜನಿಕರಿಗಾಗಿ ಕೋವಿಡ್-19 ಮೆಗಾ ವ್ಯಾಕ್ಸಿನೇಷನ್ ಡ್ರೈವ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಆರೋಗ್ಯಭಾಗ್ಯ ಕಾಪಾಡಿಕೊಳ್ಳುವುದರಿಂದಲೂ ಸ್ವಸ್ಥ್ಧ ಸಮಾಜ ನಿರ್ಮಾಣ ಸಾಧ್ಯವಾಗುವುದು. ಕೋವಿಡ್‍ನಂ ತಹ ಸಂಧಿಗ್ಧ ಕಾಲದಲ್ಲಿ ಸೇವಾ ಮನೋಭಾವ ಮೈಗೂಡಿಸಿ ಆತ್ಮಗೌರವ ಬೆಳೆಸಿಕೊಳ್ಳುವುದು ಅಗತ್ಯ. ಇಂತಹ ಮನೋಧರ್ಮದಿಂದ ನಾವು ಉಚಿತ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ. ಸಾರ್ವಜನಿಕ ರು ಆರೋಗ್ಯದಾಯಕರಾಗಿದ್ದರೆ ಸಮಾಜವೇ ಸ್ವಾಸ್ಥ್ಯವಾಗಿರುತ್ತದೆ ಎಂದು ಲಸೀಕರಣ ಶಿಬಿರ ನೆರವೇರಿಸಿದ ಶೇಖರ್ ಸಾಲಿಯಾನ್ ತಿಳಿಸಿದರು.
ನಾಡಿನ ಎಲ್ಲಾ ನಾಗರೀಕರು ಕಾಲದ ಮೌಲ್ಯತೆಯನ್ನು ಕಲುಷಿತಗೊಳಿಸದೆ ಬದುಕಿನ ಭವ್ಯತೆಯಲ್ಲಿ ಕಾರ್ಯೋನ್ಮುಖರಾಗಬೇಕು. ಮನುಜರಿಗೆ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇಂತಹ ಸಂಸ್ಥೆಗಳು ವೈಯಕ್ತಿಯ ಆರೋಗ್ಯಪ್ರಜ್ಞೆ ಜೊತೆಗೆ ಸಾರ್ವಜನಿಕರನ್ನು ಜಾಗೃತರಾಗಿಸುವುದು ಪುಣ್ಯದ ಕೆಲಸವೇ ಸರಿ ಎಂದು ಪ್ರಾ| ಮಹಾದೇಶ್ವರ್ ತಿಳಿಸಿದರು.
ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ ಮತ್ತು ನಿರಂಜನ್ ಗೋಗಟೆ ಇವರುಗಳ ಸಹಯೋಗದಿಂದ ಬೆಳಿಗ್ಗೆಯಿಂದ ನಡೆಸಲ್ಪಟ್ಟ ಕೋವಿಡ್ ಲಸಿಕರಣ ಕಾರ್ಯಕ್ರಮದಲ್ಲಿ ಸುಮಾರು 350 ಜನರು ಸೇರಿದಂತೆ ಅನೇಕ ಹಿರಿಯ ನಾಗರೀಕರು ಉಪಸ್ಥಿತರಿದ್ದು ಧರ್ಮಾರ್ಥವಾಗಿ ಕೋವಿಡ್ ಲಸಿಕೆಗಳನ್ನು ಪಡೆದರು.
ಡಾ| ಪ್ರಿಯಾಂಕಾ ಅವ್ಹಾಡ್, ನರ್ಸ್ ಸಮತಾ ಪವಾರ್, ತಂತ್ರಜ್ಞ ರುಗಳಾದ ನಿತಿನ್ ಗುರವ್ ಮತ್ತು ಭವಕ್ ಕುಮಾವತ್ ಮತ್ತು ತಂಡವು ಲಸೀಕರಣ ನಡೆಸಿದರು. ಈ ಸಂದರ್ಭದಲ್ಲಿ ಸಿಟಿಜನ್ ಅಸೋಸಿಯೇಶನ್‍ನ ಪದಾಧಿಕಾರಿಗಳಾದ ದೀಪಕ್ ಕಾಣೇರ್ಕರ್, ದೇವೇಂದ್ರ ಝೆವಿರೀಯಾ, ಗಣೇಶ್ ಭಗತ್, ಮಂಗೇಶ್ ಭಗತ್ ಹಾಗೂ ಸಂತೋಷ್ ದಾಮಾಪುರ್ಕರ್ ಮತ್ತು ಶ್ರೀ ಪೇಜಾವರ ಮಠದ ಸಿಬ್ಬಂದಿ ವರ್ಗವು ಸೇವಾಕರ್ತರಾಗಿ ಸಹಕರಿಸಿದರು.