Friday 9th, May 2025
canara news

ಭಾರತ್ ಬ್ಯಾಂಕ್‍ನ ಮಂಗಳೂರು ಹಂಪನಕಟ್ಟೆ ಶಾಖೆಯಲ್ಲಿ ಸಂಭ್ರಮಿಸಲ್ಪಟ್ಟ ಬ್ಯಾಂಕ್‍ನ 43ನೇ ಸಂಸ್ಥಾಪನಾ ದಿನಾಚರಣೆ

Published On : 22 Aug 2021   |  Reported By : Ronida Mumbai


ಮುಂಬಯಿ (ರೊನಿಡಾ), ಆ.21: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಂಚಾಲಕತ್ವದ ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಇಂದಿಲ್ಲಿ ಶನಿವಾರ ಬ್ಯಾಂಕ್‍ನ 43ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿತು. ಆ ನಿಮಿತ್ತ ಬ್ಯಾಂಕ್‍ನ ಮಂಗಳೂರು ಹಂಪನಕಟ್ಟೆ ಶಾಖೆಯಲ್ಲಿ ಸಂಸ್ಥಾಪನಾ ಸರಳವಾಗಿ ಆಚರಿಸಲಾಯಿತು. ಕೆ.ಎಸ್ ಅಲಂಕಾರ್ ಮತ್ತು ಇಂದಿರಾ ಎಸ್.ಅಲಂಕಾರ್ ದೀಪ ಪ್ರಜ್ವಲಿಸಿ ಸಡಗರಕ್ಕೆ ಚಾಲನೆಯನ್ನಿತ್ತರು. ಬಿ.ಟಿ ಸಾಲ್ಯಾನ್ ಮತ್ತು ಡಾ| ಅನುಸೂಯ ಸಾಲ್ಯಾನ್ ಕೇಕ್ ಕತ್ತರಿಸಿ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿದರು.

ಬ್ಯಾಂಕ್‍ನ ಹಿರಿಯ ಗ್ರಾಹಕರು ಪ್ರಬಂಧಕÀ ನವೀನ್‍ಕುಮಾರ್ ಗುಳಿಬೆಟ್ಟು ಮಾತಾನಾಡಿ ಗ್ರಾಹಕರೇ ಬ್ಯಾಂನ ಸಂಪತ್ತು. ಸ್ವರ್ಗೀಯ ಜಯ ಸಿ.ಸುವರ್ಣರ ಸಾರಥ್ಯದಲ್ಲಿ ಬ್ಯಾಂಕ್ ಸಾಧಿಸಿದ ಕ್ರಾಂತಿ ಬಹಳಷ್ಟು. ಅವರೇ ಬ್ಯಾಂಕ್‍ನ ಯಶಸ್ಸಿನ ಸರದಾರರಾಗಿದ್ದು ನಮಗೆ ಪ್ರೇರಕರು. ನಾವೆಲ್ಲಾ ಉದ್ಯೋಗಿಗಳು ಅವರ ಚಿಂತನೆ ಮೈಗೂಡಿಸಿ ಸದಾ ಹಸನ್ಮುಖರಾಗಿ ಗ್ರಾಹಕರಿಗೆ ಉತ್ತಮ ಸೇವೆ ಒಗದಿಸಿದ್ದಲ್ಲಿ ಬ್ಯಾಂಕ್‍ನ ಪ್ರಗತಿ ಫಲದಾಯಕ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಹರೀಶ್ ಕರ್ಕೇರ, ಸುರೇಖಾ ಕರ್ಕೇರಾ, ಸುಜಯ ರೋಹಣ್, ಗಿರಿರಾಜ್ ಕೋಟ್ಯಾನ್, ರೋಬರ್ಟ್ ಡಿಸೋಜಾ, ಡಾ| ರಾಮಚಂದ್ರ ಪೈ, ಕೆ.ಜಯಕುಮಾರ್, ರಂಜನ್ ಉಚ್ಚಿಲ್, ನ್ಯಾಯವಾದಿ ಮಧುಕರ್ ಅವಿೂನ್ ಸೇರಿದಂತೆ ಬ್ಯಾಂಕ್‍ನ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭಕೋರಿದರು.

ಹಿರಿಯ ಪ್ರಬಂಧಕ ಅರುಣ್ ಕುಮಾರ್, ಶಾಖೆಯ ಪ್ರಬಂಧಕ ನವೀನ್‍ಕುಮಾರ್ ಗುಳಿಬೆಟ್ಟು, ಉಪ ಪ್ರಬಂಧಕಿ ಪ್ರಫುಲ್ಲಾ ವಿ.ಬಂಗೇರ, ಉಪ ಶಾಖಾಧಿಕಾರಿಗಳಾದ ಜ್ಯೋತ್ಸಾ ್ನ ಕರ್ಕೇರ, ರಮ್ಯಾ ಸಾಲ್ಯಾನ್, ಭಾಸ್ಕರ್ ಬಂಗೇರ ಸರಪಾಡಿ, ಕೆ.ಗೀತಾ, ಪವಿತ್ರ, ಸ್ಮಿತಾ, ಲತಾ ಕೋಟ್ಯಾನ್, ಅಮಿತ್ ಕೋಟ್ಯಾನ್, ರಶೀಕ ಕರ್ಕೇರ, ಪರಿತೋಷ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here