Friday 9th, May 2025
canara news

ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್‍ನ ಸಂಸ್ಥಾಪನಾ ದಿನಾಚರಣೆ

Published On : 22 Aug 2021   |  Reported By : Ronida Mumbai


ವಸಾಯಿ ಶಾಖೆಯಲ್ಲಿ 43ನೇ ಸಂಭ್ರಮಾಚರಣೆ

ಮುಂಬಯಿ (ರೊನಿಡಾ), ಆ.21: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಂಚಾಲಕತ್ವದ ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಇಂದಿಲ್ಲಿ ಶನಿವಾರ ಬ್ಯಾಂಕ್‍ನ 43ನೇ ವಾರ್ಷಿಕ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿತು. ಆ ನಿಮಿತ್ತ ವಸಾಯಿ ಪಶ್ಚಿಮದ ಅಂಬಾಡಿ ರಸ್ತೆಯಲ್ಲಿನ ಬ್ಯಾಂಕ್‍ನ ವಸಾಯಿ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗಿದ್ದು ಬ್ಯಾಂಕ್‍ನ ನಿರ್ದೇಶಕ ಕೆ.ಬಿ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಾಯಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಕರುಣಾಕರ ಜಿ.ಅವಿೂನ್, ಶ್ರೀ ಗುರುನಾರಾಯಣ ಸೇವಾ ಸಮಿತಿ ಇದರ ಗೌ| ಪ್ರ| ಕಾರ್ಯದರ್ಶಿ ಓ.ಪಿ ಪೂಜಾರಿ ಇವರು ಬ್ಯಾಂಕ್‍ನ ಗ್ರಾಹಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡು ಕೇಕ್ ಕತ್ತರಿಸಿ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ವಿರಾರ್-ನಾಲಾಸೋಫಾರ ಕರ್ನಾಟಕ ಸಂಘದ ಗೌರವ ಅಧ್ಯಕ್ಷ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ವಿರಾರ್ ಶಂಕರ ಬಿ.ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಪಶ್ವಿಮ ವಲಯದ ಸಂಚಾಲಕ ಶಶಿಧರ ಕೆ.ಶೆಟ್ಟಿ ಉಪಸ್ಥಿತರಿದ್ದು ಶುಭಾರೈಸಿದರು.

ಬ್ಯಾಂಕ್‍ನ ಅಧಿಕಾರಿಗಳಾದ ಸ್ವಾತಿ ನಿತೀನ್ ಸುವರ್ಣ, ಸ್ವಪ್ನಾ ಕೋಟ್ಯಾನ್, ಸಿಬ್ಬಂದಿಗಳಾದ ನಯನ ಪೂಜಾರಿ, ಶುೃತಿ ಅಂಚನ್, ರಶ್ಮಿ ಕೋಟ್ಯಾನ್, ನಿಧಿ ಅಂಚನ್, ರಾಘವೇಂದ್ರ ಪ್ರಸಾದ್ ಸಾಲ್ಯಾನ್, ರಕ್ಷಣಾ ಸಿಬ್ಬಂದಿ ಆನಿಲ್ ಮಹಾಜನ್ ಮತ್ತು ಎಸ್‍ಎಂಎಸ್ ಸಿಬ್ಬಂದಿ ಪ್ರತಮೇಶ್ ಹಾಗೂ ಬ್ಯಾಂಕ್‍ನ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು. ಶಾಖೆಯ ಪ್ರಬಂಧಕ ದಿನೇಶ್ ಪೂಜಾರಿ ಗಣ್ಯರನ್ನು ಸ್ವಾಗತಿಸಿದರು. ಉಪ ಪ್ರಭಂದಕ ಸದಾಶಿವ ಎ.ಕರ್ಕೇರ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here