Friday 19th, April 2024
canara news

ಮುಂಬಯಿನ ಅದ್ಭುತ-ನಿಗೂಢ ಅಂಶಗಳೇ ನನ್ನ ಬರವಣಿಗೆಗೆ ಪ್ರೇರಣೆ

Published On : 22 Aug 2021   |  Reported By : Rons Bantwal


ಕನ್ನಡ ವಿಭಾಗದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಎಸ್.ಸುವರ್ಣ

ಮುಂಬಯಿ (ಆರ್‍ಬಿಐ), ಆ.16: ಮುಂಬಯಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ರೋಮಾಂಚನವಾಗುತ್ತದೆ. ಈ ಮಹಾನಗರದಲ್ಲಿ ಕನ್ನಡಿಗರ ಸಾಧನೆಯೂ ಉಲ್ಲೇಖನೀಯವಾದುದು. ಮುಂಬಯಿನ ಅದ್ಭುತ-ನಿಗೂಢ ಅಂಶಗಳೇ ನನ್ನ ಬರವಣಿಗೆಗೆ ಪ್ರೇರಣೆ ಎಂಬುದಾಗಿ ಪತ್ರಕರ್ತ, ಸಾಹಿತಿ, ಮೊಗವೀರ ಮಾಸಿಕದ ಸಂಪಾದಕ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿಅಶೋಕ ಎಸ್.ಸುವರ್ಣ ಅಭಿಪ್ರಾಯ ಪಟ್ಟರು.

ಇತ್ತೀಚೆಗೆ ಕನ್ನಡ ವಿಭಾಗದ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಮಾತನಾಡುತ್ತಾ ಮೊದಲಿನಿಂದಲೂ ಮುಂಬೈಯಲ್ಲಿ ಕನ್ನಡ ಮರಾಠಿ, ಗುಜರಾತಿ ಭಾಷೆಗಳ ಪ್ರಭಾವ ದಟ್ಟವಾಗಿತ್ತು. ಬ್ರಿಟಿಷ್ ಕಾಲದಲ್ಲಿ ಮುಂಬಯಿಯನ್ನು ಕಟ್ಟಿ ಬೆಳೆಸುವಲ್ಲಿ ಕನ್ನಡಿಗರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಬಿ.ಜಿ ಖೇರ್, ರಾವ್ ಬಹದ್ದೂರ, ರಾಮಪಂಜಿ, ಜಿ.ಎನ್.ವೈದ್ಯನಾಥ, ಇಮಾರತಿ ಮೊದಲಾದವರ ಸಾಧನೆಗಳನ್ನು ನಾವು ಮರೆತು ಬಿಟ್ಟಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಮುಂಬಯಿಯಲ್ಲಿ ಗಣ್ಯಸ್ಥಾನದಲ್ಲಿ ಸಾಧನೆಗೈದರು. ಮುಂಬೈಗೆ ಕರ್ನಾಟಕದಿಂದ ಬಂದ ಕನ್ನಡಿಗರಲ್ಲಿ ಮೊಗವೀರರೇ ಪ್ರಥಮ. ಆ ಬಳಿಕ ಬಂದವರು ಈ ನೆಲದಲ್ಲಿ ಮಾಡಿದ ಅಪಾರ ಸಾಧನೆ ಸ್ಮರಣೀಯ ಅಂಶ. ಕನ್ನಡ ವಿಭಾಗ ಮುಂಬೈ ಕನ್ನಡಿಗರ ಸಾಧನೆಗಳನ್ನು ದಾಖಲು ಮಾಡುತ್ತಿರುವುದು ಸಂತೋಷದ ಸಂಗತಿ ಎಂಬುದಾಗಿ ್ಅಶೋಕ ಸುವರ್ಣ ಅಭಿಮಾನ ವ್ಯಕ್ತಪಡಿಸಿದರು.

ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಅಶೋಕ ಸುವರ್ಣ ಅವರ ಕೊಡುಗೆ ಮಹತ್ವದ್ದು. ಅಧ್ಯಯನಶೀಲ, ರೂಢಗುಣ, ಅಧಿಕೃತತೆಯಿಂದ ಅವರ ಕೃತಿಗಳು ನಮ್ಮ ಗಮನ ಸೆಳೆಯುತ್ತವೆ. ಮೊಗವೀರ ಪತ್ರಿಕೆಯ ಸಂಪಾದಕರಾಗಿ ಕೆಲವು ನೂತನ ಉಪಕ್ರಮಗಳನ್ನು ಚಾಲ್ತಿಗೆ ತಂದ ಶ್ರೇಯಸ್ಸು ಅವರದು. ಬರೆಯುವ ಜನಕ್ಕೆ ದೊಡ್ಡ ಪ್ರಮಾಣದಲ್ಲಿ ರಂಗಸಜ್ಜಿಕೆಯನ್ನು ನಿರ್ಮಿಸಿಕೊಡುತ್ತಾ ಬಂದ ಸ್ನೇಹಜೀವಿ ಎಂದು ಸುವರ್ಣ ಅವರ ಸಾಧನೆಗಳು ಹೊಸ ತಲೆಮಾರಿಗೆ ಮಾದರಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಡಾ| ಉಪಾಧ್ಯ ಅವರು ಅಶೋಕ ಸುವರ್ಣ ರಚಿತ `ಮುಂಬೈ ಪರಿಕ್ರಮಣ' ಕೃತಿಯನ್ನು ಬಿಡುಗಡೆ ಮಾಡಿದರು. ಗೋಪಾಲ ತ್ರಾಸಿ ಸಂಪಾದಿಸಿದ `ಸಮರ್ಥ ಪತ್ರಕರ್ತ ಸಂಪಾದಕ ಅಶೋಕ ಸುವರ್ಣ' ಕೃತಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಬಿಡುಗಡೆ ಗೊಳಿಸಿದರು.

ನಡೆಸಲ್ಪಟ್ಟ ಸಂವಾದ ಕಾರ್ಯಕ್ರಮದಲ್ಲಿ ದಿನಕರ್ ನಂದಿ ಚಂದನ್, ಸದಾನಂದ ತಾವರೆಕೆರೆ, ಪ್ರತಿಭಾ ರಾವ್, ಲಕ್ಷಿ ್ಮೀ ರಾಥೋಡ್, ಹರೀಶ್ ಪೂಜಾರಿ ಪಾಲ್ಗೊಂಡರು. ಕು| ಶ್ರಾವ್ಯ ರಾವ್ ಸ್ವಾಗತಗೀತೆ ಹಾಡಿದರು. ಸುರೇಖಾ ದೇವಾಡಿಗ ಧನ್ಯವದಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here