Friday 9th, May 2025
canara news

ಕನ್ನಡ ಕಲಾ ಕೇಂದ್ರ-ಮಯೂರವರ್ಮ ಪ್ರತಿಷ್ಠಾನದಿಂದ ಚಿಂತನ-ಮಂಥನ ಕಾರ್ಯಕ್ರಮ

Published On : 28 Aug 2021   |  Reported By : Rons Bantwal


ಕೃತಿಯು ಎಂದೂ ವಿಕೃತಿ ಆಗಬಾರದು : ಡಾ| ಜಿ.ಪಿ ಕುಸುಮಾ

ಮುಂಬಯಿ (ಆರ್‍ಬಿಐ), ಆ.27: ನಾವು ಕೃತಿಯ ಮೂಲಕ ಸಂಸ್ಕೃತಿಯನ್ನು ಬೆಳೆಸಬೇಕು. ಪಾಲಕರು ಮಾಡುವುದನ್ನು ಚಿಕ್ಕಮಕ್ಕಳು ಅನುಕರಿಸುತ್ತಾರೆ. ಪುಟ್ಟ ಪುಟ್ಟ ಕಣ್ಣುಗಳು ಸದಾ ಹಿರಿಯರನ್ನು ಹಿಂಬಾಲಿಸುತ್ತಿರುತ್ತವೆ. ಹಿರಿಯರು ಸಂಸ್ಕೃತಿ ಮಾಡುವಾಗ ಕಿರಿಯರು ಅದನ್ನು ಅನುಸರಿಸುತ್ತಾರೆ. ಕೃತಿಯು ಎಂದೂ ವಿಕೃತಿ ಆಗದೆ ಸಂಸ್ಕೃತಿಯಿಂದ ಕೂಡಿರಬೇಕು ಎಂದು ಮುಂಬಯಿಯ ಸಿಟಿ ಸಿವಿಲ್ ಆಂಡ್ ಸೆಷನ್ಸ್ ಕೋರ್ಟ್‍ನ ಡೆಪ್ಯೂಟಿ ರಿಜಿಸ್ಟ್ರಾರ್ ಡಾ| ಜಿ.ಪಿ ಕುಸುಮಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಕಲಾ ಕೇಂದ್ರ ಮುಂಬಯಿ ಹಾಗೂ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರಗಿದ ಸಂಸ್ಕೃತಿ ಹಾಗೂ ಪಾಲಕರ ಜವಾಬ್ದಾರಿ : ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಡಾ| ಕುಸುಮಾ ಮಾತನಾಡಿದರು.

ಗೋಪಿ ರಾವ್ ಮಾತನಾಡುತ್ತಾ, ಪಾಶ್ಚಾತ್ಯರು ನಮ್ಮ ಸಂಸ್ಕೃತಿ ಅದರಲ್ಲೂ ಯೋಗಕ್ಕೆ ನೀಡುವ ಮಹತ್ವವನ್ನು ವಿವರಿಸಿದರು.

ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರೋನ ಕಾಲಘಟ್ಟದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಮಹತ್ವವಿದೆ. ಮುಂಬಯಿಯಲ್ಲಿ ಕ್ರಿಯಾಶೀಲ ಆಗಿರುವ ತೆರೆಯ ಮರೆಯಲ್ಲೇ ಇದ್ದು ಹಲವಾರು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಕಲಾ ಕೇಂದ್ರದೊಂದಿಗೆ ಕೂಡಿ ಮಾಡಿದ ಈ ಕಾರ್ಯಕ್ರಮದಲ್ಲಿ ಇಂದಿನ ಯುವ ಪೀಳಿಗೆ ತಮ್ಮ ಕಲೆ ಸಂಸ್ಕೃತಿಯನ್ನು ಉಳಿಸಬಲ್ಲದು ಎಂಬ ಭರವಸೆಯನ್ನು ಇಂದು ಸಾದರಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವೈಷ್ಣವಿ ಆಚಾರ್ಯ, ಪೃಥ್ವಿ ಗಾಣಿಗ, ಶ್ರೀಕೃಷ್ಣ ಉಡುಪ, ಅನಗಾ ರಾವ್, ಸುಮಾ ರಾವ್, ಸಾತ್ವಿಕ್ ಜೆ. ರೈ ಮೊದಲಾದವರು ದೇಶಭಕ್ತಿ ಗೀತೆ, ನೃತ್ಯ, ಅಭಿನಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

ಸದಾನಂದ ಸಫಲಿಗ, ರಾಜವರ್ಮ ಜೈನ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದು ಪ್ರತಿಷ್ಠಾನದ ವಿಶ್ವನಾಥ್ ದೊಡ್ಮನೆ ಸ್ವಾಗತಿಸಿ ಕೊನೆಗೆ ವಂದಿಸಿದರು. ರಂಗನಟ ಜಗದೀಶ್ ಡಿ. ರೈ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here