Friday 9th, May 2025
canara news

ಪೇಜಾವರ ಮಠದಲ್ಲಿ ಶ್ರೀರಾಘವೇಂದ್ರ ಗುರು 350ನೇ ಆರಾಧನಾ ಮಹೋತ್ಸವ

Published On : 26 Aug 2021   |  Reported By : Ronida Mumbai


ಮುಂಬಯಿ (ರೋನಿಡಾ), ಆ.25: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಶ್ರೀರಾಘವೇಂದ್ರ ಗುರು ಸಾರ್ವಭೌಮ ಅವರ 350ನೇ ಆರಾಧನಾ ಮಹೋತ್ಸವ ವೈಭವದಿಂದ ಆಚರಿಸಲಾಯಿತು.

ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿನ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ, ದಿವ್ಯ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಕಳೆದ ಮಂಗಳವಾರ ರಾಯರ ಮಧ್ಯಾರಾಧನೆ ನಡೆಸಲಾಗಿದ್ದು ಆ ಪ್ರಯುಕ್ತ ಭಜನೆ, ಅಲಂಕಾರ ಬ್ರಾಹ್ಮಣ ಭೋಜನ, ಹಸ್ತೋದಕ ನೆರವೇರಿಸಲಾಯಿತು.

ಪೇಜಾವರ ಶಾಖೆಯ ಆಡಳಿತಾಧಿಕಾರಿ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಆರಂಭದಲ್ಲಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಬಳಿಕ ಭಕ್ತರನ್ನೊಳಗೊಂಡು ಪೂಜಾಧಿಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಿ ನೆರೆದ ರಾಯರ ಭಕ್ತರಿಗೆ ಹರಸಿದರು.

ಕೋವಿಡ್ ನಿಯಮಾವಳಿಗಳೊಂದಿಗೆ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಾಧನಾ ಮಹೋತ್ಸವ ಆಚರಿಸಲಾಗಿದ್ದು ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ ಮತ್ತು ನಿರಂಜನ್ ಗೋಗಟೆ ಸೇರಿದಂತೆ ಸಹ ಪುರೋಹಿತರು ಮತ್ತು ಭಕ್ತರು ಉಪಸ್ಥಿತರಿದ್ದು ರಾಯರ ಆರಾಧನೆಗೈದು ಪುನೀತರಾದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here