Tuesday 23rd, April 2024
canara news

ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಉತ್ಸವ

Published On : 23 Aug 2021   |  Reported By : Rons Bantwal


ಕನ್ನಡ ಕಟ್ಟುವ ಕಾರ್ಯಕ್ಕೆ ನಿರೀಕ್ಷೆ ಇಲ್ಲದಿರಲಿ : ಮೇಯರ್ ಪ್ರೇಮಾನಂದ ಶೆಟ್ಟಿ

ಮುಂಬಯಿ (ರೋನಿಡಾ), ಆ.23: ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್ ಆಫ್ ಇಂಡಿಯಾ ಹಾಗೂ ಸೌತ್ ಕೆನರಾ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ಎಂಎಂಯು) ಇವವುಗಳ ಸಂಯುಕ್ತ ಆಶ್ರಯದಲ್ಲಿ 24ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ಮಂಗಳೂರು ಬೊಕ್ಕಪಟ್ಣ ಪರಿಸರದ ಹಿನ್ನೀರಿನಲ್ಲಿ ತೇಲುವ ಅಬ್ಬಕ್ಕರಾಣಿ ವಿಹಾರ ನೌಕೆಯಲ್ಲಿ ಇತ್ತೀಚೆಗೆ ನಡೆಸಲ್ಪಟ್ಟಿತು.

ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಪ್ರೇಮಾನಂದ ಶೆಟ್ಟಿ ದೀಪ ಪ್ರಜ್ವಲನೆಯೊಂದಿಗೆ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಬಳಿಕ ಸಭಾಧ್ಯಕ್ಷತೆವಹಿಸಿ ಮಾತನಾಡಿದ ಪ್ರೇಮಾನಂದ್, ಗತ 13ವರ್ಷಗಳಿಂದ ಈ ಸಂಸ್ಥೆಯವ ರು ಕನ್ನಡ ಮತ್ತು ಸಂಸ್ಕೃತಿಯ ಸೇವೆಗೈಯುತ್ತಿದ್ದಾರೆ ಹಾಗೂ ಈ ನಿಟ್ಟಿನಲ್ಲಿ ಈ ತನಕ 24 ಅಂತಾರಾಷ್ಟ್ರೀಯ ಸಾಂಸ್ಕೃತಿಕ ತಥಾ ವೈಚಾರಿಕ ಸಮ್ಮೇಳನಗಳನ್ನು, ಅದರಲ್ಲಿ ನಾಲ್ಕು ರಾಷ್ಟ್ರೀಯ ಸಮ್ಮೇಳನಗಳು ಸೇರಿ ಬಹು ಯಶಸ್ವಿಯಾಗಿ ಸಂಘಟಿಸಿದ್ದಾರೆ ಎಂದು ತಿಳಿದು ಅತೀವ ಹರ್ಷವಾಗಿದೆ. ಯಾವ ಅನುದಾನವನ್ನು ನಿರೀಕ್ಷಿಸದೆ ಇವರು ನಿರಂತರವಾಗಿ ಮಾಡುತ್ತಿರುವ ಈ ಕನ್ನಡ ಕಟ್ಟುವ ಕಾರ್ಯವೂ ಅಮೋಘವಾದುದು. ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಒಳಗೊಂಡು ಸುಂದರ ಅನುಭೂತಿಯ ನ್ನು ನೀಡುವ ಇಂದಿನ ಉತ್ಕೃಷ್ಟ ಉತ್ಸವವು ಕೂಡಾ ಒಂದು ವಿಶಿಷ್ಟ ಅಸ್ಮಿತೆಯನ್ನು ಮೂಡಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಿ.ಎಸ್.ವೀರಯ್ಯ ಮುಖ್ಯ ಅತಿಥಿüಯಾಗಿದ್ದು ಮಾತನಾಡುತ್ತಾ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಪ್ರಾದೇಶಿಕವಾಗಿ ಅಂತೆಯೇ ದೇಶ-ವಿದೇಶಗಳಲ್ಲಿ ನಾಡು, ನುಡಿ, ಸಂಸ್ಕೃತಿಯ ಚಟುವಟಿಕೆಗಳನ್ನು ಹಲವಾರು ವರ್ಷಗಳಿಂದ ಆಯೋಜಿಸುತ್ತಲೇ ಬಂದಿರುವ ಐಸಿಎಫ್‍ಐ ಸಂಸ್ಥೆಯವರು ಸರ್ವ ರೀತಿಯಲ್ಲೂ ಅಭಿನಂದನಾರ್ಹರು ಎಂದರು.

ಐಸಿಎಫ್‍ಐ ಅಧ್ಯಕ್ಷರಾದ ಕೆ.ಪಿ. ಮಂಜುನಾಥ ಸಾಗರ್ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿ ಎಷ್ಟೇ ಕಷ್ಟ ನಷ್ಟಗಳಾದರೂ ಗತ 13 ವರ್ಷಗಳಿಂದಲೂ ಕನ್ನಡ ಮತ್ತು ಸಂಸ್ಕೃತಿಯ ಕಂಪನ್ನು ದೇಶ-ವಿದೇಶಗಳಲ್ಲಿ ಪಸರಿಸಿರುವ ಕಾರ್ಯ ಎಡೆಬಿಡದೆ ನಾವು ಮಾಡುತ್ತಿದ್ದೇವೆ. ಕೊರೋನಾ ಅಟ್ಟಹಾಸದಿಂದಾಗಿ ವಿವಿಧ ಸಂಕಷ್ಟಕ್ಕೊಳಗಾಗಿ ಆಥಿರ್üಕವಾಗಿಯೂ, ಮಾನಸಿಕವಾಗಿಯೂ ಕಲಾವಿದರನ್ನು ಆಹ್ವಾನಿಸಿ ಹುರಿದುಂಬಿಸುವ ಪ್ರಮುಖ ಉದ್ದೇಶದಿಂದ ಈ ಬಾರಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ವಿದೇಶದ ಬದಲಿಗೆ ನಮ್ಮಲ್ಲೇ ಪ್ರಾದೇಶಿಕವಾಗಿ ಸಂಘಟಿಸಿದ್ದೇವೆ ಎಂದು ಕಾರ್ಯಕ್ರಮಗಳ ಸದುದ್ದೇಶಗಳನ್ನು ವಿವರಿಸಿದರು.

ಅತಿಥಿüಗಳಾಗಿ ಉದ್ಯಮಿಗಳಾದ ಡಾ| ಮುನೀರ್ ಬಾವ (ಮಂಗಳೂರು), ಎಂ.ಗೋಪಿಕೃಷ್ಣನ್ (ಕೊಯಮತ್ತೂ ರು), ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಘಟಕ) ಗೋ.ನಾ.ಸ್ವಾಮಿ, ಸಿನಿಮಾ ರಂಗದ ರಘು ಭಟ್, ಚಿತ್ರ ನಟಿ ಬಿಂಬ ಶ್ರೀ ನೀನಾಸಂ ಬೆಂಗಳೂರು) ಮತ್ತು ಸಮಾಜ ಸೇವಕ ಮನೋಹರ ಶೆಟ್ಟಿ ಭಾಗವಹಿಸಿದ್ದರು.

ತರುವಾಯದಲ್ಲಿ ಕವಿಗೋಷ್ಠಿ ಹಾಗೂ ಕೊರೊನಾ ಕಾಲಘಟ್ಟದಲ್ಲಿ ಕಲಾವಿದರ ಬದುಕು ಮತ್ತು ಬವಣೆ ಎಂಬ ವಿಷಯದ ಮೇಲೆ ಎನ್‍ಆರ್‍ಐ ಫೆÇೀರಮ್ ಬಹ್ರೈನ್ ಇದರ ಅಧ್ಯಕ್ಷ ಲೀಲಾಧರ ಬೈಕಂಪಾಡಿ ಅಧ್ಯಕ್ಷತೆಯಲ್ಲಿ ಮೌಲಿಕವಾದ ವಿಚಾರಗೋಷ್ಠಿ ನಡೆಯಿತು. ಡಾ| ಶ್ರೀ ಆನಂದ ಸ್ವಾಮೀಜಿ, ಅಡ್ವೊಕೇಟ್ ರಘುನಾಥ್, ದಿಲೀಪ್ ಗದ್ಯಾಳ್, ಕೆ.ಭಾಸ್ಕರ್, ಶಿವರಾಜ್ ಪಿ.ಬಿ ಗೋಷ್ಠಿಯಲ್ಲಿ ಪಾಲ್ಗೊಂಡರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಪವಿತ್ರ ಮಯ್ಯ ಮತ್ತು ತಂಡವು ಕನ್ನಡ ಗೀತೆಗಳನ್ನು, ಜಯರಾಮ್ ಮಂಗಳಾದೇವಿ ಮತ್ತು ತಂಡವು ಸ್ಯಾಕ್ಸೋಫೆÇೀನ್ ವಾದನ, ಪೃಥ್ವಿ ಎಂ.ಹೆಗಡೆ ತಾಳಿಕೋಟೆ ಶಾಸ್ತ್ರೀಯ ನೃತ್ಯ ಪ್ರದರ್ಶನ ಪ್ರಸ್ತುತಪಡಿಸಿದರು. ಗಾಯಕಿ ಪವಿತ್ರಾ ಮಯ್ಯ ಪ್ರಾರ್ಥನೆಗೈದರು. ಲೀಲಾಧರ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಎಂಎಂಯು ಗೌರವ ಸಲಹೆಗಾರ ಶಿವರಾಜ್ ಪಿ.ಬಿ ವಂದಿಸಿದರು. ಅದ್ಭುತ ಪರಿಕಲ್ಪನೆಯ ಉತ್ಸವ ಅತ್ಯಂತ ನವ್ಯಶೈಲಿಯಲ್ಲಿ ನಡೆಸಲ್ಪಟ್ಟ ಸಮೇಳನ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲೊಂದು ಹೊಸತನಕ್ಕೆ ಶ್ರೀಕಾರ ಹಾಡಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here