Friday 9th, May 2025
canara news

ಮೊಗವೀರ ಸಾಹಿತ್ಯ ಸ್ಪರ್ಧೆ-2021

Published On : 01 Sep 2021   |  Reported By : Rons Bantwal


ಅಖಿಲ ಭಾರತ ಮಟ್ಟದ ಕನ್ನಡ ಸಣ್ಣ ಕಥಾ ಸ್ಪರ್ಧೆಗೆ ಆಹ್ವಾನ

ಮುಂಬಯಿ (ಆರ್‍ಬಿಐ), ಆ.30: ಕರ್ನಾಟಕ ರಾಜ್ಯೋತ್ಸವ-2012 ಪ್ರಶಸ್ತಿ ಪುರಸ್ಕೃತ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನುಂಬಯಿಯಲ್ಲಿ ಶತಮಾನ ಮಿಕ್ಕಿದ ಸೇವಾ ನಿರತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಸುಮಾರು ಎಂಟು ದಶಕಗಳಿಗೂ ಮಿಕ್ಕಿ ಪ್ರಕಾಶಿತ `ಮೊಗವೀರ'ವು ತನ್ನ 82ನೇ ವರ್ಷಕ್ಕೆ ಪಾದಾರ್ಪಣೆಗೈದ ಸುಸಂದರ್ಭಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ ಆಯೋಜಿಸಿದೆ. ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆಯಾದ ಉತ್ತಮ ಕಥೆಗಳಿಗೆ ಮೂರು ನಗದು ಬಹುಮಾನಗಳಿದ್ದು, ಪ್ರಥಮ ರೂ.7000/-, ದ್ವಿತೀಯ ರೂ.5000/- ತೃತೀಯ ರೂ.3000/- ನೀಡಲಾಗುವುದು ಎಂದು ಪತ್ರಿಕೆಯ ಸಂಪಾದಕ ಅಶೋಕ ಎಸ್.ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಬರಹಗಾರರನ್ನು ಪೆÇ್ರೀತ್ಸಾಹಿಸುವ ಸದುದ್ದೇಶದಿಂದ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆಗಾರರಿಗೆ ಪ್ರವೇಶ ಶುಲ್ಕವಿಲ್ಲದಿದ್ದು ಕೆಲವೊಂದು ನಿಯಮಗಳನ್ನು ಅನ್ವಯಿಸಲಾಯಿದೆ. ಆ ಪೈಕಿ ಕಥೆ ಸ್ವಂತ ರಚನೆ ಆಗಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ. ಒಬ್ಬರು ಒಂದೇ ಅಪ್ರಕಟಿತ ಕಥೆ ಕಳುಹಿಸಬೇಕು. ಉತ್ತಮ ಕಥಾವಸ್ತುವಿದ್ದು, ಭಾಷೆ, ಶೈಲಿ, ತಂತ್ರ- ಇವುಗಳು ಶ್ರೇಷ್ಠ ಮಟ್ಟದಲ್ಲಿದ್ದರೆ ಉತ್ತಮ. ಸಾಮಾಜಿಕ, ಆಥಿರ್üಕ, ರಾಜಕೀಯ, ಪತ್ತೇದಾರಿ, ಥಿü್ರಲ್ಲರ್, ಹಾರರ್, ಸೈನ್ಸ್ ಫಿಕ್ಷನ್-ಎಲ್ಲ ರೀತಿಯ ಸಭ್ಯ ಸಾಹಿತ್ಯಕ್ಕೂ ಅವಕಾಶವಿದೆ. ಸ್ಪಷ್ಟವಾದ ಕೈಬರಹ, ಬೆರಳಚ್ಚು, ಕಂಪ್ಯೂಟರ್ ಮುದ್ರಿತ ಪ್ರತಿಗಳನ್ನು ಕಳುಹಿಸಬಹುದು. ಇ-ಮೇಯ್ಲ್ ಮೂಲಕ ನುಡಿ ತಂತ್ರಾಂಶದಲ್ಲಿ ಕಂಪೆÇೀಸ್ ಮಾಡಿರುವ ಫೈಲ್‍ಗಳನ್ನು ಕಳುಹಿಸಬಹುದು. ಹಸ್ತಪ್ರತಿ, ಮುದ್ರಿತ ಪ್ರತಿ, ಸಾಫ್ಟ್ ಕಾಪಿ ಜೊತೆಗೆ ಪ್ರತ್ಯೇಕ ಕಾಗದದಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಬರೆದು ಫೆÇೀಟೋ ಅಂಟಿಸಿ ಕೃತಿಯೊಡನೆ ಲಗತ್ತೀಕರಿಸಬೇಕು. ಕಥೆ ಪುಟಗಳಲ್ಲಿ ಲೇಖಕರ ಹೆಸರು ಇರಬಾರದು. ಪಾಯಿಂಟ್ ಫಾಂಟ್ ಸೈಜಿನ ಮುದ್ರಿತ ಪ್ರತಿಯಲ್ಲಿ ಕನಿಷ್ಠ 8 ಪುಟಗಳಷ್ಟು ಹಾಗೂ ಗರಿಷ್ಠ 12 ಪುಟಗಳಷ್ಟು ಮೀರದಂತಿರಲಿ. ಮಿನಿಕಥೆಗಳು ಸ್ವೀಕರಿಸಲಾಗದು. ವಿಜೇತರಿಗೆ ಚೆಕ್ ಮೂಲಕ ಬಹುಮಾನ ಮತ್ತು ಪ್ರಮಾಣ ಪತ್ರ ಕಳುಹಿಸಲಾಗುವುದು. ಬಹುಮಾನ ಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು ಮೊಗವೀರ ಮಾಸಿಕದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ಪ್ರಕಟಿತ ಕೃತಿಗಳಿಗೆ ಮೊಗವೀರ ನಿಗದಿ ಪಡಿಸಿದ ಗೌರವ ಧನವನ್ನು ಕಳುಹಿಸಲಾಗುವುದು.ಕೃತಿಗಳ ಪ್ರತಿಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲ.

ತೀರ್ಪುಗಾರರ ನಿರ್ಣಯವೇ ಅಂತಿಮ, ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಬರಹಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 30-10-2021 ಎಂದು ಪ್ರಕಟಿಸಲಾಗಿದೆ.

ಕೃತಿಗಳನ್ನುThe Editor, 'Mogaveera' Kannada Monthly Magazine, Mogaveera Bhavan, MVM Educational Campus Marg, Off Veera Desai Road, Andheri West, Mumbai – 400058.E-mail : mvmmogaveeramagazine1939@gmail.com ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here