Monday 25th, October 2021
canara news

ಕಲಾವಿದ ವ್ಯಾಪಾರಿಯಲ್ಲ-ಕಲೋಪಾಸಕ : ದೇವುದಾಸ ಆರ್.ಶೆಟ್ಟಿ

Published On : 05 Sep 2021   |  Reported By : Rons Bantwal


ಸಾಂತಾಕ್ರೂಜ್‍ನಲ್ಲಿ `ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ' ಕೃತಿ ಬಿಡುಗಡೆ

ಮುಂಬಯಿ (ರೋನಿಡಾ), ಆ.31: ಕಲಾವಿದ ಶ್ರದ್ಧೆಯಿಂದ ಕೆಲಸ ಮಾಡಬೇಕು. ಕಲಾತ್ಮಕ ಚಿತ್ರಗಳನ್ನು ಬಿಡಿಸಿದಷ್ಟೇ ತನ್ನ ಮನೋಗತವನ್ನು ಬರೆದು ಹಂಚಿಕೊಳ್ಳುವುದು ಒಳಿತು. ಬಣ್ಣಗಳ ಮೂಲಕ ಎಲ್ಲವನ್ನು ಕಲಾವಿದನಿಗೆ ಹೇಳಲು ಆಗದು. ಇದಕ್ಕಾಗಿ ನಾನು ಕೃತಿ ರಚನೆಯ ಮೊರೆ ಹೋದೆ ಎಂಬುದಾಗಿ ನಾಡಿನ ಪ್ರಸಿದ್ಧ ಕಲಾವಿದ ದೇವುದಾಸ ಆರ್.ಶೆಟ್ಟಿ ಅಭಿಪ್ರಾಯ ಪಟ್ಟರು.

ಕಳೆದ ಭಾನುವಾರ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ದೇವುದಾಸ ಶೆಟ್ಟಿ ಆಯೋಜಿಸಿದ್ದ ಕೃತಿ ಬಿಡುಗಡೆ, ವೈವಾಹಿಕ ಸ್ವರ್ಣಸಂಭ್ರಮ ಹಾಗೂಚಿತ್ರಕಲಾ ಪ್ರದರ್ಶನದಲ್ಲಿ ಮಾತನಾಡುತ್ತಾ ನಾನು ಕಾರ್ಮಿಕ ಕಲಾವಿದ. ಬದುಕಿನಲ್ಲಿ ಎಲ್ಲ ಏರಿಳಿತವನ್ನು ನೋಡಿದ್ದೇನೆ. ನಾನು ಕಲಾವೃತ್ತಿಯಲ್ಲಿ ಧೃತಿಗೆಟ್ಟಾಗ ಮಡದಿ ಸುಮಿತ್ರಾ ಶೆಟ್ಟಿ ಧೈರ್ಯ ತುಂಬಿದರು. ಕಲಾವಿದ ವ್ಯಾಪಾರಿಯಲ್ಲ, ಅವನು ಕಲೋಪಾಸಕ. ಪ್ರಕೃತಿಯನ್ನು ನೋಡಿ ಅದನ್ನು ಅರ್ಥಮಾಡಿಕೊಳ್ಳಲು ನಾನು ಕಲೆಯನ್ನು ನೆಚ್ಚಿಕೊಂಡೆ. ನನ್ನ ಚಿತ್ರಗಳು ನನ್ನ ಕೈಹಿಡಿದು ನಡೆಸಿವೆ ಎಂಬುದಾಗಿ ಅವರು ನುಡಿದರಲ್ಲದೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ನನ್ನ ಕುರಿತು ಕೃತಿಯೊಂದನ್ನು ತಂದಿರುವುದು ತುಂಬ ಸಂತೋಷವನ್ನು ನೀಡಿದೆ. ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್ ಉಪಾಧ್ಯ ಹಾಗೂ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅವರ ಪ್ರೀತಿ, ಸಹಕಾರಕ್ಕೆ ಕೃತಜ್ಞನಾಗಿರುವೆ ಎಂದರು.

`ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ' ಕೃತಿಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಬಿಡುಗಡೆ ಗೊಳಿಸಿ ಮಾತನಾಡುತ್ತಾ `ದೇವುದಾಸ ಶೆಟ್ಟಿ ಅವರು ನಾಡಿನ ಹೆಸರಾಂತ ಅಪರೂಪದ ಪ್ರತಿಭಾ ಸಂಪನ್ನ ಕಲಾವಿದ. ಕಳೆದ ಐದು ದಶಕಗಳಿಂದ ಬದುಕನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದ್ದಾರೆ. ದೇವುದಾಸ ಶೆಟ್ಟಿ ಅವರದು ಪ್ರಯೋಗಶೀಲ ಮನಸ್ಸು. ಜಲವರ್ಣ, ತೈಲವರ್ಣ, ಮ್ಯೂರಲ್ಸ್‍ಗಳಲ್ಲಿ ಸಿದ್ಧಹಸ್ತರು. ಚಿತ್ರಕಲೆಯ ಬಗೆಗೆ ಅಪಾರ ಗೌರವ ಶ್ರದ್ಧೆಯಿರುವ ಅವರು ಕರಾವಳಿ ಕರ್ನಾಟಕದ ವಿಭಿನ್ನ ಚಹರೆಗಳನ್ನು ತಮ್ಮ ಚಿತ್ರಗಳಲ್ಲಿ ಸೊಗಸಾಗಿ ಪಡಿಮೂಡಿಸಿದ್ದಾರೆ ಎಂದು ದೇವುದಾಸರ ಚಿತ್ರಕಲಾಯಾನವನ್ನು ಕೊಂಡಾಡಿದರು. ಕನ್ನಡ ವಿಭಾಗ ಬರೇ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾಷೆ, ಸಂಗೀತ, ಕಲೆ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಯನ್ನು ದಾಖಲಿಸುತ್ತಾ ಬಂದಿದೆ. ಈ ಕೃತಿ ರಚನೆಯಲ್ಲಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಶೆಟ್ಟಿ ಅವರ ಪಾತ್ರ ಗಮನಾರ್ಹಎಂದರು.

ದೇವುದಾಸ ಶೆಟ್ಟಿ ಅವರ ಮಕ್ಕಳಾದ ಸುಶ್ಮಾ ಶೆಟ್ಟಿ, ಮಿಥುನ್ ಶೆಟ್ಟಿ, ರೇಷ್ಮಾ ಶೆಟ್ಟಿ ಅವರು ತಮ್ಮ ತೀರ್ಥರೂಪರು ನಡೆಸಿದ ಕಲಾ ಯಜ್ಞ ಪ್ರಯೋಗ ಪರಿಣತಿಯನ್ನು ಹಂಚಿಕೊಂಡರು.

ಕನ್ನಡ ವಿಭಾಗದ ಸುರೇಖಾ ದೇವಾಡಿಗ ಅವರು `ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ' ಕೃತಿಯ ಪರಿಚಯವನ್ನು ಮಾಡಿಕೊಡುತ್ತಾ ಇದೊಂದು ಮಹತ್ವದ ಕೃತಿ. ದೇವುದಾಸ ಶೆಟ್ಟಿ ಅವರು ಹೆಮ್ಮೆಯ ಕಲಾವಿದಈ ಕೃತಿಯು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ 76ನೇ ಕೃತಿಯಾಗಿದೆ. ಡಾ| ಜಿ.ಎನ್ ಉಪಾಧ್ಯ ಮತ್ತು ಡಾ| ಪೂರ್ಣಿಮಾ ಶೆಟ್ಟಿ ಇವರು ಈ ಕೃತಿ ರಚಿಸಿದ್ದು, ಚಿತ್ರ ಕಲಾವಿದರಾಗಿ ದೇವುದಾಸ ಶೆಟ್ಟಿ ಅವರ ಸಾಧನೆ ಮಹತ್ತರವಾದದ್ದು. ಕತ್ತಲಾಗಿದ್ದ ಬದುಕಿಗೆ ಅವರ ಬಣ್ಣಗಳು, ಕುಂಚಗಳು ಹೊಸ ಬೆಳಕನ್ನು ನೀಡಿದ್ದು ಯಾವುದೇ ಕಲೆ ಅದು ನಿಂತ ನೀರಾಗಬಾರದೆಂದು ನಂಬಿ ಹೊಸ
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here