Friday 9th, May 2025
canara news

ವಿಮಾನ ನಿಲ್ದಾಣದಲ್ಲಿ ಮುಂಜಾನೆಯೇ ಗರ್ಜಿಸಿದ ಸಂಸದ ಸಿಂಹ ಗೋಪಾಲ್ ಶೆಟ್ಟಿ

Published On : 01 Sep 2021   |  Reported By : Rons Bantwal


ಕೋವಿಡ್ ನೆಪದಲ್ಲಿ ದೋಚುವ ಎಂವಿಎ ಸರ್ಕಾರ-ಬಿಎಂಸಿಗೆ ತರಾಟೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.29: ಕೋವಿಡ್ ಸಂಬಂಧಿ ದಾಖಲೆಗಳಿದ್ದರೂ ಕಡ್ದಾಯವಾಗಿ ಕ್ವಾರಂಟೈನ್‍ಗೆ ತಳ್ಳುವ ವಿಚಾರ ತಾರಕ್ಕೇರಿದ್ದು ಮುಂಬಯಿ ನಗರ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಆಗಮಿಸಿ ಸಮಸ್ಯೆ ಇತ್ಯಾರ್ಥ್ಯಗೈಯುವಲ್ಲಿ ಯಶಕಂಡರು.

ಇಂದಿಲ್ಲಿ ಭಾನುವಾರ ಮುಂಜಾನೆ ಮಹಾನಗರ ಪಾಲಿಕೆ ಉದ್ಯೋಗಿ ವಿರಾರ್ ಅಲ್ಲಿನ ಸುಮನ ನಯನ್ ನಯನ್ ಶಿಗ್ವಾನ್ ದಂಪತಿ ಸುಪುತ್ರ ಆಶುತೋಶ್ ಶಿಗ್ವಾನ್ ಅವರು ಪಶ್ಚಿಮ ಆಫ್ರಿಕಾದಿಂದ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸಹಾರ)ಕ್ಕೆ ಆಗಮಿಸಿದ್ದು ಆತ ಮತ್ತು ಸಹ ಪ್ರಯಾಣಿಕರಲ್ಲಿ ಕೋವಿಡ್ ಸಂಬಂಧಿ ದಾಖಲೆಗಳಿದ್ದರೂ ಬಿಎಂಸಿ ಅಧಿಕಾರಿಗಳು ಕಡ್ದಾಯವಾಗಿ ಕ್ವಾರಂಟೈನ್‍ಗೆ ತಳ್ಳುತ್ತಿದ್ದಾರೆ. ಅಧಿಕಾರಿಗಳು ಪ್ರಯಾಣಿಕರಿಗೆ ಮನೆಗೆ ಹೋಗಲು ತಡೆಯೊಡ್ಡಿ ಬೆದರಿಕೆ ಹಾಕುತ್ತಿರುವುದಾಗಿ ಸುಮನ ಅವರು ಸಂಸದ ಗೋಪಾಲ್ ಸಿ.ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ಮುಂಜಾನೆ 5.00 ಗಂಟೆಗೆ ಕರೆ ಸ್ವೀಕರಿಸಿದ ಸಂಸದರು ತಕ್ಷಣವೇ ದೌಡಾಯಿಸಿ ಸಮಸ್ಯೆ ಇತ್ಯಾರ್ಥ್ಯ ಆಗುವ ತನಕ ವಿಮಾನ ನಿಲ್ದಾಣದಲ್ಲೇ ಮೊಕ್ಕಂ ಹೂಡಿ ನ್ಯಾಯಕ್ಕಾಗಿ ಪಟ್ಟುಹಿಡಿದರು.

ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಂಸದ ಶೆಟ್ಟಿ, ಆಫ್ರಿಕಾದಿಂದ ಮುಂಬಯಿಗೆ ಆಗಮಿಸಿದ್ದವರಲ್ಲಿ ಭಾರತ ಸರ್ಕಾರದ ಆದೇಶದಂತೆ ಆರ್‍ಟಿ-ಪಿಸಿಆರ್ ಪರೀಕ್ಷಾ ವರದಿಯಿದ್ದರೂ ಕೋವಿಡ್ ಹರಡುವಿಕೆ ನೆಪವೊಡ್ಡಿ ಎರಡು ಡೋಸ್ ವ್ಹಾಕ್ಸಿನ್ ಅವಶ್ಯಕ ಇಲ್ಲವೇ ನಾವು ಸೂಚಿಸಿದ ಹೋಟೆಲ್‍ನಲ್ಲಿ ಕ್ವಾರೈಂಟಯ್ನ್ ಕಡ್ಡಾಯ ಅಥವಾ ರೂಪಾಯಿ 10,000/- ನಗದು ಭರಿಸಬೇಕಾಗುತ್ತದೆ ಎಂದು ಅಮಾಯಕ ಪ್ರಯಾಣಿಕರಲ್ಲಿ ಅತ್ಯಂತ ಭಯದ ವಾತಾವರಣ ಸೃಷ್ಠಿಸಿ ದಿಕ್ಕು ತಪ್ಪಿಸಿ ವಂಚಿಸುತ್ತಿರುವ ಮಹಾರಾಷ್ಟ್ರದ ಆರೋಗ್ಯಾಧಿಕಾರಿಗಳ ವರ್ತನೆ ದುರದೃಷ್ಟಕ ಎಂದ ಸಂಸದರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಕೊರೋನಾ ಎಚ್ಚರ ಎಲ್ಲವೂ ಓಕೆ ಆದರೆ ರೂಪಾಯಿ 10,000/- ನಗದು ಯಾಕೆ.? ಇದು ಭರಿಸಿದರೆ ಕೊರೋನಾ ಮಾಯವಾಗುತ್ತದೆಯೇ ಇದರ ಚಳಕ (ಟೆಕ್ನಿಕ್) ಏನು ಎಂದು ತಿಳಿಯುವಲ್ಲಿ ಆಸಕ್ತರಾದ ಸಂಸದರು ನಿಷ್ಠಾವಂತ ಬಿಎಂಸಿ ಆಯುಕ್ತ ಇಕ್ಭಾಲ್ ಸಿಂಗ್ ಚಹಲ್ ಇದಕ್ಕೆ ಉತ್ತರಿಸುವರೇ ನಗರ ಸೇವಕ ಕಮಲೇಶ್ ಯಾದವ್‍ಗೆ ತಿಳಿಸಿ ಇಲ್ಲವೇ ವಿಮಾನ ನಿಲ್ದಾಣದಲ್ಲೇ ಧರಣಿ ಕುಳಿತುಕೊಳ್ಳುವ ಬೆದರಿಕೆ ಒಡ್ಡಿದರು. ಅಲ್ಲದೆ ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿದ್ದ ಅಧಿಕಾರಿಗಳನ್ನು ತಕ್ಷಣಕ್ಕೆ ವಜಾ ಮಾಡುವಂತೆ ಒತ್ತಾಯಿಸಿದರು.

ನಾನು ಮಾಧ್ಯಮಗಳ ಮೂಲಕ ಇಂತಹ ಅನೇಕ ಘಟನೆಗಳನ್ನು ತಿಳಿದಿದ್ದು ಇಂದು ಮುಖತಃ ಘಟನೆಯನ್ನು ಅನುಭವಿಸಿದ್ದು ಇಂತಹ ಲೂಟಿಕೋರ ಪದ್ಧತಿಯಿಂದ ಅಮಾಯಕ ಜನರನ್ನು ಸತಾಯಿಸುವುದು ಸರಿಯಲ್ಲ.

ತಕ್ಷಣವೇ ಸರಕಾರವು ಮುಂಬಯಿ ವಿಮಾನ ನಿಲ್ದಾಣಗಳಲ್ಲಿ ಹೆಲ್ಪ್‍ಲೈನ್ ಸೆಂಟರ್‍ನ್ನು ಸ್ಥಾಪಿಸುವಂತೆ ಕೋರಿದರು. ನಾವು ಎಲ್ಲಾ ಪ್ರಯಾಣಿಕರ ಕಾಳಜಿಗೆ ಬದ್ಧರಾಗಿದ್ದು ಎಂದೂ ಅನ್ಯಾಯವಾಗಲು ಬಿಡೆವು. ಅಸಾಧ್ಯವಾದಲ್ಲಿ ನನಗೆ ಜವಾಬ್ದಾರಿ ನೀಡಿರಿ ನಾನು ಬಿಜೆಪಿ ಪಕ್ಷದ ಮೂಲಕ ನಾಳೆಯೇ ಹೆಲ್ಪ್‍ಲೈನ್ ಸೆಂಟರ್ ಸ್ಥಾಪಿಸುವೆ ಎಂದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here