Thursday 16th, September 2021
canara news

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ

Published On : 11 Sep 2021   |  Reported By : Rons Bantwal


ಹೆಚ್ಚು ಭಾಷೆಗಳನ್ನು ಕಲಿತಷ್ಟು ಒಳಿತು: ಡಾ| ರಾಧಾ ಅಯ್ಯರ್

ಮುಂಬಯಿ (ಆರ್‍ಬಿಐ), ಸೆ.09: ನಾನು ಮುಂಬಯಿಗೆ ಬಂದು ಬೇರೆ ಬೇರೆ ಭಾಷೆಗಳನ್ನು ಕಲಿತೆ. ಭಾಷೆ ಎನ್ನುವುದು ಸಂವಹನ ಕ್ರಿಯೆ. ತಮಿಳು ನನ್ನ ಮಾತೃ ಭಾಷೆ. ಒಂದು ಭಾಷೆಯನ್ನು ಅಧ್ಯಯನ ಮಾಡಲು ಅದರದ್ದೇ ಆದ ನಿಯಮಗಳಿವೆ. ಕನ್ನಡ ವಿಭಾಗದ ಮೂಲಕ ನಾನು ಕನ್ನಡ ಭಾಷೆಯನ್ನು ಕಲಿಯುತ್ತಿದ್ದಂತೆ ನನ್ನ ಅಸಕ್ತಿ ಹೆಚ್ಚುತ್ತಾ ಹೋಯಿತು. ಇಲ್ಲಿ ಕಲಿಯುವ ಇಚ್ಛೆಯಿದ್ದವರಿಗೆ ತುಂಬಾ ಪೆÇ್ರೀತ್ಸಾಹ ದೊರೆಯುತ್ತಿತ್ತು. ನಾನು ಈ ವಿಭಾಗದ ವಿದ್ಯಾಥಿರ್ü ಎಂದೇಳಲು ನನಗೆ ಸಂತಸವಾಗುತ್ತದೆ ಎಂದು ಮುಂಬಯಿ ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ರಾಧಾ ಅಯ್ಯರ್ ನುಡಿದರು.

ಇತ್ತೀಚೆಗೆ ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ಶಿಕ್ಷಕರ ದಿನಾಚರಣೆಯ ಸಂದರ್ಭ ಡಾ| ಅಯ್ಯರ್ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಮಾತನಾಡಿ ಕನ್ನಡ ವಿಭಾಗ ಕಳೆದ ಅನೇಕ ದಶಕಗಳಿಂದ ಮುಂಬೈ ಮಹಾನಗರದಲ್ಲಿ ಕನ್ನಡದ ಬಲವರ್ಧನೆಗೆ ಶ್ರಮಿಸುತ್ತಾ ಬಂದಿದೆ. ಕನ್ನಡದಲ್ಲಿ ಎಂ.ಎ, ಎಂ.ಫಿಲ್, ಪಿಎಚ್.ಡಿ ತರಗತಿಗಳಲ್ಲದೆ ಕನ್ನಡ ಬಾರದವರಿಗೆ, ಕನ್ನಡೇತರರಿಗೆ ಕನ್ನಡ ಸರ್ಟಿಫಿಕೇಟ್, ಡಿಪೆÇ್ಲಮಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಇಂದು ವಿಶ್ವವಿದ್ಯಾಲಯದ ಕನ್ನಡ ಕಲಿಕಾ ಯೋಜನೆ ಸಾಕಷ್ಟು ಜನಪ್ರಿಯವಾಗಿದ್ದು ಕನ್ನಡೇತರರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ವೈದ್ಯರು, ಇಂಜಿನಿಯರ್, ತಂತ್ರಜ್ಞರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಇಂದು ಆನ್‍ಲೈನ್‍ದಲ್ಲಿ ಕನ್ನಡ ಕಲಿಯಲು ಮುಂದೆ ಬರುತ್ತಿದ್ದಾರೆ. ಡಾ| ರಾಧಾ ಅಯ್ಯರ್ ಅವರು ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಸಂಶೋಧಕರು. ಅವರ ಮನೆಮಾತು ತಮಿಳು. ಕನ್ನಡವನ್ನು ಕಲಿತು ವಿಭಾಗದ ಪರವಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಂತಸದ ಸಂಗತಿ ಎಂದರು.

ಮುಖ್ಯ ಅತಿಥಿüಯಾಗಿ ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿ ಕನ್ನಡ ವಿಭಾಗವನ್ನು ನಾನು ಬಹಳ ವರ್ಷದಿಂದ ಹತ್ತಿರದಿಂದ ಬಲ್ಲೆ. ಕನ್ನಡ ವಿಭಾಗ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇದೊಂದು ವಿಶ್ವವಿದ್ಯಾಲಯವಾದರೂ ಸಾಮಾನ್ಯ ಜನರನ್ನೂ ಆಕರ್ಷಿಸುವಲ್ಲಿ ಯಶಸ್ಸಾಗಿದೆ. ವಿಭಾಗ ಇಂದು ಕರ್ನಾಟಕದಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಕನ್ನಡದ ಸರ್ವತೋಮುಖ ಬೆಳವಣಿಗೆ ಇಲ್ಲಿ ನಡೆಯುತ್ತಿದೆ. ಮುಂಬಯಿ ಕನ್ನಡಿಗರ ಆದರ ಪ್ರೀತಿಗೆ ಅದು ಪಾತ್ರವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಸಹಸಂಶೋಧಕರಾದ ಡಾ| ಉಮಾ ರಾಮರಾವ್, ಸುರೇಖಾ ಹೆಚ್.ದೇವಾಡಿಗ, ದಿನಕರ ನಂದಿ ಚಂದನ್, ನಳಿನಾ ಪ್ರಸಾದ್, ಗೀತಾ ಮಂಜುನಾಥ್, ಶಶಿಕಲಾ ಹೆಗಡೆ, ಶಶಿಕಲಾ ಹೆಗಡೆ, ಪ್ರತಿಭಾ ರಾವ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಪರವಾಗಿ ಡಾ| ರಾಧಾ ಅಯ್ಯರ್ ಅವರನ್ನು ಪದಕ, ಪದವಿ ಪತ್ರ ಪ್ರದಾನಿಸಿ ಗೌರವಿಸಲಾಯಿತು.

 
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಕಲಾವಿದ ವ್ಯಾಪಾರಿಯಲ್ಲ-ಕಲೋಪಾಸಕ : ದೇವುದಾಸ  ಆರ್.ಶೆಟ್ಟಿ
ಕಲಾವಿದ ವ್ಯಾಪಾರಿಯಲ್ಲ-ಕಲೋಪಾಸಕ : ದೇವುದಾಸ ಆರ್.ಶೆಟ್ಟಿ

Comment Here