Friday 9th, May 2025
canara news

ಇಂದು ಮುಂಬಯಿಯಲ್ಲಿ ಶ್ರೀ ಕೆ.ಟಿ ವೇಣುಗೋಪಾಲ್

Published On : 19 Sep 2021   |  Reported By : canaranews media network


ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರದಾನ

ಮುಂಬಯಿ, ಸೆ.18: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟಿಸಿದ್ದು, ತೃತೀಯ ಪುರಸ್ಕಾರಕ್ಕೆ ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಎಂ.ಚೇವಾರ್ ಇವರು ಆಯ್ಕೆ ಆಗಿದ್ದಾರೆ.

ಇಂದು (ಸೆ.19) ಭಾನುವಾರ ಬೆಳಿಗ್ಗೆ ಲೋಟಸ್ ಸಭಾಗೃಹ, ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ-ಮಧ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಸದಸ್ಯ ರಾಹುಲ್ ಆರ್.ಶೆವ್ಹಾಲೆ ಸಮಾರಂಭ ಉದ್ಘಾಟಿಸಲಿರುವರು. ಅತಿಥಿü ಅಭ್ಯಾಗತರುಗಳಾಗಿ ಅಜಂತಾ ಕ್ಯಾಟರರ್ಸ್ ಮುಂಬಯಿ ಇದರ ಪ್ರವರ್ತಕ ಜಯರಾಮ ಬಿ.ಶೆಟ್ಟಿ ಶ್ರೀ ಚಿತ್ತಾರಿ ಹಾಸ್ಪಿಟಲಿಟಿ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಸದರಾಮ ಎನ್.ಶೆಟ್ಟಿ, ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನಿಸುವರು ಎಂದು ಎಂದು ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಮತ್ತು ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here