Friday 26th, April 2024
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 11-12ನೇ ವಾರ್ಷಿಕ ಮಹಾಸಭೆ ಪತ್ರಕರ್ತರು ಒಂದೇ ಪರಿವಾರದಂತಿರಬೇಕು : ರೋನ್ಸ್ ಬಂಟ್ವಾಳ್

Published On : 20 Sep 2021   |  Reported By : canaranews media network


ಮುಂಬಯಿ, ಸೆ.19: ಪತ್ರಕರ್ತರು ಸಾಂಘಿಕವಾಗಿ ಬಲಶಾಲಿಗಬೇಕು. ಯಾರಲ್ಲೂ ವೈಯಕ್ತಿಕವಾಗಿ ಏನೂ ಮನಸ್ತಾಪಗಳು ಇದ್ದರೂ ಅದು ಚರ್ಚೆಗಷ್ಟೇ ಮೀಸಲಾಗಲಿ. ದ್ವೇಷ, ಅಸೂಯೆ ಮರೆತು ಐಕ್ಯತೆ ತೋರ್ಪಡಿಸುವ ಅಗತ್ಯವಿದೆ. ಸಾರ್ವಜನಿಕವಾಗಿ ಒಗ್ಗೂಡಿದಾಗ ನಾವು ಒಂದೇ ಪರಿವಾರ ಅನ್ನುವ ಸ್ವಭಾವ ಬೆಳೆಸಬೇಕು. ಈಗಿದ್ದರೆ ಸಂಘವು ಉನ್ನತಿಯತ್ತ ಸಾಗುತ್ತಾ ಪ್ರತೀ ಸದಸ್ಯ ಮತ್ತು ಕುಟುಂಬಸ್ಥರು ಲಾಭ ಪಡೆಯಬಹುದು ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್‍ನ ಕ್ಲಬ್‍ಹೌಸ್ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ತನ್ನ ಹನ್ನೊಂದು ಮತ್ತು ಹನ್ನೆರನೇ ವಾರ್ಷಿಕ ಮಹಾಸಭೆಗಳನ್ನು ಏಕಕಾಲಕ್ಕೆ ನಡೆಸಿದ್ದು ಸಭೆಯ ಅಧ್ಯಕ್ಷತೆ ವಹಿಸಿ ರೋನ್ಸ್ ಬಂಟ್ವಾಳ್ ಮಾತನಾಡಿದರು.

ನಾನು ಪ್ರಚಾರ, ಜನಪ್ರಿಯತೆಗೆ ಎಂದೂ ಸೇವೆಯಲ್ಲಿ ತೊಡಗಿಸಿಲ್ಲ. ಜನಹಿತ ಬಯಸಿ ಜನಸ್ಪಂದನೆಗಾಗಿ ಬಾಳನ್ನು ಮೀಸಲಾಗಿಟ್ಟವನು. ನನ್ನಲ್ಲಿನ ಸಂಘಟನಾ ಶಕ್ತಿಯನ್ನು ಸಹದ್ಯೋಗಿ, ಹಿರಿಕಿರಿಯ ಪತ್ರಕರ್ತ ಮಿತ್ರರು, ಕಪಸಮ ಸದಸ್ಯರಲ್ಲಿ ತಾರತಮ್ಯ ಕಾಣದೆ ಅವರೆಲ್ಲರನ್ನೂ ಒಗ್ಗೂಡಿಸಿ ಅವರೂ ಸಮಾಜದಲ್ಲಿ ಎದ್ದು ಕಾಣುವÀ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಪತ್ರಕರ್ತರ ಜೀವನ ಎಷ್ಟು ಕಷ್ಟಕರ ಅನ್ನುವುದು ತಿಳಿದರೆ ಇನ್ನು ಯಾವನೂ ಈ ವೃತ್ತಿಯನ್ನು ಅವಲಂಭಿಸಲಾರರು ಎಂದೂ ಬಂಟ್ವಾಳ್ ತಿಳಿಸಿದರು.

ಕಪಸಮ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಪ್ರ| ಅಶೋಕ ಎಸ್.ಸುವರ್ಣ, ಗೌ| ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ವೇದಿಕೆಯಲ್ಲಿ ಆಸೀನರಾಗಿದ್ದು, ನಂತರ ಸಂಘದ 2021-2022ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಪುನಃರ್ ನೇಮಕ ಗೊಳಿಸಲಾಗಿದ್ದು ಕಪಸಮ ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ ಠರಾವು ಮಂಡಿಸಿದರು.

ಪತ್ರಕರ್ತರನ್ನು ಸಮುದಾಯವನ್ನಾಗಿಸಿದ ರೋನ್ಸ್ ಬಂಟ್ವಾಳ್ ಅವರ ಸ್ಪಂದನೆ ಸ್ತುತ್ಯಾರ್ಹವಾದದು. ಪತ್ರಕರ್ತರು ಸಮಾಜದಲ್ಲಿ ಬಾರಿ ದೊಡ್ಡ ಸ್ಥಾನಮಾನವುಳ್ಳವರು. ದೇಶದ ಸೇನಾ ಪಡೆಗಳಷ್ಟೇ ಪ್ರಭಾವಿಗಳು. ಪತ್ರಕರ್ತರು ಶಕ್ತಿಶಾಲಿಗಳಾಗಿದ್ದು, ಪ್ರಾಮಾಣಿಕವಾಗಿದ್ದರೆ ಯಾವನು ತಪ್ಪು ಮಾಡಲು ಅಸಾಧ್ಯ, ಇಂಥ ಪತ್ರಕರ್ತರಿಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಸಲಹಾ ಸಿಎ| ಐ.ಆರ್ ಶೆಟ್ಟಿ ಅಭಿಪ್ರಾಯ ಪಟ್ಟರು.

ಒಂದು ರಾಷ್ಟ್ರವು ಎಷ್ಟು ಶ್ರೇಷ್ಠವಾಗಿದೆ ಅನ್ನುವುದಕ್ಕೆ ಅಲ್ಲಿನ ಪತ್ರಕರ್ತರ ಹೇಗಿದ್ದಾರೆ ಎಂಬುವುದರಿಂದ ಕಾಣುಬಹುದು. ಒಳ್ಳೆಯ ಪತ್ರಕರ್ತರಿದ್ದರೆ ಆ ಊರೇ ಸುಧಾರಣೆ ಆಗಿರುತ್ತದೆ. ಹರಿತವಾದ ಆಯುಧಗಳಲ್ಲಿ ಹಿಂಸಾತ್ಮಕವಾದ ಪೆನ್ನು ಬಹಳಷ್ಟು ಹರಿತವಾಗಿರುತ್ತದೆ. ಪೆನ್ನನ್ನು ಹಿಡಿದಂತಹ ಪತ್ರಕರ್ತರು ಲೋಕದ ಅಂಕು ಡೊಂಕುಗಳನ್ನು ತಿದ್ದಿತೀಡಿ ಪ್ರಜಾಸತ್ತಾತ್ಮಕವಾದ ರಾಷ್ಟ್ರವನ್ನು ಬಹಳ ಮುಂದೆ ಕೊಂಡೊಯ್ಯುವಲ್ಲಿ ಸಶಕ್ತರಾಗಿರುತ್ತಾರೆ ಎಂದು ಸಲಹಾಗಾರ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಸಲಹಾಗಾರ ಸುರೇಂದ್ರ ಎ.ಪೂಜಾರಿ ಮಾತನಾಡಿ ಪ್ರಾಮಾಣಿಕ ಪತ್ರಕರ್ತರನ್ನು ರೂಪಿಸಲು ಮತ್ತು ಪತ್ರಕರ್ತರಿಗೆ ಶ್ರೇಷ್ಠ ಸ್ಥಾನಮಾನ ದೊರೆಯುವಂತೆ ಮಾಡಲು ಈ ಸಂಘದ ಶ್ರಮ ಅನುಪಮವಾದದ್ದು ಎಂದರು.

ಶಿಸ್ತುಬದ್ಧವಾದ ಪತ್ರಕರ್ತತ್ವಕ್ಕೆ ಬಂಟ್ವಾಳ್ ಮಾದರಿ. ಪತ್ರಕರ್ತರನ್ನು ಶಿಸ್ತಿನ ಚೌಕಟ್ಟಿನಲ್ಲಿ ತರುವಲ್ಲಿ ಕಪಸಮ ಸಂಘದ ಉದ್ದೇಶ ಪ್ರಶಂಸನೀಯ ಎಂದು ಸದಸ್ಯ ನಿತ್ಯಾನಂದ ಡಿ.ಕೋಟ್ಯಾನ್ ನುಡಿದರು.

ಮಹಾಮಾರಿ ಕೊರೋನಾ ಮೊದಲ ಅಲೆಯ ಸಂದಿಗ್ಧ ಸಂದರ್ಭದಲ್ಲಿ ಸಂಘದ ಕೊಡುಗೆ ಸ್ಮರಣೀಯವಾದದ್ದು. ಇಂತಹ ಮನಸ್ಸು ಬೇರೆ ಸಂಘಗಳಿಗೆ ಅನುಕರಣೀಯ. ಕೆಲವೊಂದು ಪತ್ರಕರ್ತರಲ್ಲಿ ಆ ದಿನಗಳಲ್ಲಿ ಒಪೆÇ್ಪತ್ತಿನ ಊಟಕ್ಕೂ ಅಹಕಾರ ಇಲ್ಲದ್ದನ್ನು ಗಮನಿಸಿದ ಸಂಘವು ಅವರ ಮನೆಗಳಿಗೆ ರೇಷನ್ ಒದಗಿಸಿ ಸ್ಪಂದಿಸಿರುದು ಸಂಘದ ಘನತೆ ಹೆಚ್ಚಿಸಿದೆ. ಆ ಮೂಲಕ ಸಂಘ ಕಟ್ಟಿದ ಧ್ಯೇಯೋದ್ದೇಶ ಮರೆಯದೆ ಪಾಲಿಸಿದೆ ಎಂದು ವಿಶೇಷ ಆಮಂತ್ರಿತ ಸದಸ್ಯ ಗೋಪಾಲ್ ತ್ರಾಸಿ ತಿಳಿಸಿದರು.

ಸಭೆಯಲ್ಲಿ ಕಪಸಮ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ಕೆ.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ, ಜಯಂತ್ ಕೆ.ಸುವರ್ಣ, ಸಲಹಾ ಸಮಿತಿ ಸದಸ್ಯರಾದ ಡಾ| ಸುನೀತಾ ಎಂ.ಶೆಟ್ಟಿ, ಗ್ರೇಗೋರಿ ಡಿಅಲ್ಮೇಡಾ, ಪಂ| ನವೀನ್‍ಚಂದ್ರ ಆರ್.ಸನೀಲ್, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ (ದಯಾನಂದ್ ಸಾಲ್ಯಾನ್), ಸದಾನಂದ ಕೆ.ಸಫಲಿಗ ಶಿರ್ವಾ, ಸವಿತಾ ಎಸ್.ಶೆಟ್ಟಿ, ಕರುಣಾಕರ್ ವಿ.ಶೆಟ್ಟಿ ಉಪಸ್ಥಿತರಿದ್ದÀರು. ನಿನ್ನೆಯಷ್ಟೇ ನಿಧನರಾದ ಕಪಸಮ ಹಿರಿಯ ಸದಸ್ಯ ಶ್ರೀಪತಿ ಎಸ್.ಚಂಪಾ ಹಾಗೂ ಗತ ಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಲಾಯಿತು.

ರಂಗ ಎಸ್.ಪೂಜಾರಿ ಸ್ವಾಗತಿಸಿದರು. ಅಶೋಕ ಎಸ್. ಸುವರ್ಣ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ನಾಗೇಶ್ ಪೂಜಾರಿ ಏಳಿಂಜೆ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಶಿವ ಮೂಡಿಗೆರೆ ಸಂಘದ ಸೇವೆಗಳನ್ನು ಭಿತ್ತರಿಸಿದರು. ರವೀಂದ್ರ ಶೆಟ್ಟಿ ತಾಳಿಪಾಡಿ ವಾರ್ಷಿಕ ಚಟುವಟಿಕೆಗಳ ಮಾಹಿತಿ ತಿಳಿಸಿ ಕೊನೆಯಲ್ಲಿ ಧನ್ಯವದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here