Friday 19th, April 2024
canara news

ಮುನ್ನೂರು: ವೆಲ್ಫೇರ್ ಅಸೋಸಿಯೇಶನ್ ರಾಣಿಪುರ ಸಂಘಟನೆ ಉದ್ಘಾಟನೆ

Published On : 26 Sep 2021   |  Reported By : Ronida Mumbai


ಸಮಾಜದ ಅಭ್ಯುದಯಕ್ಕೆ ಸಂಸ್ಥೆಗಳು ಅವಶ್ಯ : ಫಾ| ಜಯಪ್ರಕಾಶ್ ಡಿಸೋಜ


ಮುಂಬಯಿ (ಆರ್‍ಬಿಐ), ಸೆ.26: ಸೇವೆಯ ಮೂಲಕ ಸಮಾಜದ ಅಭ್ಯುದಯಕ್ಕೆ ಒಂದು ಸಂಘಟನೆ. ಸೇವೆಯ ಆರಂಭದದಿಂದಲೇ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜದ ಅವಕಾಶಗಳನ್ನು ಪೂರೈಸಲು ಸಂಘಟನೆ ಶ್ರಮಿಸಲಿ ಎಂದು ಮೇರಿ ಚಚ್9 ರಾಣಿಪುರ ಇದರ ಧರ್ಮಗುರು ರೆ| ಫಾ| ಜಯಪ್ರಕಾಶ್ ಡಿಸೋಜ ಹೇಳಿದರು.

ಮಂಗಳೂರು ಇಲ್ಲಿನ ಮುನ್ನೂರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಇಂದಿಲ್ಲಿ ಭಾನುವಾರ ವೆಲ್ಫೇರ್ ಅಸೋಸಿಯೇಶನ್ ರಾಣಿಪುರ ಇದರ ಉದ್ಘಾಟನೆ ನೆರವೇರಿಸಿ ಸಮಾಜದ ಎಲ್ಲರ ಜತೆಗೆ ಸಕ್ರಿಯವಾಗಿರಲು ಸಂಘಟನೆ ಶ್ರಮಿಸಲಿ. ಎಲ್ಲಾ ಸದಸ್ಯರು ಏಕಮನಸ್ಸಿನಿಂದ ಪರಿಸರದಲ್ಲಿ ಜ್ಯೋತಿಯಾಗಿ ಸಂಘಟನೆ ಬೆಳೆದು , ಹಲವು ಮಂದಿಗೆ ಸೇವೆ ನಡೆಸುವಂತಾಗಲಿ ಎಂದು ಫಾ| ಜಯಪ್ರಕಾಶ್ ಅನುಗ್ರಹ ನುಡಿಗಳನ್ನಾಡಿ ಶುಭ ಹಾರೈಸಿದರು.

ಋಷಿವನ ಸಂಸ್ಥೆ ರಾಣಿಪುರ ಇದರ ನಿರ್ದೇಶಕ ವಿಲ್ಫ್ರೆಡ್ ರೋಡ್ರಿಗಸ್ ಸಂಸ್ಥೆಯ ಲಾಂಛನ ಬಿಡುಗಡೆ ಗೊಳಿಸಿ ಮಾತನಾಡಿ ಸಂತೋಷದ ಯುದ್ಧ ಆರಂಭವಾಗಿದೆ. ಸೇವೆಯ ಮುಖಾಂತರ ಸಮಾಜದ ಏಳಿಗೆಯ ಯುದ್ಧ ಇದಾಗಿದೆ. ಹಳ್ಳಿ ಜನರ ಮನಸ್ಸು ವಿಶಾಲವಾದುದು. ಕೆಥೋಲಿಕರು ಸಾರ್ವತ್ರಿಕ ವಿಶಾಲ ಹೃದಯದವರು. ಕೋವಿಡ್ ಬರಲಿ ಡೇವಿಡ್ ಬರಲಿ ಸಮಾಜದ ಏಳಿಗೆಗಾಗಿ ದುಡಿದ ವಿಶಾಲ ಹೃದಯದವರು. 2008ರಲ್ಲಿ ಕೋಮುಶಕ್ತಿಗಳು ದಾಳಿ ನಡೆಸಿದಾಗಲೂ, ರಾಣಿಪುರದ ಯುವಕರು ಒಗ್ಗಟ್ಟಾಗಿದ್ದವರು ಎಂದರು.

ರಾಣಿಪುರ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಮೀನಾ ಸಂಘಟನೆಯ ಸಾಮಾಜಿಕ ಜಾಲತಾಣ ಅನಾವರಣ ಗೊಳಿಸಿ ಶುಭಾರೈಸಿದರು.

ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ ಅತಿಥಿü ಅಭ್ಯಾಗತರುಗಳಾಗಿ ಸಂಘಟನೆ ಉಪಾಧ್ಯಕ್ಷ ಎರಾಲ್ಡ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕುವೆಲ್ಹೋ, ಪ್ರವೀಣ್ ಡಿಸೋಜ, ಟೈಟಸ್ ಡಿಸೋಜ ವೇದಿಕೆಯಲ್ಲಿದ್ದರು.

ಸಂಸ್ಥೆಯ ಅಧ್ಯಕ್ಷ ಜೋಸೆಫ್ ಪಾವ್ಲ್ ಸ್ವಾಗತಿಸಿದರು. ಫೆಲಿಕ್ಸ್ ಮೊಂತೇರೋ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಫೆರಾವೋ ವಂದಿಸಿದರು.

ಈ ಸಂದರ್ಭ ಸಂಘಟನಾ ಸೇವಾ ಕಾರ್ಯಗಳಿಗೆ ಮೇರಿ ಡಿಸೋಜ ಇವರು ರೂಪಾಯಿ 1 ಲಕ್ಷ ಧನವನ್ನು ಹಸ್ತಾಂತರಿಸಿದರು. ಅಂತೆಯೇ ಸಂಘಟನೆ ವತಿಯಿಂದ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಸ್ವೀಟಿ ಮೆಲ್ವಿಟಾ ಡಿಸೋಜ ಅವರಿಗೆ ರೂಪಾಯಿ 50,000/- ಸಹಾಯಧನ ಘೋಷಿಸಿದರು. ಎಮರ್ಜೆನ್ಸಿ ಆಕ್ಟಿಂಗ್ ಟೀಂ ನ ನೇತೃತ್ವವನ್ನು ಎರಾಲ್ಟ್ ಅಲ್ಬುಕಕ್9, ನವೀನ್ ಡಿಸೋಜ ಹಾಗೂ ವಿಲ್ಫ್ರೆಡ್ ಡಿಸೋಜ ವಹಿಸಿರುವುದಾಗಿ ಸಂಘಟಕರು ತಿಳಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here