Saturday 4th, December 2021
canara news

ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಮುಂಬಯಿ ವತಿಯಿಂದ

Published On : 26 Sep 2021   |  Reported By : Rons Bantwal


ಸೆ.28: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಉಚಿತ ನೇತ್ರ ತಪಾಸಣೆ

ಮುಂಬಯಿ (ಆರ್‍ಬಿಐ), ಸೆ.26: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರು ತನ್ನ ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಮುಂಬಯಿ ನೇತೃತ್ವದಲ್ಲಿ ಇದೇ ಸೆ.28ರ ಮಂಗಳವಾರ ಉಡುಪಿ ಬಾರ್ಕೂರು ಇಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಿದೆ.

ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಬಾರ್ಕೂರು ಮತ್ತು ಭಂಡಾರಿ ಮಹಾ ಮಂಡಲ (ರಿ.) ಇವುಗಳ ಸಹಯೋಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಾರ್ಕೂರು ಇವರುಗಳ ಸಹಭಾಗಿತ್ವದಲ್ಲಿ ಅಂದು ಬೆಳಿಗ್ಗೆ 9.00 ಗಂಟೆಯಿಂದ ಸಾಯಂಕಾಲ 9.00 ಗಂಟೆ ವರೇಗೆ ನೇತ್ರ ತಪಾಸಣೆ ನಡೆಯಲಿದೆ.

ಶಿಬಿರದಲ್ಲಿ ಧರ್ಮಾರ್ಥವಾಗಿ ಕಣ್ಣಿನ ತಪಾಸಣೆ ನಡೆಸಲಾಗುವುದು. ಕಣ್ಣಿನ ಪೆÇರೆ ಶಸ್ತ್ರ ಚಿಕಿತ್ಸೆಗೆ ಆಯ್ದವರಿಗೆ ಗೊತ್ತು ಪಡಿಸಿದ ದಿನಾಂಕದಂದು ಉಡುಪಿ ಇಲ್ಲಿನ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ಸ್ವ ವಹಾನದಲ್ಲಿ ಒಯ್ದು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. ಅವಶ್ಯವುಳ್ಳವರಿಗೆ ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಮುಂಬಯಿ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು, ಸ್ಥಾನೀಯ ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ಟ್ರಸ್ಟ್‍ನ ವಿಶ್ವಸ್ಥರಾದ ಶೋಭಾ ಸುರೇಶ್ ಭಂಡಾರಿ ಕಡಂದಲೆ ಮತ್ತು ಸೌರಭ್ ಎಸ್.ಭಂಡಾರಿ (ಅಂಬರ್ ಕೇಟರರ್ಸ್ ಚಿತ್ರದ ನಾಯಕÀ ನಟ) ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ (9845053390/ 9845224740/ 8453006866) ಮೊಬಾಯ್ಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಶಿಬಿರದ ಸಂಘಟಕರು ಹಾಗೂ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಬಾರ್ಕೂರು ಮತ್ತು ಭಂಡಾರಿ ಮಹಾ ಮಂಡಲ (ರಿ.) ಇದರ ಪರವಾಗಿ ಸೋಮಶೇಖರ್ ಎಂ.ಭಂಡಾರಿ ತಿಳಿಸಿದ್ದಾರೆ.

 
More News

ಧರ್ಮಸ್ಥಳ ಲಕ್ಷ ದೀಪೆÇೀತ್ಸವ: ಸರ್ವಧರ್ಮ ಸಮ್ಮೇಳನ-89ನೆ ಅಧಿವೇಶನ ಉದ್ಘಾಟನೆ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯ - ರಾಜ್ಯಪಾಲ ಥಾವರ್‍ಚಂದ್
ಧರ್ಮಸ್ಥಳ ಲಕ್ಷ ದೀಪೆÇೀತ್ಸವ: ಸರ್ವಧರ್ಮ ಸಮ್ಮೇಳನ-89ನೆ ಅಧಿವೇಶನ ಉದ್ಘಾಟನೆ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯ - ರಾಜ್ಯಪಾಲ ಥಾವರ್‍ಚಂದ್
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ  ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

Comment Here