Monday 25th, September 2023
canara news

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಕನ್ನಡಿಗರ ಹಿರಿಮೆ

Published On : 25 Sep 2021   |  Reported By : Rons Bantwal


ಕಾಸರಗೋಡುನ ಅಭಿನಂದನಾ ಸಮಾರಂಭ ಎಡನೀರು ಶ್ರೀಸಚ್ಚಿದಾನಂದ ಭಾರತೀ

ಕಾಸರಗೋಡು (ಕುಂಬಳೆ), ಸೆ.25: ಮಾಧ್ಯಮ ವಲಯದ ಸಮಗ್ರ ಆಶೋತ್ತರಗಳ ಸಾಕಾರತೆಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಕಾರ್ಯನಿರ್ವಹಿಸುತ್ತಿರುವುದು ಸ್ತುತ್ಯರ್ಹ. ಪತ್ರಕರ್ತ ಅಚ್ಯುತ ಚೇವಾರರಿಗೆ ಒದಗಿಬಂದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕೊಡಮಾಡಿದ ಶ್ರೀ ಕೆ.ಟಿ.ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2021 ಜಿಲ್ಲೆಯ ಕನ್ನಡ ಮಾಧ್ಯಮ ಕ್ಷೇತ್ರದ ಹೆಮ್ಮೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಗುರುತಿಸುವಿಕೆಯಲ್ಲಿ ಶ್ರೀ ಕೆ.ಟಿ.ವೇಣುಗೋಪಾಲ್ ಸ್ಮಾರಕ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ವಿಜೇತ ಅಚ್ಯುತ ಚೇವಾರ್ ಅವರಿಗೆ ಇಂದಿಲ್ಲಿ ಶನಿವಾರ ಕಾಸರಗೋಡು ಬಂದ್ಯೋಡು ಸಮೀಪದ ವಳಯಂನ ಡಿ.ಎಂ ಕಬನಾ ರಿಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ಮಾತನಾಡಿ, ಕಾಸರಗೋಡಿನ ಕನ್ನಡ ಅಸ್ಮಿತೆಯ ಉಳಿಯುವಿಕೆಗೆ ಪತ್ರಕರ್ತರ ಕೊಡುಗೆ ಮಹತ್ತರವಾದುದು. ಆದರೆ ನ್ಯಾಯಯುತ ಸವಲತ್ತುಗಳಿಂದ ವಂಚಿತರಾದ ಕಾಸರಗೋಡುನ ಕನ್ನಡ ಮಾಧ್ಯಮ ಕ್ಷೇತ್ರದ ನೆರವಿಗೆ ಕೇರಳ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ಭರವಸೆ ನೀಡಿದರು.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದು ಬೇಳ ಶೋಕಮಾತಾ ದೇವಾಲಯದ ಧರ್ಮಗುರು ರೆ| ಫಾ| ಸ್ಟ್ಯಾನಿ ಪಿರೇರ ಉಪಸ್ಥಿತರಿದ್ದು ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅವರ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಜಿ.ಪಂ.ಸದಸ್ಯ ಗೋಲ್ಡನ್ ರಹಮಾನ್ ಉದ್ಘಾಟಿಸಿದರು.

ಹಿರಿಯ ದಂತ ವೈದ್ಯ ಡಾ| ಮುರಳೀ ಮೋಹನ್ ಚೂಂತಾರು, ಹಿರಿಯ ಪತ್ರಕರ್ತ ಸುರೇಂದ್ರನ್ ಕೆ., ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ, ಮಂಗಳೂರು ಒಮೇಗಾ ಆಸ್ಪತ್ರೆಯ ಆಡಳಿತಾಧಿಕಾರಿ ಎಸ್.ಎಲ್ ಭಾರದ್ವಾಜ್ ಅತಿಥಿüಗಳಾಗಿ ಮತ್ತು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಯಾದವ್ ಸ್ವಾಗತಿಸಿದರು. ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ನಾಯ್ಕಾಪು ನಿರೂಪಿಸಿದರು. ಖಜಾಂಜಿ ಪುರುಷೋತ್ತಮ ಪೆರ್ಲ ವಂದಿಸಿದರು.

ಬಳಿಕ ಸುಜಾತಾ ಮುಳ್ಳೇರಿಯ ಅವರಿಂದ ಕೂಚುಪುಡಿ ನೃತ್ಯ, ಅಭಿಜ್ಞಾ ಹರೀಶ್ ಕರಂದಕ್ಕಾಡ್ ಅವರು ನೃತ್ಯ-ಯೋಗ ಪ್ರದರ್ಶನ ಸಹಿತ ವಿವಿಧ ಸಾಸ್ಕøತಿಕ ವೈವಿಧ್ಯ ಪ್ರಸ್ತುತ ಪಡಿಸಿದರು. ಬಾಲಪ್ರತಿಭೆ ಸಮನ್ವಿತಾ ಗಣೇಸದ್ ಅಣಂಗೂರು ಅವರು ಭಾವಗೀತಾ ಗಾಯನ ಹಾಗೂ ಅಭಿಜ್ಞಾ ಹರೀಶ್ ಅªರು ಯೋಗ ಪ್ರದರ್ಶನ ನಡೆಸಿದರು.

 
More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here