Monday 25th, October 2021
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ

Published On : 24 Sep 2021   |  Reported By : Rons Bantwal


ಮುಂಬಯಿ, ಸೆ.21: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕಳೆದ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್‍ಇದರ ಕ್ಲಬ್ ಹೌಸ್‍ನ ದಿ| ಶ್ರೀ ಆನಂದ ಕೆ.ಪೂಜಾರಿ ಪಾಲಡ್ಕ ಸಭಾಗೃಹದಲ್ಲಿನ ದಿ| ಶ್ರೀಮತಿ ಅಪ್ಪಿ ಕೃಷ್ಣ ಶೆಟ್ಟಿ ಕಂಬಿಹಳ್ಳಿ-ಚಿಕ್ಕಮಗಳೂರು ವೇದಿಕೆಯಲ್ಲಿ ಅಗಲಿದ ಪತ್ರಕರ್ತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿತ್ತು.

ಮಹಾರಾಷ್ಟ್ರ ರಾಜ್ಯದ ಪತ್ರಿಕೋದ್ಯಮದ ಯಶೋಗಾಥೆ, ಕರ್ನಾಟಕ ಮಲ್ಲ ಪತ್ರಿಕೆಯ ಯಜಮಾನರಾಗಿದ್ದು ನಿಧನರಾದ ಮುರಳೀಧರ ಅನಂತ ಶಿಂಗೋಟೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ನಿಕಟಪೂರ್ವ ಕಾರ್ಯಧ್ಯಕ್ಷ, ಜಯ ಸಿ.ಸುವರ್ಣ, ಕಪಸಮ ಅಜೀವ ಸದಸ್ಯ, ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ.ಕುಕ್ಯಾನ್, ಕಪಸಮ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಅವರ ಮಾತೃಶ್ರೀ ಸೀತಮ್ಮ ಎಸ್.ಪಿ ಮೂಡಿಗೆರೆ, ಕಪಸಮ ಮಾಜಿ ಜೊತೆ ಕೋಶಾಧಿಕಾರಿ ಸುರೇಶ್ ಆಚಾರ್ಯ, ಕಪಸಮ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಜನಾರ್ದನ ಎಸ್.ಪುರಿಯಾ, ಹಿರಿಯ ಸದಸ್ಯರುಗಳಾಗಿದ್ದ ದೊಡ್ಡಯ್ಯ ಆರ್.ಸಾಲ್ಯಾನ್, ಶ್ರೀಪತಿ ಎಸ್.ಚಂಪ ಹೆಜಮಾಡಿ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ ಅವರ ತೀರ್ಥರೂಪರಾದ ಸಂಪದಮನೆ ನಾಗಯ್ಯ ಶೆಟ್ಟಿ, ಸಲಹಾ ಸಮಿತಿ ಸದಸ್ಯ ಪಂ| ನವೀನ್‍ಚಂದ್ರ ಸನೀಲ್ ಅವರ ಮಾತೃಶ್ರೀ ಗುಲಾಬಿ ರಾಮ ಸನಿಲ್, ಕಾರ್ಯಕಾರಿ ಸಮಿತಿ ಸದಸ್ಯೆ ಅನಿತಾ ಪಿ.ಪೂಜಾರಿ ತಾಕೋಡೆ ಅವರ ತೀರ್ಥರೂಪರಾದ ಶ್ರೀನಿವಾಸ ಪೂಜಾರಿ, ಕಪಸಮ ಅಜೀವ ಸದಸ್ಯ ಡಾ| ಶಿವರಾಮ ಕೆ.ಭಂಡಾರಿ ಅವರ ಮಾತೃಶ್ರೀ ಶ್ರೀಮತಿ ಗುಲಾಬಿ ಕೃಷ್ಣ ಭಂಡಾರಿ, ಸಲಹಾ ಸಮಿತಿ ಸದಸ್ಯ ಡಾ| ಆರ್.ಕೆ.ಶೆಟ್ಟಿ ಅವರ ಮಾತೃಶ್ರೀ ಅಪ್ಪಿ ಕೃಷ್ಣ ಶೆಟ್ಟಿ, ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ ಅವರ ತೀರ್ಥರೂಪರಾದ ಆನಂದ ಕೆ.ಪೂಜಾರಿ ಪಾಲಡ್ಕ ವಿಶೇಷ ಆಮಂತ್ರಿತ ಸದಸ್ಯ ಹರೀಶ್ ಹೆಜಮಾಡಿ ಅವರ ಮಾತೃಶ್ರೀ ಕಮಲ ಕೆ.ಅಮೀನ್, ಕಾರ್ಯಕಾರಿ ಸಮಿತಿ ಸದಸ್ಯ ಜಯಂತ್ ಕೆ. ಸುವರ್ಣ ಅವರ ಮಾತೃಶ್ರೀ ವಿಮಲ ಕೆ.ಸುವರ್ಣ, ಸದಸ್ಯ ರಮೇಶ್ ಜೆ.ಮರೋಳಿ ಅವರ ಮಾತೃಶ್ರೀ ಕೂಸಮ್ಮ ಜೆ.ಮರೋಳಿ, ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ, ಹಿರಿಯ ಪತ್ರಕರ್ತ ಪೆÇ್ರ| ಶಿವ ಬಿಲ್ಲವ ಹಾಗೂ ಗತ ಸಾಲಿನಲ್ಲಿ ಅಗಲಿದ ನಾಡಿನ ಎಲ್ಲಾ ಹಿರಿಯ, ಕಿರಿಯ ಪತ್ರಕರ್ತರಿಗೆಲ್ಲರಿಗೂ, ಕಪಸಮ ಇದರ ಹಿತೈಷಿಗಳು, ದಾನಿಗಳಿಗೂ ಸಂಘವು ಶ್ರದ್ಧಾಂಜಲಿ ಅರ್ಪಿಸಿತು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಸುರೇಂದ್ರ ಎ.ಪೂಜಾರಿ (ಸಾಯಿ ಕೇರ್), ಭಾರತ್ ಬ್ಯಾಂಕ್‍ನ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಅಕ್ಷಯ ಮಾಸಿಕದ ಪ್ರಧಾನ ಸಂಪಾದಕ ಡಾ| ಈಶ್ವರ ಅಲೆವೂರು, ರಜಕ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಸತೀಶ್ ಎಸ್.ಸಾಲ್ಯಾನ್, ಡಾ| ಶಿವರಾಮ ಕೆ.ಭಂಡಾರಿ ಕಾರ್ಕಳ, ಪಂಡಿತ್ ನವೀನ್‍ಚಂದ್ರ ಆರ್.ಸನೀಲ್, ಡಾ| ಶಿವ ಮೂಡಿಗೆರೆ, ಸದರಾಮ ಎನ್.ಶೆಟ್ಟಿ, ರಮೇಶ್ ಜೆ.ಮರೋಳಿ, ಜಯಂತ್ ಕೆ.ಸುವರ್ಣ, ಅನಿತಾ ಪಿ.ಪೂಜಾರಿ, ಕಪಸಮ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ, ಗೌ| ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಜತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಗೌ| ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ ವೇದಿಕೆಯಲ್ಲಿದ್ದು ಭಾವಚಿತ್ರಗಳಿಗೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಅರ್ಪಿಸಿದರು.

ಕಪಸಮ ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ ಅವರು ದಿ| ಅಪ್ಪಿ ಕೃಷ್ಣ ಶೆಟ್ಟಿ ವೇದಿಕೆ ಹಾಗೂ ದಿ| ಆನಂದ ಕೆ.ಪೂಜಾರಿ ಪಾಲಡ್ಕ ಸಭಾಗೃಹ ಬಗ್ಗೆ ತಿಳಿಸಿ ಸಂತಾಪ ಸೂಚನಾಸಭೆ ನಿರ್ವಹಿಸಿ ಅಗಲಿ ಮರೆಯಾಗಿ ಸ್ವರ್ಗ ಸಾಗರದಲ್ಲಿ ಲೀನವಾದ ಶ್ರದ್ಧಾಳು ಆತ್ಮಜ್ಯೋತಿಗಳಿಗೆ ಶ್ರೀಹರಿಯು ಚಿರಶಾಂತಿ, ಸದ್ಗತಿ ದಯಪಾಲಿಸಲಿ ಎಂದು ಪ್ರಾಥಿರ್üಸಿದರು.
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here