Friday 9th, May 2025
canara news

ಧರ್ಮಸ್ಥಳದ ಹೆಗ್ಗಡೆ ಬೀಡಿನಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ನಿರ್ವಹಣಾ ಒಪ್ಪಂದ

Published On : 28 Sep 2021   |  Reported By : Rons Bantwal


ಶುದ್ಧ ಗಂಗಾ ಯೋಜನೆ ಪ್ರಶಂಸೆಗೆ ಪಾತ್ರವಾಗಿದೆ- ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮುಂಬಯಿ (ಆರ್‍ಬಿಐ), ಸೆ.27: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದಲ್ಲಿ ರುವ ಆಯ್ದ ನಲ್ವತ್ತು ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳಿಗೆ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಉಚಿತ ಸೋಲಾರ್ ಇನ್ವರ್ಟರ್‍ಗಳನ್ನು ಅಳವಡಿಸುವ ಬಗ್ಗೆ ಸೋಮವಾರ ಧರ್ಮಸ್ಥಳದಲ್ಲಿ ಹೆಗ್ಗಡೆ ಅವರ ಬೀಡಿನಲ್ಲಿ (ನಿವಾಸ) ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಾರ್ಷಿಕ ನಿರ್ವಹಣಾ ಒಪ್ಪಂದ ಮಾಡಿಕೊಳ್ಳಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್ ಮತ್ತು ಸೋಶಿಯಲ್ ಆಲ್ಫಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಕುಮಾರ್ ಒಪ್ಪಂದ ಪತ್ರಗಳ ವಿನಿಮಯ ಮಾಡಿಕೊಂಡರು.

ಕರಾರಿನಂತೆ ಪ್ರತೀ ಘಟಕಕ್ಕೆ 6 ಲಕ್ಷ ರೂಪಾಯಿ ವೆಚ್ಚದಂತೆ 40 ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳಿಗೆ ಒಟ್ಟು 2.40 ಕೋಟಿ ರೂಪಾಯಿ ವೆಚ್ಚದೊಂದಿಗೆ ಒಂದು ವರ್ಷದ ವರೆಗೆ ನಿರ್ವಹಣೆಯನ್ನು ಸೆಲ್ಕೊ ಪ್ರತಿಷ್ಠಾನ ಉಚಿತವಾಗಿ ಮಾಡಲಿದೆ. ಸಂಪೂರ್ಣ ಸೋಲಾರ್‍ನಿಂದಲೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಡೆಸುವ ಹೊಸ ಪ್ರಯತ್ನ ಇದಾಗಿದ್ದು ಮಾದರಿ ಕಾರ್ಯಕ್ರಮವಾಗಿದೆ ಎಂದರು.

ವೀರೇಂದ್ರ ಹೆಗ್ಗಡೆ ಶುಭ ಹಾರೈಸಿ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಿದ ಶುದ್ಧ ಗಂಗಾ ಯೋಜನೆ ಮಾದರಿ ಕಾರ್ಯಕ್ರಮವಾಗಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೂ ಸೌರಶಕ್ತಿಯ ಬಳಕೆ ಬಗ್ಯೆಅರಿವು, ಜಾಗೃತಿ ಮೂಡಿ ಬಂದಿದೆ. ವಿದ್ಯುತ್ ಉಳಿತಾಯದೊಂದಿಗೆ ಎಲ್ಲರಿಗೂ ನಿರಂತರ ಪರಿಶುದ್ಧ ಕಡಿಯುವ ನೀರು ಒದಗಿಸಲು ಅನುಕೂಲವಾಗಿದೆ ಎಂದು ಶ್ಲಾಘಿಸಿದರು. ಮುಂದೆಅಡುಗೆ ಮನೆಯಲ್ಲಿಯೂ ಸೋಲಾರ್ ಬಳÀಸುವ ಬಗ್ಯೆ ಪ್ರಯತ್ನಿಸಲಾಗುವುದು ಎಂದರು.

ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಹರೀಶ್ ಹಂಧೆ ಮಾತನಾಡಿ, ಸೋಲಾರ್ ಬಳಕೆ ಬಗ್ಗೆ ಧರ್ಮಸ್ಥಳದ ಸೇವೆ, ಸಾಧನೆ ಮತ್ತು ಯಶಸ್ಸನ್ನು ಶ್ಲಾಘಿಸಿ ಅಭಿನಂದಿಸಿದರು.

ಎಲ್.ಹೆಚ್ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ 321 ಶುದ್ಧಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ.ಎಲ್ಲರಿಗೂಕಡಿಮೆದರದಲ್ಲಿ ಶುದ್ಧ ನೀರು ಪೂರೈಸಲಾಗುತ್ತದೆ. ಪ್ರಸ್ತುತ ಸುಮಾರು 81,000 ಮಂದಿ ಬಳಕೆದಾರರು ಪ್ರತಿ ದಿನ 16,20,00 ಲೀಟರ್ ಶುದ್ಧ ನೀರನ್ನು ಘಟಕಗಳಿಂದ ಪಡೆಯುತ್ತಿದ್ದಾರೆಎಂದು ಮಾಹಿತಿ ನೀಡಿದರು. ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆಅಕ್ವಾಸಫಿ ಮತ್ತುಅಕ್ವಾಶೈನ್ ಕಂಪೆನಿಗಳೊಂದಿಗೆ ವಾರ್ಷಿಕ ನಿರ್ವಹಣಾಒಪ್ಪಂದ ಮಾಡಿಕೊಂಡಿದ್ದು, ಗ್ರಾಮಾಭಿವೃದ್ಧಿಯೋಜನೆಯ 25 ಮಂದಿ ಮೇಲ್ವಿಚಾರಕರು ಹಾಗೂ 338 ಮಂದಿ ಪ್ರೇರಕರುಕರ್ತವ್ಯ ನಿರ್ವಹಿಸುತ್ತಿದ್ದಾರೆಎಂದುಅವರು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಎಸ್.ಎಸ್., ಪ್ರಾದೇಶಿಕ ಹಣಕಾಸು ನಿರ್ದೇಶಕರಾದ ಶಾಂತರಾಮ ಪೈ, ಸೆಲ್ಕೊ ಸೋಲಾರ್‍ನ ಸಿಇಒ ಮೋಹನ ಭಾಸ್ಕರ ಹೆಗಡೆ, ಪ್ರಧಾನ ವ್ಯವಸ್ಥಾಪಕ ಜಗದೀಶ ಪೈ, ಸೆಲ್ಕೊ ಸೋಲಾರ್‍ನ ಗುರುಪ್ರಸಾದ್ ಶೆಟ್ಟಿ, ಸಸ್ಟೈನ್ ಪ್ಲಸ್‍ನ ಸುಪ್ರಿಯಾ ಗೌಡ, ಶುದ್ಧಗಂಗಾ ವಿಭಾಗದ ನಿರ್ದೇಶಕ ಲಕ್ಷ್ಮಣ ಎಂ. ಮತ್ತು ಯೋಜನಾಧಿಕಾರಿ ಯುವರಾಜ ಜೈನ್ ಉಪಸ್ಥಿತರಿದ್ದು ಸಮುದಾಯಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here