Thursday 28th, September 2023
canara news

ಬಜಗೋಳಿ ಸುಮ್ಮ ಬಂಡ ಶಾಲೆಯಲ್ಲಿ ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮ

Published On : 28 Sep 2021   |  Reported By : Rons Bantwal


ಕ್ಷಮೆ ಯಾಚನೆಯಿಂದ ಮನ ಶಾಂತತೆ: ಭಾರತ ಭೂಷಣ ಚಾರುಕೀರ್ತಿಶ್ರೀ

ಮುಂಬಯಿ (ಆರ್‍ಬಿಐ), ಸೆ.27: ಧರ್ಮ ಶಾಲೆ ಟ್ರಸ್ಟ್ ಬಜಗೋಳಿ ಹಾಗೂ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಬಜಗೋಳಿ ಜಂಟಿ ಆಶ್ರಯದಲ್ಲಿ ಕಳೆದ ಭಾನುವಾರ ಸಾಮೂಹಿಕ ಕ್ಷಮಾವಳಿ ಹಾಗೂ ಧವಲತ್ರಯ ಹಾಗೂ ಜೈನ ಕಾಶಿ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲೆ ಬಸದಿ ಅರ್ಚಕರಿಗೆ ಉಚಿತ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಆಯೋಜಿಸಲಾಗಿತ್ತು.

ಬಜಗೋಳಿ ಸುಮ್ಮ ಬಂಡಶಾಲೆ ಧರ್ಮ ಶಾಲೆಯ `ಸುಮ್ಮಗುತ್ತು ಶಂಕರ ಹೆಗ್ಡೆ' ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಶ್ರೀ ದಿಗಂಬರ ಜೈನ ಮಠ ಜೈನ ಕಾಶಿ ಮೂಡಬಿದಿರೆ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ, ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಚಿತ್ತೈಸಿ ಸಮವಸರಣ ಪ್ರತೀಕವಾದ ಜೈನ ಬಸದಿ ಶ್ರಾವಕ ಶ್ರಾವಿಕೆಯರು ಧರ್ಮ ಅನುಷ್ಠಾನ ನಡೆಸುವ ಸಂಸ್ಕಾರ ಕೇಂದ್ರ ಅರ್ಚಕರು ಬಸದಿ ಪೂಜಾ ಸೇವೆ ಸಲ್ಲಿಸಿ ಶ್ರಾವಕರೊಂದಿಗೆ ಧರ್ಮ ಪ್ರಭಾವನೆಗೆ ಸಹಕರಿಸಿ ಉತ್ತಮ ಕಾರ್ಯ ನಡೆಸುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯ ಸುಮಾರು 40 ಬಸದಿಯ ಅರ್ಚಕರಿಗೆ ಬಜಗೋಳಿ ಧರ್ಮ ಶಾಲೆ ವತಿಯಿಂದ ಉಚಿತ ಆಹಾರ ಪೆÇಟ್ಟಣ ದಕ್ಷಿಣೆ ನೀಡಿ ಅನುಗ್ರಹಿಸಿದರು.

ಸರ್ವರಿಗೂ ಪರಸ್ಪರ ಉತ್ತಮ ಕ್ಷಮೆ ಯಾಚನೆ ಮಾಡುದರಿಂದ ಮನಸು ಶಾಂತವಾಗುದು ಜೀವನದಲ್ಲಿ ಧಾರ್ಮಿಕರು ನಿರ್ದೋಷ ಆಚರಣೆಯಿಂದ ಉತ್ತಮ ವ್ಯಕ್ತಿಗಳಾಗಿ ಮಹಾತ್ಮರಾಗಿ ಪರಮಾತ್ಮರಾಗಬಹುದು ಎಂದು ನುಡಿದರು.

ಅಂಡಾರು ಮಹಾವೀರ ಹೆಗ್ಡೆ ಮಾತನಾಡಿ ಧರ್ಮಾರ್ಥ ಆಹಾರ ಕಿಟ್ ವಿತರಣೆ ಉತ್ತಮ ಕಾರ್ಯ ಎಂದರು.

ರವಿರಾಜ್ ಚೌಟ ಬಜಗೋಳಿ 40 ವರ್ಷಗಳಿಂದ ಜೈನ ಭಜನೆ ಸಂಘಟನೆ ಮಾಡುತ್ತಿದ್ದು ಉತ್ತಮ ಜೈನಗೀತೆ ರಚನೆ ಮಾಡುತ್ತಿದ್ದು ಸ್ವಾಮೀಜಿಯವರು ಧರ್ಮಶಾಲೆ ವತಿಯಿಂದ ಶಾಲು ಶ್ರೀ ಫಲ ನೀಡಿ ಸನ್ಮಾನ ಮಾಡಿ ಹರಸಿ ಆಶೀರ್ವದಿಸಿದರು.

ಕ್ಷಮಾವಳಿಯ ವಿಶೇಷ ಉಪನ್ಯಾಸ ನೀಡಿದ ವೀರ್ ಮುನಿರಾಜ ರೆಂಜಾಳ ನಮ್ಮ ಜೀವನ ದಲ್ಲಿ ಧರ್ಮ ಸಾಧನೆ ಗೆ ತೊಡಕು ಉಂಟು ಮಾಡುವ ಕೆಟ್ಟ ಭಾವನೆ ಬಿಟ್ಟು ಉತ್ತಮ ಕ್ಷಮೆ ಯನ್ನು ಯಾಚನೆ ಮಾಡಿದಾಗ ಮನಸ್ಸು ಹಗುರ ವಾಗಿ ಶಾಂತಿ ಪಡೆಯಲು ಸಹಾಯಕ ಎಂದರು.

ಕಾರ್ಯಕ್ರಮದಲ್ಲಿ ಬಜಗೋಳಿ ಮಹಾವೀರ್ ಜೈನ್, ಹಾಲಕ್ಕಿ ನಾಭಿರಾಜ್ ಪ್ರದಾನ ಅತಿಥಿüಗಳಾಗಿ, ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಬಜಗೋಳಿ ಸದಸ್ಯರು, ಉಡುಪಿ ಜಿಲ್ಲೆಯ ಬಸದಿ ಅರ್ಚಕರು ಧರ್ಮ ಶಾಲೆ ಟ್ರಸ್ಟ್ ಬಜಗೋಳಿ ಇದರ ಟ್ರಸ್ಟೀ ವೀರ್ ವೀರಂಜಯ ಜೈನ್, ನಿರ್ವಾಣ ಇಂದ್ರ, ಉಷಾ ಕುಮಾರ್, ನ್ಯಾಯವಾದಿ ಪದ್ಮಪ್ರಸಾದ್ ನಲ್ಲೂರು ಉಪಸ್ಥಿತರಿದ್ದು ಶ್ರೀ ವರ್ಧಮಾನ ಇಂದ್ರ ಶಾಂತಿ ಮಂತ್ರ ಪಠಿಸಿದರು.

ಕು| ಶರಧಿ ಜೈನ್ ಮತ್ತು ಬಳಗವು ಪ್ರಾರ್ಥನೆಯನ್ನಾಡಿದರು. ಬಜಗೋಳಿ ಮಿಲನ್ ಅಧ್ಯಕ್ಷ ಭರತ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

 




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here