Saturday 27th, July 2024
canara news

ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ

Published On : 10 Oct 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.08: ಬಿಎಸ್‍ಕೆಬಿ ಅಸೋಸಿಯೇಶನ್ ಸಾಯನ್ (ಗೋಕುಲ) ಸಂಸ್ಥೆಯು ಕಳೆದ ಶನಿವಾರ ಹಿರಿಯ ನಾಗರಿಕರ ಆಶ್ರಯ ಧಾಮ ನೇರೂಲ್‍ನ ಆಶ್ರಯ ಇಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಿತು.

ಗೌರವ ಅತಿಥಿüಗಳಾಗಿ ಆಗಮಿಸಿದ ವ್ಹೀ ಜಿಲ್ಲಾಧ್ಯಕ್ಷೆ ವೀ ಆಶಾ ಗುಪ್ತ, ವೀ ಕ್ಲಬ್ ವಸಂತ್ ವಿಹಾರ್ ಅಧ್ಯಕ್ಷೆ ಸಂಗೀತ ಗುಪ್ತ, ಲಯನ್ಸ್ ಕ್ಲಬ್ ಗಣ್ಯರುಗಳಾದ ಲ| ಸೀಮಾ ಪೈ, ಲ| ಕೇಶವ್ ಶೆಟ್ಟಿ, ಲಯನ್ ಕ್ಲಬ್ ಗೋವಂಡಿ ಅಧ್ಯಕ್ಷ ಲ| ಸತೀಶ್ ಕಾಮತ್ ಮತ್ತು ಆಶ್ರಯದ ಹಿರಿಯ ನಾಗರಿಕರಾದ ಭವಾನಿ ಶಂಕರ್ ರಾವ್ ಮತ್ತು ಸರೋಜಾ ಕೆ. ಅವರೊಂದಿಗೆ ಬಿಎಸ್‍ಕೆಬಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಆಶ್ರಯದ ಚಟುವಟಿಕೆಗಳು, ಸೌಲಭ್ಯ ಸವಲತ್ತುಗಳ ಮಾಹಿತಿಯನ್ನಿತ್ತರು. ದಿ| ರತ್ನಾ ಆಚಾರ್ಯ ಸ್ಮರಣಾರ್ಥ ಅವರ ಮಕ್ಕಳಾದ ಜಗದೀಶ್ ಆಚಾರ್ಯ ಮತ್ತು ಲಕ್ಷ್ಮೀಶ್ ಆಚಾರ್ಯ ಅವರು ಪ್ರಾಯೋಜಿಸಿರುವ ಸ್ಟಾರ್ ಪ್ರಶಸ್ತಿಗಳನ್ನು ಆಶ್ರಯ ನಿವಾಸಿ ಅನಂತನ್ ಮತ್ತು ಶಾಂತಾ ಕುಮಾರಿ ಅವರಿಗೆ ಡಾ| ಸುರೇಶ್ ರಾವ್ ಪ್ರದಾನಿಸಿ ಅಭಿನಂದಿಸಿದರು.

ಅತಿಥಿಗಣ್ಯರು ಆಶ್ರಯದಲ್ಲಿ ಹಿರಿಯ ನಾಗರೀಕರಿಗಿರುವ ಉತ್ತಮ ಸೌಕರ್ಯಗಳನ್ನು ಕೊಂಡಾಡಿದ್ದು ಕೊರೋನಾ ಮಹಾಮಾರಿಯ ಕಾಲದಲ್ಲಿ ಆಶ್ರಯದ ನಿವಾಸಿಗಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡ ಆಶ್ರಯ ವ್ಯವಸ್ಥಾಪಕರು, ವೈದ್ಯರು, ಸಿಬ್ಬಂದಿ ವರ್ಗ, ಸ್ವಯಂ ಸೇವಕಿಯರು ಹಾಗೂ ವಿ. ಕೆ.ಸುವರ್ಣ, ಗಿರೀಶ್ ರಾವ್, ಅನಂತರಾಜ್ ಮತ್ತಿತರರನ್ನು ಪದಾಧಿಕಾರಿಗಳು ಗೌರವಿಸಿದರು.

ಡಾ| ಸುರೇಶ್ ರಾವ್ ಅಧ್ಯಕ್ಷೀಯ ಭಾಷಣಗೈದು ಆಶ್ರಯ ಹಿರಿಯ ನಾಗರಿಕರ ನೆಮ್ಮದಿಯ ತಾಣವಾಗಿದೆ. ಇಲ್ಲಿಗೆ ಬಂದಾಗಲೆಲ್ಲಾ ನನಗೆ ಅತ್ಯಂತ ಸಂತೋಷವಾಗುತ್ತದೆ. ಮುಂದಿನ ದಿನಗಳಲ್ಲಿ ಆಶ್ರಯದಲ್ಲಿ ಇನ್ನೊಂದು ಮಹಡಿಯನ್ನು ವಿಸ್ತರಿಸಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದೆ ಎಂದರು.

ಕಾರ್ಯಕ್ರಮದ ಪ್ರಾಯೋಜಕರಾದ ಪಿಚೆ ಫಿಪ್ಸನ್ ಸಾನಿಟೋರಿಯಂ, ದೇಣಿಗೆಯನ್ನಿತ್ತ ವೀ ಕ್ಲಬ್ ವಸಂತ್ ವಿಹಾರ್, ಲಯನ್ಸ್ ಕ್ಲಬ್ ಗೋವಂಡಿ, ಲಯನ್ಸ್ ಕ್ಲಬ್ ಚುನ್ನಾ ಭಟ್ಟಿ, ಕೃಷ್ಣ ಆಚಾರ್ಯ, ಯಶಸ್ಸಿಗೆ ಸಹಕರಿಸಿದ ಚಿತ್ರಾ ಮೇಲ್ಮನೆ, ಪ್ರಶಾಂತ್ ಹೆರ್ಲೆ, ನೇರ ಪ್ರಸಾರಕ್ಕೆ ತಾಂತ್ರಿಕ ಸಹಾಯ ನೀಡಿದ ಗುರುಪ್ರಸಾದ್ ಭಟ್ ಮತ್ತು ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುಷ್ಫಗುಚ್ಛಗಳನ್ನಿತ್ತು ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಂಧೀ ಜಯಂತಿ ನಿಮಿತ್ತ ಗಾಂಧೀಜಿಯವರ ಶಾಂತಿ ಮಂತ್ರ ಪಠಿಸಿ ಅವರ ಸ್ಮರಣೆ ಗೈಯಲಾಯಿತು. ಆಶ್ರಯ ನಿವಾಸಿಗಳಾದ ನಾಗರಾಜ್ ಅವರು ಮಹಾತ್ಮಾ ಗಾಂಧಿ ವೇಷ ಧರಿಸಿ ಮನಾಕರ್ಷಿತರಾಗಿದ್ದರು. ಐಶ್ವರ್ಯ ರಾಣೆಯವರ ನೃತ್ಯ ನಿರ್ದೇಶನದಲ್ಲಿ ಹಿರಿಯ ನಾಗರಿಕರಾದ, ಅನ್ನಪೂರ್ಣ ರಾವ್, ವಿಜಯಲಕ್ಷಿ ್ಮ ಅಯ್ಯರ್, ಮಾಲತಿ ಶರ್ಮ, ಶಾಂತ ಕುಮಾರಿ, ಮೀನಾ ಅಯ್ಯರ್, ಚಂದ್ರಾವತಿ ರಾವ್ ಮತ್ತು ಪಿ.ಸಿ.ಎನ್ ರಾವ್ ಬಳಗವು ರಾಧೇ ಕೃಷ್ಣ ನೃತ್ಯ ರೂಪಕ ಪ್ರಸ್ತುತಗೊಳಿಸಿತು. ಪೆÇ್ರಫೆಸರ್ ಕಣ್ಣನ್ ಅವರು ಮಿಮಿಕ್ರಿ ಹಾಗೂ ಪಿ.ಸಿ. ಎನ್ ರಾವ್ ಹಿಂದಿ ಸಿನೆಮಾ ಹಾಡುಗಳನ್ನಾಡಿದರು.

ಬಿಎಸ್‍ಕೆಬಿ ಗೌರವ ಕಾರ್ಯದರ್ಶಿ ಅನಂತ ಪದ್ಮನಾಭ ಪೆÇೀತಿ, ಕೋಶಾಧಿಕಾರಿ ಸಿಎ| ಹರಿದಾಸ್ ಭಟ್ ಮತ್ತಿತರರು ಉಪಸ್ಥಿತರಿದ್ದು ಡಾ| ಅನಿಲ್ ಭರುವಾ ಪ್ರಾರ್ಥನೆಗೈದರು. ಉಪಾಧ್ಯಕ್ಷ ವಾಮನ್ ಹೊಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಧನ್ಯವಾದ ಸಮರ್ಪಿಸಿದರು.

 




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here