Thursday 28th, March 2024
canara news

ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಆಯೋಜಿಸಿದ ಜ್ಞಾನ ಶೃಂಗಸಭೆ

Published On : 02 Nov 2021   |  Reported By : Rons Bantwal


ಅಭಿಜ್ಞಾನ ವ್ಯಕ್ತಿವಿಕಾಸನ ಮತ್ತು ಅಭಿವೃದ್ಧಿ ವೃದ್ಧಿಸುತ್ತದೆ : ಶಶಿಕಿರಣ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.31: ಬಂಟ ಸಮಾಜದಲ್ಲಿ ಹುಟ್ಟಿದ್ದೇ ನನ್ನ ಸಾರ್ಥಕತೆಯಾಗಿದೆ. ಪೂರ್ವಜರ ಆಶೀರ್ವಾದವೇ ನನ್ನ ಸಾಧನೆಗೆ ಪ್ರೇರಣೆಯಾಗಿದ್ದು ನನ್ನನ್ನು ಔದ್ಯೋಗಿಕವಾಗಿ ದೊಡ್ಡವನಾಗಿಸಿದೆ. ನಮ್ಮ ಜ್ಞಾನವನ್ನು ಇತರೊಂದಿಗೆ ಹಂಚಿಕೊಳ್ಳುವುದರಿಂದ ನಾವು ಮತ್ತೊಬ್ಬರಿಂದ ಕಲಿಯುವುದು ಬಹಳಷ್ಟಿದೆ. ಇದೆಲ್ಲವೂ ನಮ್ಮ ಅಭಿಜ್ಞಾನ ವ್ಯಕ್ತಿವಿಕಾಸನ ಮತ್ತು ಅಭಿವೃದ್ಧಿ ವೃದ್ಧಿಸುತ್ತದೆ. ಇಂತಹ ಅರಿವು ಉದ್ಯಮಶೀಲತೆಗೆ ಪೂರಕವಾಗುತ್ತದೆ. ಉದ್ಯಮದಲ್ಲಿ ಮತ್ತೊಬ್ಬರ ಹಣಕ್ಕಿಂತ ಸ್ವಂತ ಹಣಕ್ಕೆ ಮಹತ್ವ ನೀಡಿದಾಗ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಉದ್ಯಮಸ್ಥ ಸ್ಪರ್ಧಿಗಳನ್ನು ವಿಶ್ವಾಸಕ್ಕೆ ಪಡೆದಾಗಲೇ ನಾವು ಉದ್ಯಮಶೀಲರೂ, ಹೃದಯಶೀಲರಾಗಬಹುದು ಎಂದು ಆಲ್‍ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಶಶಿಕಿರಣ್ ಶೆಟ್ಟಿ ನುಡಿದರು.

 

ಬಂಟರ ಉದ್ಯಮಸ್ಥರ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಐಬಿಸಿಸಿಐ) ಇಂದಿಲ್ಲಿ ಭಾನುವಾರ ಅಪರಾಹ್ನ ಅಂಧೇರಿ ಪಶ್ಚಿಮದಲ್ಲಿನ ಜೆ.ಡಬ್ಲೂ ್ಯ ಮರಿಯೊಟ್ (ಜುಹೂ) ಸಭಾಗೃಹದಲ್ಲಿ ಯುನಿಟಾಪ್ ಸಮೂಹ, ಆರ್ಗ್ಯಾನಿಕ್ ಪ್ರೈವೇಟ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಹೆರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಗಳ ಪ್ರಧಾನ ಪ್ರಾಯೋಜಕತ್ವದಲ್ಲಿ ಐಬಿಸಿಸಿಐ ಅಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಜ್ಞಾನ ಶೃಂಗಸಭೆಯಲ್ಲಿ ಪ್ರಧಾನ ಅಭ್ಯಾಗತರಾಗಿದ್ದು `ಬದಲಾಗುತ್ತಿರುವ ವ್ಯಾಪಾರ ಸನ್ನಿವೇಶ' ಬಗ್ಗೆ ಮಾಹಿತಿಯನ್ನಿತ್ತು ಶಶಿಕಿರಣ್ ಶೆಟ್ಟಿ ಮಾತನಾಡಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಆಡಳಿತ ಎಂಡಿ-ಸಿಇಒ ರಾಜಕಿರಣ್ ರೈ `ಬದಲಾಗುತ್ತಿರುವ ಬ್ಯಾಂಕಿಂಗ್ ಸನ್ನಿವೇಶ' ವಿಷಯವಾಗಿ ಮಾತನಾಡಿ ನೈತಿಕ ವ್ಯವಹಾರವು ಬ್ಯಾಂಕಿಂಗ್ ಆಥಿರ್sಕತೆಯನ್ನು ಚೆನ್ನಾಗಿ ಹೊಂದಿಸುತ್ತದೆ. 2022ರಲ್ಲಿ ಮತ್ತೆ ಹಣಕಾಸು ಕ್ರಮ ಹಿಂದಿನ ಆಥಿರ್sಕತೆಕ್ಕಿಂತಲೂ ಸುಧಾರಣೆ ಕಾಣಲಿದೆ. ಅವಿಷ್ಕಾರ ಹೊಂದಿದ ತಂತ್ರಜ್ಞಾನದಿಂದ ಬ್ಯಾಂಕಿಂಗ್ ಕ್ಷೇತ್ರ ಕ್ಷೀಪ್ರವಾಗಿ ಮುನ್ನಡೆಯತ್ತ ಸಾಗುತ್ತಿದೆ. ಆದ್ದರಿಂದ ನಾವೂ ನಮ್ಮಲ್ಲಿನ ಮಾಹಿತಿ ತಂತ್ರಜ್ಞಾನ ಇಮ್ಮಡಿಗೊಳಿಸಿದಾಗ ಸಾಧನೆ ಸುಲಭ ಸಾದ್ಯವಾಗುವುದು. ಮಾತ್ರವಲ್ಲದೆ ಭವಿಷ್ಯದಲ್ಲಿ ಬ್ಯಾಂಕಿಂಗ್ ಸವಾಲು ಮಾಡಿದವನೇ ನಾಯಕನಾಗಲು ಸಾಧ್ಯ ಎಂದರು.

`ವ್ಯಾಪಾರ ಮತ್ತು ಕುಟುಂಬದಲ್ಲಿ ಉತ್ತರಾಧಿಕಾರ ಯೋಜನೆ' ಬಗ್ಗೆ ಸುಪ್ರಜಿತ್ ಇಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಹಿತಿಯನ್ನಿತ್ತು ನನ್ನ ಉದ್ಯಮಶೀಲತಾ ಅಭ್ಯುದಯಕ್ಕೆ ಸಾಂಪ್ರದಾಯಿಕ ಧೈರ್ಯವೇ ಪೆÇ್ರೀತ್ಸಾಹವಾಗಿತ್ತು. ಮತ್ತು ನನ್ನ ಮನೋಸ್ಥೈರ್ಯವೂ ನನ್ನನ್ನು ಈ ಮಟ್ಟಕ್ಕೆ ಬೆಳೆಸಿತು. ಜಾಗತಿಕವಾಗಿ ಯಶಸ್ವಿ ಉದ್ಯಮಿಯಾಗಲು ಇಂತಹ ಸಮಾವೇಶಗಳು ಅತ್ಯವಶವಾಗಿವೆ. ಕುಟುಂಬ ಉದ್ಯಮ ಮಾಡುವುದರ ಜೊತೆಗೆ ಮಕ್ಕಳನ್ನು ಅವರ ಇಷ್ಟದ ಉದ್ಯಮವನ್ನು ಪೆÇ್ರೀತ್ಸಾಹಿಸಿ ಅವರನ್ನೂ ಸ್ವಂತಿಕೆಯ ಉದಯೋನ್ಮುಖ ಉದ್ಯಮಿಗಳಾಗಿಸಿ ಎಂದÀು ಸಲಹಿದರು.

ಐಬಿಸಿಸಿಐ ಅಧ್ಯಕ್ಷ ಕೆ.ಸಿ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಐಬಿಸಿಸಿಐ ರಾಷ್ಟ್ರೀಯ ಉದ್ಯವಸ್ಥರ ಪ್ರೇರಣಾ ಶಕ್ತಿಯಾಗಿದೆ. ಸಮಗ್ರ ಭಾರತೀಯ ಉದ್ಯಮಿಗಳ ಸಹಯೋಗದೊಂದಿಗೆ ಬಂಟ ಸಮಾಜದ ಉದ್ಯಮಿಗಳನ್ನು ಪ್ರೇರೆಪಿಸಿ ಆಥಿರ್sಕವಾಗಿ ಬಲಾಢ್ಯತೆಗೆ ಸಹಕರಿ ಆಗಿದೆ. ಬಂಟರ ಬಲಾಢ್ಯತೆಗೆ ಐಬಿಸಿಸಿಐ ಶಕ್ತಿಯಾಗಿದ್ದು ನಮ್ಮವರು ಇದರ ಸದುಪಯೋಗ ಪಡೆದರೆ ನಮ್ಮ ಪ್ರಯತ್ನ ಸಫಲವಾಗಲಿದೆ. ಆಧುನಿಕ ತಂತ್ರಜ್ಞಾನ, ಕಲ್ಪನೆಗಳಿಗೆ ಒತ್ತು ನೀಡುವಲ್ಲಿ ಪೆÇ್ರೀತ್ಸಾಹಿಸುವ ಐಬಿಸಿಸಿಐ ತನ್ನ ಸದಸ್ಯರುಗಳನ್ನು ಜಗತ್ತಿನಾದ್ಯಂತ ಪರಿಚಯಿಸುವ ಪ್ರಯತ್ನಗೈಯುತ್ತ್ತಿದೆ. ಯಶಸ್ವಿ ವೃತ್ತಿಪರ ಅರಿವನ್ನು ಮುಂದಿನ ಪೀಳಿಗೆಗೆ ಒದಗಿಸಬೇಕು. ಯುವ ಪೀಳಿಗೆ ಇದರ ಸದುಪಯೋಗ ಪಡೆಯಬೇಕು ಅನ್ನುವುದೇ ನಮ್ಮ ಆಶಯ ಎಂದು ಬಿಸಿಸಿಐ ಸಂಸ್ಥೆಯ ಕನಸುಕಂಡ ಎಸ್.ಎಂ ಶೆಟ್ಟಿ ಮತ್ತು ಬಿ.ಡಿ ಶೆಟ್ಟಿ ಇವರ ದೂರದೃಷ್ಟಿತ್ವವನ್ನು ಸ್ಮರಿಸಿದರು.
ಚಾನ್ನೆಲ್ ಫ್ರೈಟ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅದಿತಿ ಎಸ್ಸೆನ್ಶಿಯಲ್ಸ್ ಹಾಗೂ ಮಹೀದ್ರ ಮನುಲೈಫ್ ಮ್ಯೂಚಲ್ ಫಂಡ್ಸ್ ಸಂಸ್ಥೆಗಳ ಪ್ರಾಯೋಜಕತ್ವಲ್ಲಿ ನೇರ ವ್ಯಾಪಾರ ಅಧಿವೇಶನ ನಡೆಸಲಾಗಿದ್ದು ಕೆಮಿಕಲ್ ಮತ್ತು ಫಾರ್ಮಾಸ್ಯುಟಿಕಲ್ಸ್ ವಿಚಾರಿತ ಚರ್ಚೆಯಲ್ಲಿ ಬ್ಲೂ ಅಶ್ವಇನೋಲಾಬ್ಸ್ ವ್ಯವಸ್ಥಾಪಕ ನಿರ್ದೇಶಕ ಪರೇಶ್ ತ್ರಿವೇದಿ, ರೋಸಾರಿ ಬಯೋಟೆಕ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಎಸ್ ಚಾರಿ, ಹೆರಾನ್ಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಸಿಎಂಡಿ ಎಸ್ ಕೆ ಶೆಟ್ಟಿ ಪಾಲ್ಗೊಂಡು ತಮ್ಮ ಔದ್ಯೋಗಿಕ ಅರಿವು ಹಂಚಿಕೊಂಡರು. ವಿಶ್ವಾತ್ ಕೆಮಿಕಲ್ಸ್ ಲಿಮಿಟೆಡ್‍ನ ಚೇರ್ಮೆನ್ ಬಿ.ವಿವೇಕ್ ಶೆಟ್ಟಿ ಚರ್ಚಾಕೂಟ ನಿರ್ವಹಿಸಿದರು.

ವಿವೇಕ್ ಶೆಟ್ಟಿ ಮಾತನಾಡಿ ಮಹಾಮಾರಿ ಕೊರೊನಾ ಕೊಲ್ಲಲು ಕೆಮಿಕಲ್‍ನ ಪಾತ್ರ ಮಹತ್ತರವಾಗಿತ್ತು. ಕೆಮಿಕಲ್ ಇದನ್ನು ನಿಭಾಯಿಸಿದ ಕಾರಣ ಈ ಕಾರ್ಯಕ್ರಮ ಅಯೋಜಿಸಲು ಅನುಕೂಲಕರವಾಗಿದೆ. ಕೆಮಿಕಲ್ ಉದ್ಯಮಕ್ಕೆ ಬಹಳ ಬೇಡಿಕೆಯಿದ್ದು ಇದು ಜಾಗತಿಕವಾಗಿ ಬೆಳೆಯುತ್ತಿದೆ ಎಂದರು.

ಬಂಡವಾಳ ಮಾರುಕಟ್ಟೆ ಮತ್ತು ಆಸ್ತಿ ನಿರ್ವಹಣೆ ವಿಚಾರಿತ ಚರ್ಚೆಯಲ್ಲಿ ಮಹೀಂದ್ರಾ ಮನುಲೈಫ್ ಮ್ಯೂಚುಯಲ್ ಫಂಡ್ಸ್‍ನ ಸಿಎಂಡಿ ಅಶುತೋಷ್ ಬಿಷ್ಣೋಯ್, ಐಎಫ್‍ಎಫ್‍ಸಿಒ ಟೊಕಿಯೊ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‍ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಮಾರ್ಕೆಟಿಂಗ್) ಗುಣಶೇಖರ್ ಬೋಗಾ, ಜೆ.ಎಂ ಫೈನಾನ್ಷಿಯಲ್ ಅಸೆಟ್ ರೀಕನ್‍ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಗ್ರೋವರ್ ಉಪಸ್ಥಿತರಿದ್ದು ತಮ್ಮ ವ್ಯವಹಾರ ಕೌಶಲಗಳನ್ನು ಹಂಚಿಕೊಂಡರು. ಐಬಿಸಿಸಿಐ ನಿರ್ದೇಶಕ ಸಿಎ| ಶಂಕರ್ ಬಿ.ಶೆಟ್ಟಿ ಚರ್ಚಾಕೂಟ ನಿರೂಪಿಸಿದರು.

ಸಿಎ| ಶಂಕರ್ ಶೆಟ್ಟಿ ಮಾತನಾಡಿ ಆಧುನಿಕ ಜೀವನ ವ್ಯವಸ್ಥೆಯಲ್ಲಿ ವಿಮಾ ವ್ಯವಸ್ಥೆಯ ಪಾತ್ರ ಮಹತ್ತರವಾದದ್ದು. ವಿಮಾ ಪದ್ಧತಿಯ ಪರಿಹಾರ ಕ್ರಮ ಜೀವನ ರಕ್ಷಣೆಗೆ ಪೂರಕವಾಗಿರುವ ಕಾರಣ ಪ್ರತಿಯೊಬ್ಬರು ಇದನ್ನು ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ರಿಯಲ್ ಎಸ್ಟೇಟ್ ಮತ್ತು ಹಾಸ್ಪಿಟಾಲಿಟಿ ವಿಚಾರಿತ ಚರ್ಚೆಯಲ್ಲಿ ಹೆರಿಟೇಜ್ ಸಮೂಹದ ಕಾರ್ಯಧ್ಯಕ್ಷ ಪ್ರದೀಪ್ ಶೆಟ್ಟಿ, ವಿಟ್ಸ್ ಕಾಮತ್ಸ್ ಗ್ರೂಪ್‍ನ ಸಂಸ್ಥಾಪಕಧ್ಯಕ್ಷ ಡಾ| ವಿಕ್ರಮ್ ಕಾಮತ್, ಪ್ರೀತಮ್ ದಾ ಧಾಬಾ ಮತ್ತು ಗ್ರಾ ್ಯಂಡ್ ಮಾಮಾಸ್ ಕೆಫೆ ಹಾಗೂ ಪ್ರೀತಮ್ ಹೋಟೆಲ್ಸ್‍ನ ಆಡಳಿತ ನಿರ್ದೇಶಕ ಗುರ್ಬಕ್ಷೀಶ್ ಸಿಂಗ್ ಕೊಹ್ಲಿ ಭಾಗವಹಿಸಿ ತಮ್ಮ ವ್ಯಾಪಾರೋದ್ಯಮದಲ್ಲಿನ ಅನುಭವಗಳನ್ನು ಹಂಚಿಕೊಂಡರು. ಮಹಾರಾಜ ರೆಸ್ಟೋರೆಂಟ್‍ನ ನಿರ್ದೇಶಕ ಪ್ರದೀಪ್ ಶೆಟ್ಟಿ ಸಮಯೋಜಕರಾಗಿ ಚರ್ಚಾಕೂಟ ನಡೆಸಿದರು.

ಪ್ರದೀಪ್ ಶೆಟ್ಟಿ ಮಾತನಾಡಿ ಹೋಟೆಲು ಉದ್ಯಮ ಆದರಾತಿಥ್ಯದ ಪುಣ್ಯದ ಸೇವಾ ಉದ್ಯಮವಾಗಿದೆ. ಇದು ಉದ್ಯಮಕ್ಕಿಂತ ಪುಣ್ಯದ ಕಾಯಕ ಅನ್ನುವುದು ಉಚಿತ ಅಂದೆಣಿಸಿದ್ದೇನೆ ಎಂದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಚಾನ್ನೆಲ್ ಫ್ರೈಟ್‍ನ ಸಿಎಂಡಿ ಕಿಶನ್ ಜೆ.ಶೆಟ್ಟಿ, ಅದಿತಿ ಎಸ್ಸೆನ್ಶಿಯಲ್ಸ್ ಸಿಎಂಡಿ ಭರತ್ ಶೆಟ್ಟಿ ವೇದಿಕೆಯಲ್ಲಿದ್ದು ಯುನಿಟಾಪ್ ಸಮೂಹದ ಬಾಲಕೃಷ್ಣ ಶೆಟ್ಟಿ, ಆರ್ಗ್ಯಾನಿಕ್ ಪ್ರೈವೇಟ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಆನಂದ್ ಎಂ.ಶೆಟ್ಟಿ, ಹೆರಂಬಾ ಇಂಡಸ್ಟ್ರೀಸ್ ಲಿಮಿಟೆಡ್‍ನ ಎಸ್.ಕೆ ಶೆಟ್ಟಿ ಮತ್ತು ಆರ್.ಕೆ ಶೆಟ್ಟಿ, ಹಿರಿಯ ಉದ್ಯಮಿ ಕುಶಲ್ ಹೆಗ್ಡೆ, ಚರೀಶ್ಮಾ ಸಮೂಹದ ಸುಧೀರ್ ವಿ.ಶೆಟ್ಟಿ, ಫೈಬರ್ ಫಲ್ಸ್ ಸಮೂಹದ ದಿವಾಕರ್ ಶೆಟ್ಟಿ ವಿಶೇಷ ಆಮಂತ್ರಿತ್ರರಾಗಿದ್ದು ಇವರನ್ನು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ| ಸುರೇಶ್ ಎಸ್.ರಾವ್ ಕಟೀಲು ಐಬಿಸಿಸಿಐ ಅಧ್ಯಕ್ಷ ಕೆ.ಸಿ ಶೆಟ್ಟಿ ಮತ್ತು ಉಪಾಧ್ಯಕ್ಷ ಎಸ್.ಬಿ ಶೆಟ್ಟಿ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.

ಐಬಿಸಿಸಿಐ ಕೋಶಾಧಿಕಾರಿ ದುರ್ಗಾಪ್ರಸಾದ್ ಬಿ.ರೈ, ಜತೆ ಕೋಶಾಧಿಕಾರಿ ಪ್ರಸಾದ್ ಪಿ.ಶೆಟ್ಟಿ, ನಿರ್ದೇಶಕರಾದ ನಿಶಿತ್ ಶೆಟ್ಟಿ, ಹಿತೇಶ್ ಶೆಟ್ಟಿ, ಬಿ.ಬಿ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಪಾಂಡುರಂಗ ಎಲ್.ಶೆಟ್ಟಿ, ಸಿಎ| ಶಂಕರ ಬಿ.ಶೆಟ್ಟಿ, ಕಿಶನ್ ಜೆ.ಶೆಟ್ಟಿ ಹಾಗೂ ಐಬಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸದಸ್ಯರು ಸೇರಿದಂತೆ ಐಬಿಸಿಸಿಐ ಪರಿವಾರ ಸದಸ್ಯರನೇಕರು ಉಪಸ್ಥಿತರಿದ್ದರು.

ಐಬಿಸಿಸಿಐ ಉಪಾಧ್ಯಕ್ಷ ಎಸ್.ಬಿ ಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕೆ.ಜಯ ಸೂಡಾ ಮತ್ತು ಕಾರ್ಯಚರಣಾ ವ್ಯವಸ್ಥಾಪಕಿ ನಮಿತಾ ಆರ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಶ್ರೀನಾಥ್ ಶೆಟ್ಟಿ ವಂದನಾರ್ಪಣೆಗೈದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here