Saturday 4th, December 2021
canara news

ಕಿಕ್ ಬಾಕ್ಸಿಂಗ್‍ನಲ್ಲಿ ಆದಿತ್ಯ ಕುಮಾರ್‍ಗೆ ಎರಡು ಚಿನ್ನದ ಪದಕ

Published On : 03 Nov 2021   |  Reported By : Rons Bantwal

ಮುಂಬಯಿ (ಆರ್‍ಬಿಐ), ನ.03: ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ 2021 ಸ್ಪರ್ಧೆಯ ಪಾಯಿಂಟ್ ಫೈಟ್ ಮತ್ತು ಕಿಕ್ ಲೈಟ್ ವಿಭಾಗದಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗುರುಪುರ ಇಲ್ಲಿನ ಜಿ.ಆದಿತ್ಯ ಕಿರಣ್ ಎರಡು ಚಿನ್ನದ ಪದಕ ಗಳಿಸಿದ್ದಾರೆ.

ನೀರುಮಾರ್ಗ ಪಾಲ್ದನೆ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಈತ ಮಂಗಳೂರು ಇಲ್ಲಿನ ಇನ್‍ಸ್ಟಿಟ್ಯೂಟ್ ಆಫ್‍ಐಕೆಎಂಎ (ಕರಾಟೆ ಮತ್ತು ಮಾರ್ಶಲ್ ಆಟ್ರ್ಸ್) ಸಂಸ್ಥೆಯಲ್ಲಿ ನಿತೀನ್ ಎನ್.ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಡಬ್ಲ್ಯೂಯುಎಸ್‍ಎಚ್‍ಯುನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ಹಲವು ಪ್ರಶಸ್ತಿ ಗಳಿಸಿರುವ ಈತ ಗುರುಪುರದ ಕಿರಣ್ ಕುಮಾರ್ ಮತ್ತು ಸಿ.ಎಸ್ ಲೀಲಾವತಿ ದಂಪತಿ ಸುಪುತ್ರರಾಗಿದ್ದಾನೆ.

More News

ಧರ್ಮಸ್ಥಳ ಲಕ್ಷ ದೀಪೆÇೀತ್ಸವ: ಸರ್ವಧರ್ಮ ಸಮ್ಮೇಳನ-89ನೆ ಅಧಿವೇಶನ ಉದ್ಘಾಟನೆ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯ - ರಾಜ್ಯಪಾಲ ಥಾವರ್‍ಚಂದ್
ಧರ್ಮಸ್ಥಳ ಲಕ್ಷ ದೀಪೆÇೀತ್ಸವ: ಸರ್ವಧರ್ಮ ಸಮ್ಮೇಳನ-89ನೆ ಅಧಿವೇಶನ ಉದ್ಘಾಟನೆ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯ - ರಾಜ್ಯಪಾಲ ಥಾವರ್‍ಚಂದ್
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ  ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

Comment Here