Friday 26th, July 2024
canara news

ನ.14: ಸಾಂತಕ್ರೂಜ್‍ನಲ್ಲಿ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ

Published On : 07 Nov 2021   |  Reported By : Rons Bantwal


ಪಂಚ ಧೂಮಾವತಿ ಸೇವಾ ಟ್ರಸ್ಟ್ ಮುಂಬಯಿ ವಾರ್ಷಿಕ ಮಹಾಸಭೆ

ಮುಂಬಯಿ, ನ.07: ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ತನ್ನ ತೃತೀಯ ವಾರ್ಷಿಕ ಮಹಾಸಭೆಯನ್ನು ಇದೇ ನ.14ನೇ ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಮಾಲೋಚನಾ ಸಭಾಗೃಹದಲ್ಲಿ ಗರೋಡಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ಟ್ರಸ್ಟ್‍ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ತಿಳಿಸಿದ್ದಾರೆ.

      

Nityanad D. Kotyan                                      Sanjiva Poojary Thonse

ಉಡುಪಿ ಜಿಲ್ಲೆಯ ಕಲ್ಯಾಣ್ಪುರದ ಪಡು ತೋನ್ಸೆಯಲ್ಲಿನ ತುಳುನಾಡ ಜಾನಪದ ಪ್ರತೀತಿಯ 66 ಪ್ರಾಚೀನ ಗರೋಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿಯು ಒಂದಾಗಿದ್ದು, ಇಲ್ಲಿ ಅನಾಧಿಕಾಲದಿಂದ ಕೋಟಿ ಚೆನ್ನಯ ಮತ್ತು ಪಂಚ ಧೂಮಾವತೀ ದೈವವನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ಅನೇಕ ದಶಕಗಳಿಂದ ಪ್ರಸಿದ್ಧಿಯ ಧಾರ್ಮಿಕ ಕೇಂದ್ರವಾಗಿರುವ ಈ ಗರೋಡಿಯ ಅಭಿವೃದ್ಧಿ, ಇನ್ನಿತರ ದೇವತಾ ಕಾರ್ಯಕ್ರಮಗಳು ಮತ್ತು ಪರಿಸರದ ಏಳಿಗೆಗಾಗಿ ಕಳೆದ ಹಲವಾರು ವರ್ಷಗಳ ಮುಂಬಯಿವಾಸಿ ಭಕ್ತರ ಸೇವೆ ಅನುಪಮವಾದುದು. ಇದನ್ನು ಭಾವೀ ಜನಾಂಗಕ್ಕೂ ಪರಿಚಯಿಸಿ ಗರೋಡಿಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯುವ ಜನಾಂಗಕ್ಕೆ ಪ್ರೇರಕಶಕ್ತಿಯಾಗಿ ರಚಿತ ಮುಂಬಯಿ ಇಲ್ಲಿನ ಈ ಸೇವಾ ಟ್ರಸ್ಟ್ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರರ್ವತಗೊಳಿಸುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿದೆ.

ಮಹಾಸಭೆಯಲ್ಲಿ ದ್ವಿತೀಯ ವಾರ್ಷಿಕ ಮಹಾಸಭೆಯ ವರದಿ, ಲೆಕ್ಕಪತ್ರಗಳನ್ನು ಮಂಡಿಸಲಾಗುವುದು ಮತ್ತು ಲೆಕ್ಕಪರಿಶೋಧಕರ ನೇಮಕಾತಿ ಮಾಡಲಾಗುವುದು ಹಾಗೂ ಟ್ರಸ್ಟ್‍ನ ಮುಂದಿನ ಕಾರ್ಯಚಟುವಟಿಕೆ, ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಆದ್ದರಿಂದ ಸದಸ್ಯರು ಸಭೆಯಲ್ಲಿ ಕ್ಲಪ್ತ ಸಮಯಕ್ಕೆ ಹಾಜರಾಗುವಂತೆ ಸೇವಾ ಟ್ರಸ್ಟ್‍ನ ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ಮತ್ತು ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆÉ.




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here