Friday 9th, May 2025
canara news

ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,

Published On : 04 Dec 2021   |  Reported By : media release


ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,
ಅಧ್ಯಕ್ಷರು,ಆಡಳಿತ ದಾರರು 18 ಬಸದಿ
ಶ್ರೀ ದಿಗಂಬರ ಜೈನ ಮಠ ಸ್ವಸ್ತಿಶ್ರೀ ಭಟ್ಟಾರಕ ನಗರ ಜೈನ ಕಾಶಿ ಜೈನ ಪೇಟೆ ರಾ.ಹೆ169, ಮೂಡು ಬಿದಿರೆ, ದ.ಕ ಜಿಲ್ಲೆ
ಕರ್ನಾಟಕ ರಾಜ್ಯ

 

ಇವರಿಗೆ,

ಶ್ರೀ. ಬಸವರಾಜ ಬೊಮ್ಮಾಯಿ,
ಸನ್ಯಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ,
ಬೆಂಗಳೂರು.
ಮಾನ್ಯರೇ,

ವಿಷಯ- ನಮ್ಮ ಕರ್ನಾಟಕ ರಾಜ್ಯ ದ ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಆಹಾರ ನೆಪ ದಲ್ಲಿ ಮೊಟ್ಟೆಗಳನ್ನು ಕೊಡುವ ನಿರ್ಣಯವನ್ನು ಕೂಡಲೆ ವಾಪಸ ತೆಗೆದುಕೊಳ್ಳುವ ಬಗ್ಗೆ.

ಕರ್ನಾಟಕ ರಾಜ್ಯ ಸರಕಾರ ಕಡೆಯಿಂದ ರಾಜ್ಯದಲ್ಲಿ ಸರಕಾರಿ ಶಾಲೆಗಳು ಮತ್ತು ಸರಕಾರದ ಅನುದಾನ ಪಡೆಯಿತ್ತಿರುವ ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಕೊಡುವ ನಿರ್ಧಾರದಿಂದ ಅಲ್ಪಸಂಖ್ಯಾತ ಸಮುದಾಯದ ಸಮಸ್ತ ಜೈನ ಸಮಾಜದಲ್ಲಿ ಹಾಗೂ ನಾಡಿನ ಎಲ್ಲಾ ಮತ ಧರ್ಮ ದ ಬಹಳಷ್ಟು ಸಸ್ಯಾಹಾರಿ ಗಳಿಗೆ ಬೇಸರ ಮತ್ತು ಆತಂಕ ಹುಟ್ಟಿದ್ದು ಮಕ್ಕಳು ಬಾಲ್ಯ ದಿಂದ ಲೆ ಸಸ್ಯಾಹಾರ ಆಹಾರ ಕ್ಕೆ ಒಗ್ಗಿ ಕೊಂಡಿದ್ದು ಜೀವ ದಯಾ ಪರವಾದ ಅಹಿಂಸಾ ಧರ್ಮ ದಲ್ಲಿ ಮೊಟ್ಟೆ ಸಹಿತ ಎಲ್ಲಾ ಬಗೆಯ ಆಹಾರ ಕಂದ ಮೂಲ ತ್ಯಾಗ ಮಾಡಿದ್ದು ಎಲ್ಲಾ ಮತ ಧರ್ಮ ದಲ್ಲೊ ನಿಷ್ಠೆ ಯಿಂದ ಶಾ ಖ ಹಾರ ಸೇವನೆ ಸಸ್ಯಾಹಾರಿ ಭೋಜನ ಜನಪ್ರಿಯ ವಾಗುತ್ತಿದ್ದು ಅದು ಅರೋಗ್ಯ ದಾಯಕ ಶಕ್ತಿ ವರ್ಧಕ ಪ್ರಕೃತಿ ಸ್ನೇಹಿ ಎಂದು ಗುರುತಿಸಲ್ಪಟ್ಟಿದೆ ಆದುದರಿಂದ ಸರಕಾರಿ ಶಾಲೆಗಳಲ್ಲಿ ನಮ್ಮ ನಾಡಿನ ಎಲ್ಲಾ ವರ್ಗ ದ ಮಕ್ಕಳಿಗೆ ಮಾಂಸಾಹಾರಿ ಆಹಾರ ಕೊಡುವುದು ನಾಡಿನ ಧರ್ಮ ಧರ್ಮ ಗಳಲ್ಲಿ ಸೌಹಾರ್ದ ಸೃಷ್ಟಿ ಸುವ ಬದಲು ವಿನಾ ಕಾರಣ ಸಾಮರಸ್ಯ ಕೆಡಿಸಿ ದಂತೆ ಆಗುತ್ತೆ ಇದರಿಂದ ಜೈನರ ಧರ್ಮದ ಮಕ್ಕಳಿಗೆ ಹಾಗೂ ನಮ್ಮ ಸಹೋದರ ಧರ್ಮ ದ ಎಲ್ಲಾ ಭಾರತೀಯ ಸಸ್ಯಾಹಾರಿ ಸೇವನೆ ಮಾಡುವ ಮಕ್ಕಳಿಗೆ ಆಹಾರ ವನ್ನೆ ಸೇವನೆ ಮಾಡಲಾಗದ ಪರಿಸ್ಥಿತಿ ಉಂಟಾಗಿದೆ ಮಾನಸಿಕ ಕಿನ್ನತೆ ಯಿಂದ ಓದಿನ ಮೇಲೆ ಅರೋಗ್ಯ ದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಹಾಗಾಗಿ ಕೋಳಿ ಮೊಟ್ಟೆ ಒಳ್ಳೆ ದು ಕೆಟ್ಟದು ಅನ್ನುವ ವಿಮರ್ಶೆ ಅನಗತ್ಯ ಗೊಂದಲ ಸೃಷ್ಟಿಸಿದೆ ಆದ್ದರಿಂದ ಸರಕಾರ ಶಾಲೆಗಳಲ್ಲಿ ಮೊಟ್ಟೆಗಳನ್ನು ಕೊಡುವ ನಿರ್ಣಯ ಹಿಂಪಡೆಯ ಬೇಕು ಬದಲಿಗಾಗಿ ಕಂದ ಮೂಲ ರಹಿತಉತ್ತಮ ಪೌಷ್ಟಿಕ ಅಂಶಗಳು ಉಳ್ಳ ದೇಹ ಅರೋಗ್ಯ ಕಾಪಾಡುವ ದ್ವಿಧಳ ದಾನ್ಯ, ಹಾಲು, ಬಾದಾಮಿ ಹಾಲು ಕೊತ್ತಂಬರಿ, ಜೀರಿಗೆ, ಮತ್ತುಉತ್ತಮ ಸ್ವಾದಿಷ್ಟ ಭರಿತ ತಾಜಾ ಹಣ್ಣುಗಳನ್ನು ಕೊಡಬಹು ದಾಗಿದೆ ಎಲ್ಲಾ ಧರ್ಮ ದ ಎಲ್ಲಾ ನಂಬಿಕೆ ಗಳನ್ನು ಗೌರವಿಸುತ್ತ ಅಹಿಂಸಾ ಮಯ ವಾತಾವರಣ ಶಾಂತಿ ಸುವ್ಯವಸ್ಥೆಗೆ ಕಾರಣ ವಾಗುವ ಉತ್ತಮ ನಿರ್ಣಯ ತಾವು ಅತೀ ಶೀಘ್ರ ಕೈಗೊಳ್ಳಬೇಕಾಗಿ ಅಪೇಕ್ಷಿ ಸುತ್ತೇವೆ.


ಇತೀ
ಶ್ರೀ ಜಿನೇಶ್ವರ ಸ್ಮರಣೆ ಗಳೊಂದಿಗೆ ಶುಭ ಆಶೀರ್ವಾದ
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ,
ಅಧ್ಯಕ್ಷರು,ಆಡಳಿತ ದಾರರು 18 ಬಸದಿ ಜೈನ ಕಾಶಿ ಮೂಡುಬಿದಿರೆ




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here