Friday 9th, May 2025
canara news

ಗಣೇಶ್‍ಪುರಿ ಭಗವಾನ್ ನಿತ್ಯಾನಂದ ಕ್ಷೇತ್ರಕ್ಕೆ ಕೊಂಡೆವೂರು ಶ್ರೀ ಯೋಗನಂದ ಸ್ವಾಮೀಜಿ ಭೇಟಿ

Published On : 04 Dec 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಡಿ.04: ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಭಿವಂಡಿಯ ಜಗತ್ಫ್ರಸಿದ್ಧ ಗಣೇಶ್‍ಪುರಿ (ವಜ್ರೇಶ್ವರಿ) ಭಗವಾನ್ ನಿತ್ಯಾನಂದ ಕ್ಷೇತ್ರಕ್ಕೆ ಇಂದಿಲ್ಲಿ ಶನಿವಾರ ಮುಂಜಾನೆ ಕಾಸರಗೋಡು ಉಪ್ಪಳ ಇಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಅವರು ಏಕದಿನದ ಯಾತ್ರೆಯನ್ನಾಗಿಸಿ ಭಕ್ತರನ್ನೊಳಗೊಂಡು ಆಗಮಿಸಿದರು.

ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಸಮಿತಿ ಅಧ್ಯಕ್ಷ ರಾಜೇಶ್ ರೈ, ಕಾರ್ಯದರ್ಶಿ ಹರೀಶ್ ಚೇವಾರ್, ಜೊತೆ ಕಾರ್ಯದರ್ಶಿ ಅಶೋಕ್ ಎಂ.ಕೋಟ್ಯಾನ್, ಕೋಶಾಧಿಕಾರಿ ಉಷಾ ಶೆಟ್ಟಿ, ಸುಧಾಕರ್ ವರ್ಕಾಡಿ, ರಾಜೇಶ್ ಕೋಟ್ಯಾನ್, ಹರೀಶ್ ಉದ್ಯಾವರ ಮತ್ತಿತರರು ಶ್ರೀಗಳವರನ್ನು ಭಕ್ತಿಪೂರ್ವಕ ಸ್ವಾಗತ ಕೋರಿದÀರು. ಬಳಿಕ ಶ್ರೀಗಳು ಪಟ್ಟದ ದೇವರ ಪೂಜೆ, ವೇದಮಾತಾ ಶ್ರೀ ಗಾಯತ್ರಿ ದೇವಿಯನ್ನು ಆರಾಧಿಸಿ ಭಕ್ತರೊಂದಿಗೆ ಗಣೇಶ್‍ಪುರಿ ಕ್ಷೇತ್ರದ ದರ್ಶನಗೈದರು.

ಶ್ರೀಗಳವರ ಜೊತೆ ಕ್ಷೇತ್ರದ ಹರ್ಷ ಕೊಂಡೆವೂರು, ಅನಿಲ್ ಉಪ್ಪಳ ಸೇರಿದಂತೆ ಕೊಂಡೆವೂರುನಿಂದ ಸುಮಾರು 66 ಭಕ್ತಾಧಿಗಳು, ಆಗಮಿಸಿದ್ದು ದಿನವಿಡಿ ಪೂಜಾಧಿಗಳಲ್ಲಿ ಪಾಲ್ಗೊಂಡು ಭಜನೆ ನೆರವೇರಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here