Sunday 23rd, January 2022
canara news

ಡಿ.09 -11: ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತೀ ಗರೋಡಿ ತೋನ್ಸೆ ಇದರ ಕೊಡಿ ತಿಂಗಳ ಕೋಲೋತ್ಸವ

Published On : 05 Dec 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಡಿ.05: ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತೀ ಗರೋಡಿ ತೋನ್ಸೆ ಇದರ ಕೊಡಿ ತಿಂಗಳ ಕೋಲೋತ್ಸವ ಇದೇ ಡಿ.09 ರಿಂದ ಡಿ.11ರ ಮೂರು ದಿನಗಳಲ್ಲಿ ನೇರವೇರಲಿದೆ ಎಂದು ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದ್ದಾರೆ.

ಡಿ.09ನೇ ಗುರುವಾರ ಸುಬ್ರಹ್ಮಣ್ಯ ಷಷ್ಠಿಯಂದ ಬೆಳೆಗ್ಗೆ ಹರಿಕಾಯಿ ಸಮರ್ಪಣೆ, ನಾಗ ತನು, ರಾತ್ರಿ 7:30 ಗಂಟೆಗೆ ಅಗೆಲು ಸೇವೆ (ಅನ್ನ ನೈವೇದ್ಯ ), ದರ್ಶನ ಸೇವೆ ನಂತರ ಪ್ರಸಾದ ವಿತರಣೆ. ಡಿ.10ನೇ ಶುಕ್ರವಾರ ಅಪರಾಹ್ನ 3:00 ಗಂಟೆಯಿಂದ ಶ್ರೀ ಬೈದರ್ಕಳರ ಕೋಲ, ದರ್ಶನ ಸೇವೆ, ಡಿ.11ನೇ ಶನಿವಾರ ಅಪರಾಹ್ನ 3:00 ಗಂಟೆಯಿಂದ ಮಾಯಂದಾಲ ಕೋಲ ನಡೆಯಲಿರುವುದು.

ಕ್ಷೇತ್ರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಆರ್ಚಕರು, ನಾಲ್ಕುಕೆರೆ ಗುರಿಕಾರರು ಹಾಗೂ ನಾಡಿನ ಭಕ್ತರ ಸೇವೆಗಳೊಂದಿಗೆ ಜರುಗುವ ಈ ಪಾವಿತ್ರ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಪದಾಧಿಕಾರಿಗಳು, ಸದಸ್ಯರು, ಭಕ್ತರು ತಮ್ಮ ಇಷ್ಟ ಬಂಧು ಮಿತ್ರರನ್ನೊಳಗೂಡಿ ಪಾಲ್ಗೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆÉ.

 
More News

ಸೂರತ್‍ನಲ್ಲಿ ಕೆಎಫ್‍ಸಿ'ಎಸ್ ಟ್ರೋಫಿ-2022 ತೃತೀಯ ವಾರ್ಷಿಕ  ಪಂದ್ಯಾಟ
ಸೂರತ್‍ನಲ್ಲಿ ಕೆಎಫ್‍ಸಿ'ಎಸ್ ಟ್ರೋಫಿ-2022 ತೃತೀಯ ವಾರ್ಷಿಕ ಪಂದ್ಯಾಟ
ಸುಧಾರಾಣಿ ಶೆಟ್ಟಿ ಸಂಶೋಧನ ಮಹಾಪ್ರಬಂಧಕ್ಕೆ ಪಿ.ಹೆಚ್‍ಡಿ ಪದವಿ
ಸುಧಾರಾಣಿ ಶೆಟ್ಟಿ ಸಂಶೋಧನ ಮಹಾಪ್ರಬಂಧಕ್ಕೆ ಪಿ.ಹೆಚ್‍ಡಿ ಪದವಿ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್-ಗೋಕುಲದ ವತಿಯಿಂದ ಮಕರ ಸಂಕ್ರಾಂತಿ ಸಾಮೂಹಿಕ ಶ್ರೀ  ಸತ್ಯನಾರಾಯಣ ಮಹಾಪೂಜೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್-ಗೋಕುಲದ ವತಿಯಿಂದ ಮಕರ ಸಂಕ್ರಾಂತಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Comment Here