Friday 9th, May 2025
canara news

ಬೋರಿವಿಲಿಯಲ್ಲಿ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ನಾಲ್ಕು ಕೃತಿಗಳ ಲೋಕಾರ್ಪಣೆ

Published On : 05 Dec 2021   |  Reported By : Rons Bantwal


ಸಾಹಿತ್ಯವು ಮನುಕುಲದ ಪರಿವರ್ತನಾ ಶಕ್ತಿಯಾಗಲಿ: ಎರ್ಮಾಳ್ ಹರೀಶ್ ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.05: ಕಥೆ, ಕವನಗಳು ಮಾನವ ಬದುಕನ್ನು ಬದಲಾಯಿಸುವ ತಾಕತ್ತು ಹೊಂದಬೇಕು. ಮನುಕುಲದ ಪರಿವರ್ತನೆಗೆ ಇಂತಹ ಬರವಣಿಗೆಗಳು ಶಕ್ತಿಯಾಗಬೇಕು. ಆವಾಗ ಕವಿ, ಲೇಖಕರ ಹೆಸರುಗಳು ಶಾಸ್ವತವಾಗಿ ಉಳಿಯುತ್ತದೆ. ಆದಿಕವಿ ಪಂಪ, ರನ್ನ ಮತ್ತಿತರರ ಅನುಭವಸ್ಥ ಮತ್ತು ದೂರದೃಷ್ಠಿತ್ವದ ಬರವಣಿಗೆಗಳಿಂದ ಅವರು ನಮ್ಮಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದು ಮುಂಬಯಿಯಲ್ಲಿನ ಹೆಸರಾಂತ ಉದ್ಯಮಿ, ರಾಜಕೀಯ ಧುರಿಣ, ಇ-ಸ್ಮಾರ್ಟ್ ಎನಾರ್ಜಿ ಸಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಸಂಜೆ ಬೋರಿವಿಲಿ ಪಶ್ಚಿಮದÀ ವಜೀರ್‍ನಾಕಾ ಜಯರಾಜ್‍ನಗರ್ ಇಲ್ಲಿನ ಶ್ರೀ ಮಹಿಷಮರ್ಧಿನಿ ಮಂದಿರದ ಸಭಾಗೃಹದಲ್ಲಿ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ಶಿವಾನಿ ಹಾಸ್ಪಿಟಲ್ ಮುಲುಂಡು ಇದದ ಹೆಸರಾಂತ ವೈದ್ಯಾಧಿಕಾರಿ, ಬಂಟರ ಸಂಘ ಮುಂಬಯಿ ಇದರ ಬಂಟ್ಸ್ ಹೆಲ್ತ್ ಸೆಂಟರ್‍ನ ಕಾರ್ಯಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿದ್ದು ಪ್ರಶಸ್ತಿ ಪುರಸ್ಕೃತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ರಚಿತ 18ನೇ ಕೃತಿ `ಶಿಮಂತೂರಿನ ಸಿರಿ' ಹಾಗೂ ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್ ಅಂಚನ್ ರಚಿತ 13ನೇ ಕೃತಿ `ಸೂರ್ಯಚಂದ್ರ' ಕಥಾ ಸಂಕಲನ, 14ನೇ ಕೃತಿ `ಲಾಕ್‍ಡೌನ್' ಕವನ ಸಂಕಲನ, ಮತ್ತು ಸುಶೀಲಾ ಎಸ್.ಅವಿೂನ್ ಕೊಡವೂರು ರಚಿತ ಚೊಚ್ಚಿಲ ಕೃತಿ `ಹೊಸ್ತಿಲ ಹೂ' ಕಥಾ ಸಂಕಲನ ಇವುಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿ ಎರ್ಮಾಳ್ ಹರೀಶ್ ತಿಳಿಸಿದರು.

ರವಿ ಕಾಣದ್ದನ್ನು ಕವಿ ಕಂಡ ಅಂತಾರೆ. ಕಾರಣ ಇವರು ತಮ್ಮ ಬರಹಗಳಿಂದಲೇ ಸಮಾಜದ ಪ್ರತಿರೂಪವನ್ನು ನಮ್ಮೆದುರು ತೆರೆದಿಡುವಷ್ಟು ಶಕ್ತಿಯುಳ್ಳವರು. ಇವರೇ ಕವಿಗಳು, ಸಾಹಿತಿಗಳು. ಇಂತವರ ಪಂಕ್ತಿಯಲ್ಲಿ ನಮ್ಮವರೇ ಆದ ಶಿಮಂತೂರು ಚಂದ್ರಹಾಸ ಸುವರ್ಣ, ಶಾರದಾ ಆನಂದ್ ಅಂಚನ್, ಸುಶೀಲಾ ಎಸ್.ಅವಿೂನ್ ಕೊಡವೂರು ಸೇರಿಕೊಂಡ ಕಾರಣ ಈ ವೇದಿಕೆ ರೂಪುಗೊಂಡಿದೆ. ತಮ್ಮೆಲ್ಲರ ಸಾಹಿತ್ಯ ಕೃಷಿಯು ಇನ್ನಷ್ಟು ಶಸಕ್ತವಾಗಿ ಸಾರಸ್ವತ ಲೋಕ ಫಲವತ್ತಾಗಲಿ. ಇದೀಗಲೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳು ಪ್ರಾಪ್ತಿಯಾಗಿದ್ದು ಮುಂದೊಂದು ದಿನ ನಿಮ್ಮಲ್ಲಿನ ಒಬ್ಬರೂ ಈ ಗೌರವಕ್ಕೆ ಪಾತ್ರರಾಗಲಿ ಎಂದು ಎರ್ಮಾಳ್ ಹರೀಶ್ ಹಾರೈಸಿದರು.

ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರ ಈ ಮೂರರ ಸಂಬಂಧ ತಿಳಿದುಕೊಳ್ಳುವುದು ಬಹಳ ಅವಶ್ಯಕ. ಕಾಲ್ಪನಿಕ ಲೋಕವನ್ನು ಬರಹಕ್ಕೆ ಇಳಿಸುವವನೇ ಕವಿ, ಸಾಹಿತಿ, ಕವಿಯಾದನಿಗೆ ಸೂಕ್ಷ್ಮಗ್ರಾಹ್ಯತೆ, ರಸಿಕತೆ ಹಾಗೂ ಹೃದಯ ಶ್ರೀಮಂತಿಕೆ ಇದ್ದರೆ ಓರ್ವ ಶ್ರೇಷ್ಠ ಸಾಹಿತಿ ಆಗಲು ಸಾಧ್ಯ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆ ಅದಷ್ಟು ಶೀಘ್ರ 8ನೇ ಪರಿಚ್ಛೇದಕ್ಕೆ ಸೇರುವಲ್ಲಿ ಸಂಶಯವಿಲ್ಲ. ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವ ಕನ್ನಡ ಭಾಷೆ ಶ್ರೀಮಂತವಾಗಿರುವಂತದ್ದು. ದೈವರ ಆರಾಧನೆ ಮೂಲಕ ಮಾತ್ರ ನಾವೂ ದೇವರನ್ನು ತಲುಪಬಹುದು. ನಮ್ಮ ಶ್ರೀಮಂತವಾಗಿರುವ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ದಾಟಿಸುವ ಅಗತ್ಯವಿದೆ. ಏಕೆಂದರೆ ನಂಬಿಕೆಯೇ ಆಧ್ಯಾತ್ಮದ ತಳಹದಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಸತ್ಯಪ್ರಕಾಶ್ ಶೆಟ್ಟಿ ತಿಳಿಸಿದರು.

ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಕೃತಿಗಳನ್ನು ಪರಿಚಯಿಸಿ ತುಳುನಾಡಿನ ಆರಾಧನಾ ಪದ್ಧತಿ, ಆಡಂಬರ ಹಾಗೂ ಮೂಡನಂಬಿಕೆಯಿಂದ ನಲುಗುತ್ತಿರುವಾಗ ಶಿಮಂತೂರು ಅವರ ತುಳು ಜಾನಪದ ಕೃತಿಗಳು ಮುಖ್ಯವಾಗುತ್ತದೆ. ಸೂಕ್ಷ ್ಮ ದೃಷ್ಠಿಕೋನ ಹಾಗೂ ನಾಜೂಕು ಮನಸ್ಸಿನ ಸುಶೀಲಾ ಅಮೀನ್ ತಮ್ಮ ಚೊಚ್ಚಲ ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡ ಶಾರದಾ ಅಂಚನ್ ಅವರು ಕೊರೊನಾ ಕಾಲದಲ್ಲಿ ಸ್ಪಂದಿಸಿದ ಕವಿತೆ ಹಾಗೂ ಕಥಾ ಸಂಕಲನಗಳು ಇಂದು ಬಿಡುಗಡೆಕೊಂಡಿದ್ದು ಕೃತಿಕರ್ತರಿಗೆ ಅಭಿನಂದನೆಗಳು ಎಂದರು.

ಪೂಜಾ ಪ್ರಕಾಶನದ ಪ್ರಕಾಶಕ ಚಂದ್ರಹಾಸ ಸುವರ್ಣ, ಕೃತಿಕರ್ತೆಯರಾದ ಶಾರದಾ ಅಂಚನ್ ಮತ್ತು ಸುಶೀಲಾ ಅವಿೂನ್ ಸಾಂದರ್ಭಿಕವಾಗಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿ ತಮ್ಮ ಕೃತಿಗಳು ಹೊರ ಬರಲು ಕಾರಣರಾದ ಎಲ್ಲರಿಗೂ ಆಭಾರ ಮನ್ನಿಸಿದರು.


ಶ್ರೀ ಮಹಿಷಮರ್ಧಿನಿ ಮಂದಿರ ಮತ್ತು ಸಾಹಿತ್ಯ ಬಳಗ ಮುಂಬಯಿ ಇವುಗಳ ಸಹಯೋಗÀÀದಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿ, ಬರಹಗಾರರು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು. ಶಾರದಾ ಅಂಚನ್ ಪ್ರಾರ್ಥನೆಯನ್ನಾಡಿದರು. ಪೂಜಾ ಪ್ರಕಾಶನದ ಪೂಜಾ ಪ್ರಕಾಶನದ ಸರಸ್ವತಿ ಸಿ.ಸುವರ್ಣ, ಆನಂದ್ ಅಂಚನ್, ಹರ್ಷ ಪಾಲನ್, ಹಿತೋಶ್ ಹರಿದಾಸ್, ಸತೀಶ್ ಅವಿೂನ್, ವಿೂನಾ ಪೂಜಾರಿ ಅತಿಥಿüಗಳಿಗೆ ಪುಷ್ಪಗುಪ್ಛವನ್ನಿತ್ತು ಗೌರವಿಸಿದರು.

ವೆಂಕಟ್ರಮಣ ತಂತ್ರಿ, ಪೂಜಾಶ್ರೀ ಹರ್ಷಿದ್, ಅನುರಾಗ್ ಆನಂದ್ ಅಂಚನ್, ಬೇಬಿ ಕರ್ಕೇರ ಸಯಾನ್, ಗಣ್ಯರನೇಕರು ಸೇರಿದಂತೆ ಮುಂಬಯಿಯಲ್ಲಿನ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು ಸಾಹಿತ್ಯ ಬಳಗ ಮುಂಬಯಿ ಇದರ ಸ್ವರ್ಗೀಯ ಹೆಚ್.ಬಿ.ಎಲ್ ರಾವ್ ಇವರನ್ನು ಸ್ಮರಿಸಲಾಯಿತು. ನವೀನ್ ಕರ್ಕೇರ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ಸುವರ್ಣ ಆಭಾರ ಮನ್ನಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here