Sunday 23rd, January 2022
canara news

ಡಿ.12: ಕಾಸರಗೋಡು ಮುನ್ಸಿಪಲ್ ಸಭಾಂಗಣದಲ್ಲಿ ರಂಗೋತ್ಸವ

Published On : 12 Dec 2021   |  Reported By : Rons Bantwal


ಗಾಯಕ ರಮೇಶ್ ಚಂದ್ರ ಅವರಿಗೆ ದಿ| ಡಾ| ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ

ಮುಂಬಯಿ (ಆರ್‍ಬಿಐ), ಡಿ.08: ಪಾರೆಕಟ್ಟೆಯ ರಂಗ ಕುಟೀರ ಕಾಸರಗೋಡು ನೇತೃತ್ವದಲ್ಲಿ ರಂಗೋತ್ಸವ ಕಾರ್ಯಕ್ರಮ ಇದೇ ಡಿ.12ರ ಭಾನುವಾರ ಅಪರಾಹ್ನ 2;00 ಗಂಟೆಯಿಂದ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.

ರಂಗ ಕುಟೀರದ ನಿರ್ದೇಶಕ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸುಕನ್ಯ ಮಾರುತಿ ಉದ್ಘಾಟಿಸುವರು. ಹಿರಿಯ ರಂಗನಟ ದೇವರಾಜ್ ಡಿ.ಮುಖ್ಯ ಅತಿಥಿüಯಾಗಿ ಆಗಮಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ., ಸಾಣೇಹಳ್ಳಿಯ ರಂಗಸಹಾಸ ಟ್ರಸ್ಟ್ ಕಾರ್ಯದರ್ಶಿ ಕೆ.ಮಲ್ಲಯ್ಯ ಶ್ರೀಮಠ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ದಿ| ಡಾ| ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿಯನ್ನು ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ ಚಂದ್ರ ಅವರಿಗೆ ಪ್ರದಾನಿಸÀಲಾಗುವುದು. ಉದುಮ ಶಾಸಕ ನ್ಯಾಯವಾದಿ ಸಿ.ಹೆಚ್.ಕುಂಞಂಬು ಪ್ರಶಸ್ತಿ ಪ್ರದಾನಿಸುವರು.

ಈ ಸಂzರ್ಭ ನೃತ್ಯ ವೈವಿಧ್ಯ, ಕೂಚುಪುಡಿ ನೃತ್ಯ, ಸುಗಮ ಸಂಗೀತ, ನಾ ಸತ್ತಾಗ ಕನ್ನಡ ರಂಗ ನಾಟಕದ ಪ್ರದಶರ್Àನ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

 

 
More News

ಸೂರತ್‍ನಲ್ಲಿ ಕೆಎಫ್‍ಸಿ'ಎಸ್ ಟ್ರೋಫಿ-2022 ತೃತೀಯ ವಾರ್ಷಿಕ  ಪಂದ್ಯಾಟ
ಸೂರತ್‍ನಲ್ಲಿ ಕೆಎಫ್‍ಸಿ'ಎಸ್ ಟ್ರೋಫಿ-2022 ತೃತೀಯ ವಾರ್ಷಿಕ ಪಂದ್ಯಾಟ
ಸುಧಾರಾಣಿ ಶೆಟ್ಟಿ ಸಂಶೋಧನ ಮಹಾಪ್ರಬಂಧಕ್ಕೆ ಪಿ.ಹೆಚ್‍ಡಿ ಪದವಿ
ಸುಧಾರಾಣಿ ಶೆಟ್ಟಿ ಸಂಶೋಧನ ಮಹಾಪ್ರಬಂಧಕ್ಕೆ ಪಿ.ಹೆಚ್‍ಡಿ ಪದವಿ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್-ಗೋಕುಲದ ವತಿಯಿಂದ ಮಕರ ಸಂಕ್ರಾಂತಿ ಸಾಮೂಹಿಕ ಶ್ರೀ  ಸತ್ಯನಾರಾಯಣ ಮಹಾಪೂಜೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್-ಗೋಕುಲದ ವತಿಯಿಂದ ಮಕರ ಸಂಕ್ರಾಂತಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Comment Here