Friday 9th, May 2025
canara news

ಚೆಂಬೂರ್ ಕರ್ನಾಟಕ ಹೈಸ್ಕೂಲ್ ಇದರ ಚಿತ್ರಕಲಾ ಶಿಕ್ಷಕ

Published On : 12 Dec 2021   |  Reported By : Rons Bantwal


ಶ್ರೀರಾಮ್ ಎಸ್.ಮಹಾಜನ್‍ಗೆ ರಾಜ್ಯ ಮಟ್ಟದ ನಾವೀನ್ಯ ಶಿಕ್ಷಕ ಪ್ರಶಸ್ತಿ

ಮುಂಬಯಿ (ಆರ್‍ಬಿಐ), ಡಿ.00: ಬೃಹನ್ಮುಂಬಯಿ ಇಲ್ಲಿನ ಚೆಂಬೂರ್ ಕರ್ನಾಟಕ ಹೈಸ್ಕೂಲ್ ಇದರ ಚಿತ್ರಕಲಾ ಶಿಕ್ಷಕ ಶ್ರೀರಾಮ್ ಎಸ್.ಮಹಾಜನ್ ಇವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಇನ್ನೋವೇಟಿವ್ ಆರ್ಟ್ ಟೀಚರ್ ಅವಾರ್ಡ್-2021 ಪ್ರಾಪ್ತಿಯಾಗಿದೆ.

ಜಲಗಾಂವ್ ಲಲಿತ್ ಆರ್ಟ್ ಅಕಾಡೆಮಿ ಚೋಪ್ಡಾ ಜಲಗಾಂವ್ ಜಿಲ್ಲೆ ಮತ್ತು ಮಹಾರಾಷ್ಟ್ರ ರಾಜ್ಯ ಕಲಾ ಶಿಕ್ಷಕರ ಸಂಘ ಇವುಗಳು ಜಂಟಿಯಾಗಿ ಮಹಾರಾಷ್ಟ್ರದಾದ್ಯಂತ ಅರ್ಹ ಅಭ್ಯಥಿರ್üಗಳಲ್ಲಿ ಈ ಪ್ರಶಸ್ತಿಗೆ ಮಹಾಜನ್ ಆಯ್ಕೆಯಾಗಿರುವರು.

ಸಾಮಾಜಿಕ ನಾಯಕಿ, ರಾಷ್ಟ್ರೀಯ ಮಹಿಳಾ ಆಯೋಗ ನವದೆಹಲಿ ಇದರ ಮಾಜಿ ಅಧ್ಯಕ್ಷೆ ಡಾ| ಸುಶೀಲಾಬೆನ್ ಶ್ಹಾ ಅವರ 81ನೇ ಜನ್ಮದಿನದ ಸಂದರ್ಭದಲ್ಲಿ ಭಗಿನಿ ಮಂಡಲ್ ಚೋಪ್ಡಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದು ವಿಧಾನಸಭಾ ಮಾಜಿ ಸಭಾಪತಿ ಅರುಣ್‍ಭಾಯ್ ಗುಜರಾತಿ ಅವರು ಮಹಾಜನ್‍ಗೆ ಇನ್ನೋವೇಟಿವ್ ಟೀಚರ್ ಪ್ರಶಸ್ತಿ-2021 ನೀಡಿ ಗೌರಸಿದರು.

ಜೆಜೆ ಸ್ಕೂಲ್ ಆಫ್ ಆರ್ಟ್ ಮುಂಬಯಿ ಇದರ ಡೀನ್ ಪೆÇ್ರ| ಸಂದೀಪ್ ಡೊಂಗರೆ, ಲಲಿತ್ ಆರ್ಟ್ ಅಕಾಡೆಮಿಯ ಪ್ರಿನ್ಸಿಪಾಲ್ ರಾಜೇಂದ್ರ ಮಹಾಜನ್, ಊರ್ಮಿಲಾಬೆನ್ ಗುಜರಾತಿ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀರಾಮ್‍ಗೆ ಪ್ರಶಸ್ತಿಫಲಕ, ಪ್ರಮಾಣಪತ್ರ, ಶಾಲು, ಪುಷ್ಪಗುಚ್ಛ ಮತ್ತು ರೂಪಾಯಿ 11,000 ನಗದು ಮೊತ್ತ ನೀಡಿ ಅಭಿನಂದಿಸಿದರು.

ಮಹಾಜನ್ ಕಳೆದ 21 ವರ್ಷಗಳಿಂದ ಶಿಕ್ಷಣ, ಸಮಾಜ ಸೇವೆ ಮತ್ತು ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಹಲವಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಕಾರ್ಯಾಗಾರ ಮತ್ತು ಪ್ರದರ್ಶನಗಳನ್ನು ಆಯೋಜಿಸಿ 2000ಕ್ಕೂ ಹೆಚ್ಚು ವಿದ್ಯಾಥಿರ್üಗಳಿಗೆ ಮಾರ್ಗದರ್ಶನ ನೀಡಿದ್ದು ಅನೇಕ ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಿಸಿದ್ದಾರೆ, ಆಥಿರ್üಕ ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾಥಿರ್üಗಳ ಶಾಲಾ ಶುಲ್ಕವನ್ನು ಪಾವತಿಸಿರುತ್ತಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ತಮ್ಮ ಹೆಸರಿನಲ್ಲಿ ಮೂರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ.

ಈ ಪ್ರಶಸ್ತಿಯು ನನ್ನ ಕುಟುಂಬ, ವಿದ್ಯಾಥಿರ್üಗಳು ಮತ್ತು ಎಲ್ಲಾ ಹಿತೈಷಿಗಳಿಗೆ ಸೇರಿದ್ದು, ನನ್ನಿಂದ ಅವರ ಆಶಯಗಳು ನಾನು ಕಠಿಣ ಪರಿಶ್ರಮ ಮತ್ತು ವೈಭವದ ಹೊಸ ಎತ್ತರವನ್ನು ಏರಲು ಪ್ರೇರೇಪಿಸುತ್ತದೆ ಎಂದು ಶ್ರೀರಾಮ್ ಮಹಾಜನ್ ತಿಳಿಸಿದರು.

ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಆರಾಟೆ ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರು ಹಾಗೂ ಚೆಂಬೂರು ಕರ್ನಾಟಕ ಪ್ರೌಢಶಾಲೆಯ ಪ್ರಾಂಶುಪಾಲೆ ಡಾ| ಗೀತಾಂಜಲಿ ಸಾಲಿಯಾನ್, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥಿರ್üಗಳು ಶ್ರೀರಾಮ್ ಅವರ ಈ ಸಾಧನೆ ಶ್ಲಾಘಿಸಿ ಅಭಿನಂದಿಸಿ ಅವರ ಮುಂದಿನ ಪ್ರಯತ್ನಗಳಿಗೆ ಎಲ್ಲಾ ಯಶಸ್ಸು ಸಿಗಲಿ ಎಂದು ಹಾರೈಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here