Friday 28th, January 2022
canara news

ಚೆಂಬೂರು ಶ್ರೀ ಸುಬ್ರಹ್ಮಣ್ಯ ಮಠÀದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ

Published On : 12 Dec 2021   |  Reported By : Rons Bantwal


ಸಂಪ್ರದಾಯಿಕವಾಗಿ ಆಚರಿಸಲ್ಪಟ್ಟ ಶ್ರೀ ಸ್ಕಂದ ಷಷ್ಠಿ ಮಹೋತ್ಸವ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಡಿ.09: ಉಪನಗರ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀ ಸುಬ್ರಹ್ಮಣ್ಯ ಮಠÀದ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಇಂದಿಲ್ಲಿ ಗುರುವಾರ 2021ನೇ ವಾರ್ಷಿಕ ಶ್ರೀ ಸ್ಕಂದ ಷಷ್ಠಿ (ಚಂಪಾ ಷಷ್ಠಿ) ಮಹೋತ್ಸವವನ್ನು ಸಂಪ್ರದಾಯಿಕ ಹಾಗೂ ಶಾಸ್ತ್ರೋಕ್ರವಾಗಿ ಆಚರಿಸಲಾಯಿತು.

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಷಷ್ಠಿ ಉತ್ಸವ ನೇರವೇರಿಸಲ್ಪಟ್ಟತು.

ಮಠದ ವ್ಯವಸ್ಥಾಪಕರುಗಳಾದ ವಿಷ್ಣು ಕಾರಂತ್ ಇವರ ಮುಂದಾಳುತ್ವದಲ್ಲಿ ಶ್ರೀ ಕೃಷ್ಣರಾಜ ಉಪಾಧ್ಯಯ, ಗುರುರಾಜ್ ಭಟ್, ಶ್ರೀಧರ ಭಟ್, ಶ್ರೀಪ್ರಸಾದ್ ಭಟ್ ಮತ್ತು ಸಹಪುರೋಹಿತರು ತಮ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವಕಲಶ ಅಭಿಷೇಕ, ಸರ್ಪತ್ರೇಯ ಮಂತ್ರಹೋಮ, ಸಾಮೂಹಿಕ ಅಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಮಹಾಪೂಜೆ ಇತ್ಯಾದಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.

ವಾರ್ಷಿಕ ಷಷ್ಠಿ ಉತ್ಸವ ನಿಮಿತ್ತ ಪೂರ್ವಾತಯಾರಿಯಾಗಿಸಿ ಮೂರು ದಿನಗಳಲ್ಲಿ ವಿಶೇಷ ಪೂಜಾಧಿಗಳನ್ನು ಕಳೆದ ಬುಧವಾರ ಪ್ರಾಯಶ್ಚಿತ ಹೋಮದಿಗಳು ನಡೆಸಲಾಯಿತು. ಮಹಾನಗರದ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ನಾಗಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾದರು.

ಶುಕ್ರವಾರ ಪ್ರಾತಃಕಾಲ ಪಂಚವಿಂಶತಿ, ಕಲಶಾಭಿಷೇಕ, ಕಲಶಪೂರ್ವಕ ಸಂಪ್ರೂಷಣೆ, ಮಹಾ ಮಂತ್ರಾಕ್ಷತೆ ಹಾಗೂ ಮಹಾಪೂಜೆ ನಡೆಸಲಾಗುವುದು ಎಂದು ಮಠದ ವಿಷ್ಣು ಕಾರಂತ್ ತಿಳಿಸಿದರು.

 
More News

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಾರಾಯಣ ಗುರು ಅಧ್ಯಯನ ಶುಭಾರಂಭ
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಾರಾಯಣ ಗುರು ಅಧ್ಯಯನ ಶುಭಾರಂಭ
ಬಂಟ್ಸ್‌ ಕ್ರೆಡಿಟ್‌ ಕೋ.ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಮುನಿಯಾಲು ಉದಯ ಶೆಟ್ಟಿ ಆಯ್ಕೆ
ಬಂಟ್ಸ್‌ ಕ್ರೆಡಿಟ್‌ ಕೋ.ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಮುನಿಯಾಲು ಉದಯ ಶೆಟ್ಟಿ ಆಯ್ಕೆ
ಅವಿಭಜಿತ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ
ಅವಿಭಜಿತ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ

Comment Here