Friday 29th, March 2024
canara news

ಸಂಸದ ಶ್ರೀ ಗೋಪಾಲ ಶೆಟ್ಟಿಯವರ ತುಳು-ಕನ್ನಡಿಗ ಅಭಿಮಾನಿಗಳ ಬಳಗದ ಅಭಿನಂದನಾ ಸಮಾರಂಭ

Published On : 19 Dec 2021   |  Reported By : Rons Bantwal


ರಾಷ್ಟ್ರದ ಬಲಾಢ್ಯತೆಗೆ ಕಾನೂಬದ್ಧ ವಯಸ್ಸು ಬಹುದೊಡ್ಡ ವರದಾನ-ಸಂಸದ ಗೋಪಾಲ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.18: ಸ್ತ್ರೀಯರ ವಿವಾಹ ವಯಸ್ಸು 21ಕ್ಕೆ ಪರಿಷ್ಕರಣೆ ಆಗುವಲ್ಲಿ ಕಳೆದ ಬುಧವಾರ ಸಂಸತ್‍ನಲ್ಲಿ ತÀನ್ನ ಪ್ರಸ್ತಾವನೆಯಂತೆ ತಿದ್ದುಪಡಿ ಕೋರಿ ಮಸೂದೆ ಮಂಡಿಸಿ ಅನುಮೋದನೆ ಪಡೆದ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ರಾಷ್ಟ್ರದ ಬಲಾಢ್ಯತಾ ಬದಲಾವಣೆಗೆ ವಿವಾಹದÀ ಕಾನೂಬದ್ಧ ವಯಸ್ಸು ಬಹುದೊಡ್ಡ ವರದಾನ ಆಗಲಿದೆ. ಈ ಹಿನ್ನಲೆಯಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರದ ಸಮಸ್ತ ಜನತೆಯ ಪರವಾಗಿ ಶುಭೇಚ್ಛ ವ್ಯಕ್ತಪಡಿಸುವೆ ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.

ಸಂಸದ ಗೋಪಾಲ್ ಶೆಟ್ಟಿ ಪ್ರಸ್ತಾವನೆಯಂತೆ ವಿವಾಹ ಕಾನೂಬದ್ಧ ವಯಸ್ಸು ಅಂಗೀಕಾರಕ್ಕೆ ಮನ್ನಣೆ ದೊರೆತೆ ಪ್ರಯುಕ್ತ ಇಂದಿಲ್ಲಿ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಸಂಘಟನೆಯು ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿಮಾನಿ ಬಳಗದ ಗೌರವ ಸ್ವೀಕರಿಸಿ ಸಂಸದ ಗೋಪಾಲ್ ಶೆಟ್ಟಿ ಮಾತನಾಡಿದರು.

ಕೇಂದ್ರ ಸಚಿವ ಸಂಪುಟದಲ್ಲಿ ಸಲ್ಲಿಸಿದ ವಿಧೇಯಕ ಮಾನ್ಯತೆ ಪ್ರಾಪ್ತಿಸಿ ಮಾತನಾಡಿದ ಸಂಸದ ಗೋಪಾಲ್ ಶೆಟ್ಟಿ ಹೆಣ್ಣುಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಸಿದ್ದು ಸೂಕ್ತ ನಿರ್ಧಾರವಾಗಿದೆ. ಈ ಕಾಯ್ದೆಯಿಂದ ಭವಿಷ್ಯತ್ತಿನಲ್ಲಿ ರಾಷ್ಟ್ರದಲ್ಲಿ ಮಹತ್ತರವಾದ ಬದಲಾವಣೆ ಕಾಣಲಿದೆ. ಶಾಲಾ ಕಾಲೇಜು ಶೈಕ್ಷಣಿಕ ದಿನಗಳಲ್ಲಿ ಮಕ್ಕಳು ಪ್ರೇಮಕ್ಕೆ ಒಳಗಾಗಿ ಮಾತಾಪಿತರ ಅನುಮತಿವಿನಃ 18ನೇ ವಯಸ್ಸಿನಲ್ಲೇರಿಜಿಸ್ಟರ್ ಮದುವೆ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. ನಮ್ಮಲ್ಲಿ ಪ್ರಜಾಪ್ರಭುತ್ವ (ಡೆಮೊಕ್ರಾಸಿ), ಮಾನವ ಹಕ್ಕುಗಳು (ಹ್ಯೂಮನ್ ರೈಟ್), ವ್ಯಕ್ತಿ ಸ್ವತಂತ್ರ್ಯ ಎಲ್ಲವೂ ಇದ್ದೂ ಇದು ಕಾನೂಬದ್ಧ ವಯಸ್ಸಿನ ಮುಂದೆ ನಿಷ್ಕ್ರೀಯವಾಗುತ್ತಿವೆ. ದಾಂಪತ್ಯ ಬಾಳಿನುದ್ದಕ್ಕೂ ಅದೆಷ್ಟೋ ಕಷ್ಟನಷ್ಟಗಳನ್ನು ಅನುಭವಿಸಿ ತ್ಯಾಗಮಯ ಬದುಕಿನೊಂದಿಗೆ ಮಕ್ಕಳನ್ನು ಓದಿಸಿ ದೊಡ್ಡವರನ್ನಾಗಿ ಮಾಡಿ ಮಕ್ಕಳ ಬಗ್ಗೆ ಭವ್ಯ ಕನಸುಗಳನ್ನು ಕಾಣುವ ಮಾತಾಪಿತಾರಿಗೂ ವ್ಯಕ್ತಿ ಸ್ವತಂತ್ರ್ಯ ಕಂಡುಕೊಳ್ಳಲು ಇಂತಹ ಕಾಯ್ದೆ ಫಲಕಾರಿ ಆಗಲಿದೆ ಎಂದರು.

ಇಂತಹ ವಿಚಾರವಾಗಿ ದೈನಂದಿನವಾಗಿ ನನ್ನಲ್ಲಿಗೆ ಬಹಳಷ್ಟು ಮಕ್ಕಳ ಪೆÇೀಷಕರು ಬಂದು ತಮ್ಮ ಮಕ್ಕಳ ಬಗ್ಗೆ ಬೇಸರ ತೋಡಿಕೊಳ್ಳುತ್ತಾರೆ. ಮಕ್ಕಳು ಕಾನೂಬದ್ಧ ವಯಸ್ಸು ಮನವರಿಸಿ ತಮ್ಮ ಆಯ್ಕೆಯಂತೆಯೇ ಮದುವೆಯಾದರೆ ಅದೆಷ್ಟೋ ಅನಾಹುತಗಳು ಸೃಷ್ಟಿಯಾಗುತ್ತವೆ. 18ರ ವಯಸ್ಸಿನ ಮತ್ತು 21ರ ಮಧ್ಯೆ ಮಕ್ಕಳ ಪ್ರಬುದ್ಧತೆಯ ಮಟ್ಟದಲ್ಲೂ ಬಹಳಷ್ಟು ವ್ಯತ್ಯಾಸವಾಗುವುದು. ಮಕ್ಕಳು ಸ್ವಅನುಭವಗಳನ್ನು ಕಲಿತು ಕೊಳ್ಳುತ್ತಾರೆ ಮಾತ್ರವಲ್ಲದೆ ಇದೊಂದು ಬದಲಾವಣೆಯ ಆವರ್ತಿಯೂ ಹೌದು. 21ರಲ್ಲಿ ಮಕ್ಕಳು ಪರಿಪಕ್ವರಾಗಿ ಸ್ವತಃ ಕಾಲಲ್ಲಿ ನಿಂತು ನೌಕರಿಗೂ ಸೇರಿ ಸ್ವತಃ ಗಳಿಕೆಗೆ ತೊಡಗಿಸಿದಾಗ ಸ್ವರಂತ್ರರಾಗಿ ಇನ್ನಷ್ಟು ಬಲಶಾಲಿಗಳಾಗುತ್ತಾರೆ. ಸಾಂಗತ್ಯ ಬಳಿಕವೂ ಮತ್ತಷ್ಟು ಜವಾಬ್ದಾರಿ ಹೊತ್ತು ಸ್ವನಿಲುವು ಸಾಧಿಸಲು ಸಾಧ್ಯ. ಆವಾಗ ಮಕ್ಕಳ ಜೀವನಶೈಲಿಯೂ ಬದಲಾಗುತ್ತದೆ. ಇದರಿಂದ ಮಕ್ಕಳ ಜೀವನದಲ್ಲಿ ಬಹುದೊಡ್ಡ ಪರಿವರ್ತನೆ ಸಾಧ್ಯವಾಗುವುದು. ಮೋದಿ ಸರ್ಕಾರದ ಧ್ಯೇಯದಂತೆ ಬೇಟಿ ಬಚಾವೋ, ಬೇಟಿ ಪಡಾವೋ ಸಂದೇಶ ನೀಡಿದ್ದರು. ಇದರಿಂದ ದೇಶದಲ್ಲಿ ಬಹಳವಾದ ಪರಿವರ್ತನೆಯಾಗಿದೆ. ಮುಂದಿನ ದಿನಗಳಲ್ಲೂ ರಾಷ್ಟ್ರದಲ್ಲಿ ಬಹಳಷ್ಟು ಬದಲಾವಣೆ ಕಾಣಲಿದೆ. ಕಳೆದ ವರ್ಷ ಭಾರತ ರಾಷ್ಟ್ರದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರಾಷ್ಟ್ರದ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮದುವೆ ವಯಸ್ಸು ಪರಿಷ್ಕರಿಸುವ ಬಗ್ಗೆ ಉಲ್ಲೇಖಿಸಿರುವುದನ್ನು ಸಂಸದ ಗೋಪಾಲ್ ಶೆಟ್ಟಿ ಪ್ರಸ್ತಾಪಿಸಿದರು.

ಭಾರತೀಯ ಜನತಾ ಪಕ್ಷದಿಂದ ಮುಂಬಯಿ ನಗರ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದಿಂದ ಶಿವಸೇನೆ ಮತ್ತು ಆರ್‍ಪಿಐ ಪಕ್ಷಗಳ ಮೈತ್ರಿಕೂಟದ ಅಭ್ಯಥಿರ್üಯಾಗಿ ದ್ವಿತೀಯ ಬಾರಿಗೆ ಕಣಕ್ಕಿಳಿದು ಅಭೂತಪೂರ್ವ ಜಯ ಗಳಿಸಿದ ರಾಷ್ಟ್ರದ ಏಕೈಕ ತುಳು-ಕನ್ನಡಿಗ ಸಂಸದ ಗೋಪಾಲ್ ಶೆಟ್ಟಿ ಸದಾ ಜನಪರ ಸೇವಾ ಕಾಳಜಿ ಹೊಂದಿ ಸಾರ್ವಜನಿಕ ಹಿತದೃಷ್ಟಿಯಿಂದ ಸಾಮಾಜಿಕ ಪಿಡುಗು ಹಾಗೂ ತೊಂದರೆಗಳನ್ನು ನಿವಾರಿಸಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಓರ್ವ ನಿಷ್ಠಾವಂತ ಜನಪ್ರತಿನಿಧಿ ಆಗಿದ್ದಾರೆ. ಹೆಣ್ಣುಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಕೆ ನಮ್ಮ ಸಂಸದರ ಪ್ರಯತ್ನಕ್ಕೆ ದೊರೆತ ಬಲು ದೊಡ್ಡ ಯಶಸ್ಸು. ಅವರಲ್ಲಿನ ರಾಷ್ಟ್ರಾಭಿಮಾನ ನಮ್ಮೆಲ್ಲರಿಗೂ ಮಾದರಿ ಎಂದು ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದರು.

ಉಷಾ ಗೋಪಾಲ್ ಶೆಟ್ಟಿ, ನಿಟ್ಟೆ ಎಂ.ಜಿ ಶೆಟ್ಟಿ, ಜ್ಯೋತಿ ಶೆಟ್ಟಿ, ಕರುಣಾಕರ್ ಶೆಟ್ಟಿ (ಪೆÇಯಿಸರ್ ಜಿಮ್ಖಾನ), ರವೀಂದ್ರ ಎಸ್.ಶೆಟ್ಟಿ, ಶೈಲಜಾ ಅಮರನಾಥ್ ಶೆಟ್ಟಿ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಪ್ರಕಾಶ್ ಎ.ಶೆಟ್ಟಿ ಕಳತ್ತೂರು (ಎಲ್ಲೈಸಿ), ವಿಜಯ ಆರ್.ಭಂಡಾರಿ, ಮನೋಹರ್ ಎನ್.ಶೆಟ್ಟಿ, ಶಾಂತಾ ಎನ್.ಭಟ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಮತ್ತು ಸದಸ್ಯರನೇಕರು, ಬಿಜೆಪಿ ಧುರೀಣರು, ಕಾರ್ಯಕರ್ತರು ಉಪಸ್ಥಿತರಿದ್ದು ಸಂಸದರನ್ನು ಅಭಿನಂದಿಸಿದರು.

ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಸ್ವಾಗತಿಸಿದರು. ರಘುನಾಥ್ ಎನ್.ಶೆಟ್ಟಿ ಕಾಂದಿವಿಲಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ್ ಎಸ್.ಶೆಟ್ಟಿ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here